ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ರಾಜ್ಯದ ರೈತರ ಶ್ರೇಯೋಭಿವೃದ್ಧಿಗಾಗಿ ಮತ್ತು ಅವರ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಿಯಾಯಿತಿ ದರದಲ್ಲಿ, ಗುಣಮಟ್ಟದ ಬೀಜ ಗೊಬ್ಬರ, ಯಂತ್ರೋಪಕರಣಗಳನ್ನು ನೀಡುತ್ತಿದೆ. ರೈತರು ಮಧ್ಯವರ್ತಿಗಳನ್ನು ನಂಬದೆ ಯಾರಿಗೂ ಲಂಚ ಕೊಡದೇ ಆಯಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಬೀಜ, ಕೃಷಿ ಸಲಕರಣೆಗಳನ್ನು ಪಡೆದುಕೊಳ್ಳಿ. ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಮಗದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ರೈತರಿಗೆ ಕಿವಿಮಾತು ಹೇಳಿದರು.ಪಟ್ಟಣದ ತಾಲೂಕು ಕೃಷಿ ಇಲಾಖೆ ಕಚೇರಿ ರೈತ ಸಂಪರ್ಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 2024-25ನೇ ಹಿಂಗಾರು ಹಂಗಾಮಿನ ಬೀಜ ಹಾಗೂ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು. ಈಗಾಗಲೇ ರಾಜ್ಯದಲ್ಲಿ ಎಲ್ಲೆಡೆ ಉತ್ತಮ ಮಳೆಯಾಗಿದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹೀಗಾಗಿ, ಹಿಂಗಾರು ಬಿತ್ತನೆಗಾಗಿ ರೈತರು ತಯಾರಿ ನಡೆಸಿದ್ದಾರೆ ಎಂದರು.ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ರೈತರಿಗೂ ಸಕಾಲಕ್ಕೆ ಬೀಜ, ಅಗತ್ಯ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲು ಮುಂದಾಗಿದೆ. ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ. ಎಲ್ಲ ರೈತರಿಗೂ ಸಮರ್ಪಕ ಬೀಜ ಹಾಗೂ ಕೃಷಿ ಸಲಕರಣೆಗಳನ್ನು ನೀಡುವ ಜೊತೆಗೆ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಪಡಿಸುವುದರೊಂದಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ರೈತರ ಬೆನ್ನೆಲುಬಾಗಿ ಸರ್ಕಾರ, ಕೃಷಿ ಇಲಾಖೆ ಇರಲಿದೆ ಎಂದು ಅಭಯ ನೀಡಿದರು.
ಸಾಮಾನ್ಯ ವರ್ಗದ ರೈತರಿಗೆ ಕಡಲೆ ಜೆಜಿ11 ತಳಿಯ ಬೀಜಕ್ಕೆ ಪ್ರತಿ ಕಿಲೋಗೆ ₹ 98.5 ನಿಗಡಿ ಪಡಿಸಿದ್ದು, ₹ 25 ಸಬ್ಸಿಡಿಯೊಂದಿಗೆ ಪ್ರತಿ 20 ಕಿಲೋ ಪ್ಯಾಕೇಟ್ ಗೆ ₹1470, ಜೋಳ ಎಂ35 ತಳಿಯ ಬೀಜಕ್ಕೆ ಪ್ರತಿ ಕಿಲೋಗೆ ₹76.5 ನಿಗದಿಪಡಿಸಿದ್ದು, 3 ಕಿಲೋ ಪ್ಯಾಕೇಟ್ ಗೆ ₹ 169.50 ಇದೆ. ಎಸ್ಸಿ, ಎಸ್ಟಿ ಸಮುದಾಯದ ರೈತರಿಗೆ 20 ಕಿಲೋ ಪ್ಯಾಕೇಟ್ ಗೆ ₹1220, ಪ್ರತಿ 3 ಕಿಲೋ ಪ್ಯಾಕೇಟ್ ಗೆ ₹ 139.50 ಆಗಲಿದೆ. ಪಟ್ಟಣದ ತಾಲೂಕು ಕೃಷಿ ಕೇಂದ್ರ ಹಾಗೂ ತಮ್ಮ ವ್ಯಾಪ್ತಿಯ ಹೋಬಳಿ ಮಟ್ಟದ ರೈತರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರ ಬಾಳಿಗೆ ಬೆಳಕು ಚೆಲ್ಲುವಂತೆ ಮಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾತಿ ತಿಳಿಸಿದರು.ಈ ವೇಳೆ ಜಿಲ್ಲಾ ಉಪ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ, ತಾಲೂಕು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಅರವಿಂದ ಹೂಗಾರ, ಢವಳಗಿ ರೈತ ಸಂಪರ್ಕ ಕೆಂದ್ರ ಅಧಿಕಾರಿ ಗೋವಿಂದಗೌಡ ಮೆದಿಕಿನಾಳ, ತಾಂತ್ರಿಕ ಕೃಷಿ ಅಧಿಕಾರಿ ರಾಜೇಶ್ವರಿ ನಾಡಗೌಡ, ನಿವೃತ್ತ ಕೃಷಿ ಇಲಾಖೆ ಅಧಿಕಾರಿ ಎಸ್.ಆರ್.ಕಟ್ಟಿಮನಿ, ಕೃಷಿ ಇಲಾಖೆಯ ಸಿಬ್ಬಂದಿಗಳಾದ ಶ್ರೀಶೈಲ ಪೂಜಾರಿ, ರೇವಣಪ್ಪ ನಡಿಗೇರಿ, ನಿರಂಜನ ಬಡಿಗೇರ, ಅಲ್ತಾಫ್ ಗುನ್ನಾಪೂರ ಸೇರಿ ಇತರರು ಇದ್ದರು.
1ಎಂಬಿಎಲ್1: ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರ ಮಾರ್ಗದಲ್ಲಿರುವ ತಾಲೂಕಾ ಕೃಷಿ ಇಲಾಖೆ ಕಚೇರಿ ರೈತ ಸಂಪರ್ಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಹಿಂಗಾರು ಹಂಗಾಮಿನ ಬೀಜ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಮಗದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಯವರು7 ಮಂಗಳವಾರ ರೈತರಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.---------
ಕೋಟ್...........ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಜಮೀನಿನ ಅಗತ್ಯ ದಾಖಲೆಗಳನ್ನು ನೀಡಿ ಬೀಜಗಳನ್ನು ಪಡೆದುಕೊಳ್ಳಬಹುದು. ಕಲಬೆರಿಕೆ ಕಳಪೆ ಮಟ್ಟದ ಬೀಜ, ಗೊಬ್ಬರ, ಕ್ರೀಮಿನಾಶಕ ಔಷಧ ಮಾರಾಟ ಮಾಡುತ್ತಿರುವುದು ಕಂಡುಬಂದರೆ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಬೇಕು. ಅಂತವರನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
- ಸಿ.ಎಸ್.ನಾಡಗೌಡ, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ.