ಶೀಘ್ರ ಲಕ್ಕುಂಡಿ ಕೆರೆ ತುಂಬಿಸದಿದ್ದರೆ ರೈತರಿಂದ ಪ್ರತಿಭಟನೆ

| Published : Aug 23 2024, 01:00 AM IST

ಶೀಘ್ರ ಲಕ್ಕುಂಡಿ ಕೆರೆ ತುಂಬಿಸದಿದ್ದರೆ ರೈತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ನದಿಯ ನೀರನ್ನು ಸಿಂಗಟಾಲೂರು ಏತ ನೀರಾವರಿ ಮೂಲಕ ಗ್ರಾಮದ ಪಕ್ಕದ ಜಮೀನುಗಳಲ್ಲಿ ನಿರ್ಮಿಸಿರುವ ಕಾಲುವೆಯಲ್ಲಿ ಹರಿಸಬೇಕಾಗಿದೆ

ಗದಗ: ಸಿಂಗಟಾಲೂರ ಏತ ನೀರಾವರಿ ಯೋಜನೆಯಿಂದ ಕಾಲುವೆ ಮೂಲಕ ನೀರು ಹರಿಸಿ ಬತ್ತುತ್ತಿರುವ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿನ ಎರಡು ಬೃಹತ್ ಕೆರೆಗಳನ್ನು ತುಂಬಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಪದಾಧಿಕಾರಿಗಳು, ಲಕ್ಕುಂಡಿ ಗ್ರಾಮದಲ್ಲಿರುವ ಹಾಲಗೊಂಡ ಬಸವೇಶ್ವರ ಕೆರೆ ಹಾಗೂ ದಂಡಿನ ದುರ್ಗಾದೇವಿ ಕೆರೆಯಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಅಂತರ್ಜಲ ಕುಸಿತವಾಗುತ್ತಿದೆ. ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ನೀರನ್ನು ಸಿಂಗಟಾಲೂರು ಏತ ನೀರಾವರಿ ಮೂಲಕ ಗ್ರಾಮದ ಪಕ್ಕದ ಜಮೀನುಗಳಲ್ಲಿ ನಿರ್ಮಿಸಿರುವ ಕಾಲುವೆಯಲ್ಲಿ ಹರಿಸಬೇಕಾಗಿದೆ.

2014ರಲ್ಲಿ ಕೆರೆಗೆ ನೀರು ಪೂರೈಕೆ ಮಾಡಿದಂತೆ ಈ ಸಲ ನೀರನ್ನು ಭರ್ತಿ ಮಾಡಿದಲ್ಲಿ ರೈತರಿಗೆ ಅನುಕೂಲವಾಗುತ್ತಿದೆ. 90 ದಿನಗಳ ಮಾತ್ರ ಕಾಲುವೆಯಲ್ಲಿ ನೀರನ್ನು ಬಿಡಲಾಗುತ್ತಿದ್ದು, ಈಗಾಗಲೇ 25 ದಿನಗಳು ಕಳೆದಿದೆ. ಪಕ್ಕದ ಡಂಬಳ ಕೆರೆ ತುಂಬಿಸಲಾಗಿದೆ. ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳು ಲಕ್ಕುಂಡಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಮೋಟಾರು ಯಂತ್ರಗಳು ಕೆಟ್ಟಿದ್ದು, ದುರಸ್ತಿ ಮಾಡಿದ ಆನಂತರ ಪೂರೈಕೆ ಮಾಡಲಾಗುವುದು ಎಂದು ಹೇಳುತ್ತಾರೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೊಂಗಡೆ, ಗ್ರಾಪಂ ಮಾಜಿ ಉಪಾಧ್ಯಕ್ಷ, ಸದಸ್ಯ ರೇವಣಸಿದ್ದಪ್ಪ ಮುಳಗುಂದ, ಗ್ರಾಪಂ ಮಾಜಿ ಸದಸ್ಯ ಪ್ರಕಾಶ ಅರಹುಣಶಿ, ಮಂಜುನಾಥ ಕವಲೂರು, ರಮೇಶ ನೂಕಾಪುರ, ಬಸಪ್ಪ ರಿತ್ತಿ ಹಾಗೂ ಹಲವಾರು ರೈತರು ತಿಳಿಸಿದ್ದಾರೆ.