ಸಾರಾಂಶ
ತಾಲೂಕಿನ ಅರಸಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜು ವಿರುದ್ದ ೧೫೦ಕ್ಕೂ ಅಧಿಕ ಹಾಲು ಉತ್ಪಾದಕ ರೈತರು ಹಾಲು ಹಾಕುವುದನ್ನೇ ನಿಲ್ಲಿಸಿ ಡೈರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಅರಸಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾಗರಾಜು ವಿರುದ್ದ ೧೫೦ಕ್ಕೂ ಅಧಿಕ ಹಾಲು ಉತ್ಪಾದಕ ರೈತರು ಹಾಲು ಹಾಕುವುದನ್ನೇ ನಿಲ್ಲಿಸಿ ಡೈರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆದೇಶದಂತೆ ಅರಸಾಪುರದಲ್ಲಿ ಕಳೆದ ೮ ವರ್ಷದ ಹಿಂದೆ ಪ್ರಾರಂಭವಾದ ಡೈರಿಯು ಈಗ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಪರಿಶೀಲನೆ ನಡೆಸಬೇಕಾದ ಮೇಲ್ವಿಚಾರಕಿ ಮತ್ತು ಸೂಪರ್‌ವೈಸರ್ ಕೇಂದ್ರಸ್ಥಾನದಲ್ಲೇ ವಾಸವಿಲ್ಲ. ಉಸ್ತುವಾರಿ ವಹಿಸಬೇಕಾದ ನಿರ್ದೇಶಕರಿಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಹಾಲಿನ ಜೊತೆ ಚೆಲ್ಲಾಟ ಆಡೋದು ಎಷ್ಟು ಸರಿ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.೧೫೦ಜನ ರೈತರಿಂದ ೧೨೦೦ಲೀ ಹಾಲು ಅರಸಾಪುರ, ಮಾದೇನಹಳ್ಳಿ, ಅಗ್ರಹಾರ, ಅರಸಾಪುರ ತಾಂಡ, ಮಾದೇನಹಳ್ಳಿ ತಾಂಡ, ಹೊಸಪಾಳ್ಯ ಸೇರಿ ೮ಗ್ರಾಮದ ೧೫೦ಕ್ಕೂ ಅಧಿಕ ರೈತರಿಂದ ಪ್ರತಿನಿತ್ಯ ೧೨೦೦ಲೀ ಹಾಲು ಶೇಖರಣೆ ಆಗುತ್ತದೆ. ಮುಂಜಾನೆ ಬಂದ್ರು ೫ಗಂಟೆಯಿಂದ ೭ಗಂಟೆವರೆಗೆ ರೈತರು ಸರತಿ ಸಾಲಿನಲ್ಲಿ ನಿಲ್ಲುವ ದುಸ್ಥಿತಿಯಿದೆ. ಡೈರಿಯ ಸಿಬ್ಬಂದಿ ಕೊರತೆಯ ಬಗ್ಗೆ ಮೇಲ್ವಿಚಾರಕಿ ಅಥವಾ ಸೋಪರ್ ವೈಸರ್‌ನಿಂದ ಪರಿಶೀಲನೆ ನಡೆಯದೇ ಲೋಪವಾಗಿದೆ.