ಕನ್ನಡಪ್ರಭ ವಾರ್ತೆ ಕಲಾದಗಿಕಳಸಕೊಪ್ಪಕೆರೆ ಹಾಗೂ ಬದಾಮಿ ತಾಲೂಕಿನ 7 ಕೆರೆಗಳನ್ನು ಕೂಡಲೇ ತುಂಬಿಸಬೇಕು ಮತ್ತು ಹೇರಕಲ್ ಏತನೀರಾವರಿ (ದಕ್ಷಿಣ) ವಿಸ್ತೃತ ಯೋಜನೆ ಕಾಮಗಾರಿಯನ್ನೂ ಕೂಡಲೇ ಮುಗಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಕಳಸಕೊಪ್ಪಕೆರೆ ಹಾಗೂ ಬದಾಮಿ ತಾಲೂಕಿನ 7 ಕೆರೆಗಳನ್ನು ಕೂಡಲೇ ತುಂಬಿಸಬೇಕು ಮತ್ತು ಹೇರಕಲ್ ಏತನೀರಾವರಿ (ದಕ್ಷಿಣ) ವಿಸ್ತೃತ ಯೋಜನೆ ಕಾಮಗಾರಿಯನ್ನೂ ಕೂಡಲೇ ಮುಗಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.ಕೆರೂರು, ನರೆನೂರು, ಮಾಳಗಿ, ಚಿಂಚಲಕಟ್ಟಿ ಗ್ರಾಮದ ರೈತರು ಕಲಾದಗಿ ನಿರೀಕ್ಷಣಾ ಮಂದಿರ ಮುಂಭಾಗದಲ್ಲಿ ಸಭೆ ನಡೆಸಿ ಪ್ರಸಕ್ತ ವರ್ಷ ಬರಗಾಲ ಆವರಿಸಿದೆ. ಸರಿಯಾಗಿ ಮಳೆ ಆಗದೆ ಬೆಳೆಗಳು ಒಣಗಲಾರಂಬಿಸಿವೆ. ಕಾಮಗಾರಿ ಮುಗಿಸಿ ಕಾಲುವೆಗಳ ಮೂಲಕ ನೀರು ಹರಿಸಿದರೆ ರೈತರ ಬೆಳೆಗಳು ಉಳಿದು ರೈತ ಸಂಕಷ್ಠದಿಂದ ಪಾರಾಗಬಹುದು. ನಿಗದಿತ ಅವಧಿಯೊಳಗೆ ವಿಸ್ತ್ರತ ಯೋಜನೆ ಕಾಮಗಾರಿ ಮುಗಿದೇ ಇರುವುದರಿಂದ ರೈತರಿಗೆ ನೀರಾವರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಉತ್ತಮ ಮಳೆಯಾಗಿ ಕಷ್ಣಾ, ಘಟಪ್ರಭಾ ನದಿಗೆ ನೀರು ಹರಿದು ಬಂದು ಆಲಮಟ್ಟಿ ಆಣೆಕಟ್ಟಿನಲ್ಲಿ ನಲ್ಲಿ ನೀರು ತುಂಬಿಕೊಂಡಿದೆ.

ಕಳಸಕೊಪ್ಪ ಕೆರೆ ಸೇರಿ, ಬಾದಾಮಿ ತಾಲೂಕಿನ 7 ಕೆರೆ ತುಬಿಸಲು ಪ್ರಸಕ್ತವರ್ಷ ನೀರು ತುಂಬಲು ಇನ್ನೂ ಚಾಲನೆ ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟಿಸಿದರು.

ಕೆ.ಬಿ.ಜಿ.ಎಲ್.ಎಲ್ ಎಇಇ ವಿಶ್ವನಾಥ ನೀಲನ್ನವರ್ ಮಾತನಾಡಿ, ಹೇರಕಲ್ ದಕ್ಷಿಣ ವಿಸ್ತøತ ಯೋಜನೆ ಕಾಮಗಾರಿ ವಿಳಂಭಗೊಳ್ಳಲು ಯೊಜನೆಗೆ ಅಗತ್ಯ ಭೂಮಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೇ ಇರುವುದರಿಂದ ಕಾಮಗಾರಿ ವಿಳಂಭವಾಗಿದೆ. ಪರಿಹಾರ ಮೊತ್ತಕ್ಕೆ ರೈತರು ಒಪ್ಪದೇ ಇರುವುದರಿಂದ ರೈತರ ಭೂಮಿಯಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ ಮೇಲಧಿಕಾರಿಗಳ ಗಮನಕ್ಕೆ ತಂದು ರೈತರ ಜತೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು, ವಿದ್ಯುತ್ ಟ್ರಾನ್ಸಫಾರ್ಮರ್ ರಿಪೇರಿ ಇದ್ದ ಕಾರಣ ಕರೆಗೆ ನೀರು ತುಂಬಿಸಲು ಚಾಲನೆ ನೀಡಲು ಸಾಧ್ಯವಾಗಿಲ್ಲ. ಬೇರೆ ವಿದ್ಯುತ್ ಟ್ರಾನ್ಸ ಫಾರ್ಮರ್‌ ತರಿಲಾಗಿದ್ದು, ಅದನ್ನೂ ಜೋಡಿಸುವ ಕಾರ್ಯ ನಡೆದಿದೆ. ಟೆಕ್ನಿಕಲ್ ಸಮಸ್ಯೆ ಕಣಿಸಿಕೊಂಡಿದ್ದು, ಬೆಂಗಳೂರಿನಿಂದ ತಂಡ ಕರೆಯಿಸಿ ಕೂಡಿಸುವ ಕಾರ್ಯ ಮಾಡಿ ಬುಧವಾರ ಸಂಜೆಯೊಳಗೆ ಮಾಡಲಾಗುವುದು. ತಕ್ಷಣ ಕೆರೆಗೆ ನೀರು ತುಂಬಲು ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದಬಳಿಕ ರೈತರು ತಮ್ಮ ಪ್ರತಿಭಟನೆ ಹಿಂಪಡೆದರು.

ಬಾಗಲಕೋಟೆ ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮಾರ ಮಾತನಾಡಿ, ಅಧಿಕಾರಿಗಳು ಯಾವುದೇ ಯೋಜನೆ ಪೂರ್ಣಗೊಳಿಸಲು ಇಚ್ಛಾಶಕ್ತಿ ತೋರಬೇಕು. ಇದರಿಂದ ನಿಮಗೂ ಹೆಸರು ಬರುತ್ತೆ ಮತ್ತು ರೈತರಿಗೂ ಅನುಕೂಲವಾಗುತ್ತದೆ, ವಿಸ್ತ್ರತ ಯೋಜನೆ ಪೂರ್ಣಗೊಳ್ಳಲು ರೈತರು ಸಹಕಾರ ನೀಡಬೇಕು ಮತ್ತು ರೈತರು ಸಹ ಅಧಿಕಾರಿಗಳ ಜತೆ ನಿಲ್ಲಬೇಕು ಎಂದರು.

ರೈತಪರ ಹೋರಾಟ ಮುಖಂಡ ಯಲ್ಲಪ್ಪ ಹೆಗಡೆ, ಸಿದ್ದಪ್ಪ ಬಳಗಾನೂರು, ಸದಾಶಿವ ಆಗೋಜಿ, ಗೊವಿಂದಪ್ಪ ಬೆಳಗಂಟಿ, ಕಾಶಿಲಿಂಗ ಮೆಳ್ಳಿಗೇರಿ, ಭರಮಪ್ಪ ಉದಗಟ್ಟಿ, ಯಲ್ಲಪ್ಪ ಉಪ್ಪಾರ, ರೇವಣಸಿದ್ದಪ್ಪ ಕಲಾಲ ಇನ್ನಿತರರು ಇದ್ದರು.