ಸಾರಾಂಶ
ಯಾವ ಕಾರಣಕ್ಕೂ ರೈತರು ಜಮೀನನ್ನು ಮಾರಾಟ ಮಾಡಬೇಡಿ. ಜಮೀನು ಉಳಿಸಿಕೊಂಡರೆ ನಿಮ್ಮ ಕುಟುಂಬಗಳು ಉಳಿಯುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿಗಳು ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಯಾವ ಕಾರಣಕ್ಕೂ ರೈತರು ಜಮೀನನ್ನು ಮಾರಾಟ ಮಾಡಬೇಡಿ. ಜಮೀನು ಉಳಿಸಿಕೊಂಡರೆ ನಿಮ್ಮ ಕುಟುಂಬಗಳು ಉಳಿಯುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿಗಳು ತಿಳಿಸಿದರು.ತಾಲೂಕಿನ ಕೆ.ಜಿ. ಟೆಂಪಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾಳಕಂಠೇಶ್ವರಿ ಪತ್ತಿನ ಸಹಕಾರಿ ಸಂಘ, ಚಾಲುಕ್ಯ ಕ್ಲಿನಿಕ್ ಹಾಗೂ ಜಿವಿಟಿ ಕಾಂಪ್ಲೆಸ್ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೃಷಿಯಿಂದ ಸಂಪಾದಿಸಿದ ಹಣವನ್ನು ದುಶ್ಚಟಗಳಿಗೆ ಬಳಸದೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಸಂಸಾರದ ಅಭಿವೃದ್ಧಿಗೆ ಬಳಸಿಕೊಳ್ಳಿ ಎಂದರು. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಮಾತನಾಡಿ, ಈ ದೇಶದ ರೈತರು ಈ ದೇಶದ ಜೀವನಾಡಿಯಾಗಿದ್ದು ಅವರನ್ನು ಗೌರವಿಸುವಂತಹ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ರೈತರು ಬಲಿಷ್ಠರಾದಾಗ ಮಾತ್ರ ದೇಶವು ಸಹ ಬಲಿಷ್ಠವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಅರೆ ಶಂಕರ ಮಠದ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ, ಶಾಸಕ ಎಸ್.ಆರ್. ಶ್ರೀನಿವಾಸ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು, ಕೆ.ಎನ್.ಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ಚಾಲುಕ್ಯ ಆಸ್ಪತ್ರೆ ಸಿಇಒ ಡಾ. ನಾಗಭೂಷಣ್, ಕಳ್ಳಿಪಾಳ್ಯ ಲೋಕೇಶ್, ಗಾಳಿಕಂಠೇಶ್ವರ ದೇವಸ್ಥಾನದ ಅಶೋಕ್, ಎಸ್ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಣ್ಣ ಹಾಜರಿದ್ದರು.