ತುಮಕೂರು ಹಾಲು ಒಕ್ಕೂಟದಿಂದ ೫ಲಕ್ಷ, ಕರ್ನಾಟಕ ಹಾಲು ಮಹಾಮಂಡಳಿಯಿಂದ ೫ಲಕ್ಷ, ಧರ್ಮಸ್ಥಳ ಸಂಘದಿಂದ ೨ಲಕ್ಷ ಹಾಗೂ ಅರಸಾಪುರ ಹಾಲು ಉತ್ಪಾದಕರ ಸಂಘದಿಂದ ೬ಲಕ್ಷ ಸೇರಿ ೧೮ಲಕ್ಷದಲ್ಲಿ ನೂತನ ಡೈರಿಯ ಕಟ್ಟಡ ನಿರ್ಮಾಣ ಆಗಿದೆ. ಡೈರಿಯ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯ ದಿವ್ಯನಿರ್ಲಕ್ಷದಿಂದ ಕಾಮಗಾರಿ ಸ್ಥಗಿತವಾಗಿ ೨ತಿಂಗಳು ಕಳೆದಿದೆ. ೫೦೦ ರು. ಬಾಡಿಗೆ ಕಟ್ಟಡದಲ್ಲಿ ಹಾಲಿನ ವಹಿವಾಟು ನಡೆಯುತ್ತಿದ್ದು ಪ್ರತಿನಿತ್ಯ ರೈತರಿಗೆ ಸಂಕಟದ ಹಿಂಸೆಯಾಗಿದೆ.ಬಾಕ್ಸ್
೩೦೦ಲೀ ಹಾಲು ನಿತ್ಯ ಲೋಕಲ್‌ಸೇಲ್..ಅರಸಾಪುರ ಡೈರಿಯಲ್ಲಿ ಪ್ರತಿನಿತ್ಯ ೧೨೦೦ಲೀ ಹಾಲು ಶೇಖರಣೆ ಆಗುತ್ತದೆ. ಅದರಲ್ಲಿ ಬೆಳಿಗ್ಗೆ ೧೫೦ಲೀ ಮತ್ತು ಸಂಜೆ ೧೫೦ಲೀ ಹಾಲು ಲೋಕಲ್‌ಸೇಲ್ ರೂಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡ್ತಾರೇ. ಇದರಿಂದ ಡೈರಿಗೆ ಪ್ರತಿನಿತ್ಯ 5500-6000 ಆದಾಯ ಬರ್ತಿದೆ. ಲೋಕಲ್‌ಸೇಲ್ ಮಾರಾಟದಿಂದ ಬರುವ ಆದಾಯದಲ್ಲಿ ರೈತರಿಗೆ ನಯಾಪೈಸೆಯು ಬರ್ತೀಲ್ಲ ಎಂಬುದು ಹಾಲು ಉತ್ಪಾದಕರ ಆರೋಪ. ಕೋಟ್ ಬಳಸಿ ಪ್ರತಿನಿತ್ಯದ ಹಾಲಿನ ಚೀಟಿ ಕೇಳಿದ್ರೇ ಡೈರಿ ಕಾರ್ಯದರ್ಶಿ ನೀಡೊದಿಲ್ಲ. ನಾವು ೧೫ದಿನ ಹಾಕಿದ ಹಾಲಿನ ಮಾಹಿತಿ ಕೇಳಿದ್ರೇ ಕೋಡೊದಿಲ್ಲ. ೧ಲೀ ಹಾಲಿಗೆ ನಮಗೇ ೨೬ ರು. ನೀಡ್ತಾರೇ ನಮ್ಮ ಮುಂದೆಯೇ ೪೪ರು.ಗೆ ಮಾರಾಟ ಮಾಡ್ತಾರೇ. ನಾವು ಪ್ರಶ್ನೆ ಮಾಡಿದ್ರೇ ಹಾಲಿ ಫ್ಯಾಟ್ ಬರ್ತೀಲ್ಲ ಎಂದು ಹಿಂದಕ್ಕೆ ಕಳಿಸ್ತಾರೇ. ಸೂಪರ್‌ವೈಸರ್ ಮತ್ತು ಮೇಲ್ವಿಚಾರಕಿಗೆ ಕರೆ ಮಾಡಿದ್ರೇ ಉಡಾಫೆ ಉತ್ತರ ನೀಡ್ತಾರೇ.ರಂಜಿತ್. ಹಾಲು ಉತ್ಪಾದಕ ರೈತ. ಅರಸಾಪುರ.-------------ಡೈರಿಯಲ್ಲಿ ಸ್ಥಳೀಯವಾಗಿ ಹಾಲು ಮಾರಾಟಕ್ಕೆ ಅವಕಾಶ ಇಲ್ಲ. ಅರಸಾಪುರ ರೈತರ ಹಿತದೃಷ್ಟಿಯಿಂದ ಪ್ರತಿನಿತ್ಯ ೧೫೦ಲೀ ಲೋಕಲ್‌ಸೇಲ್ ಹೋಗುತ್ತೆ. ಹಾಲಿನ ಫ್ಯಾಟ್‌ನಲ್ಲಿ ವ್ಯತ್ಯಾಸ ಆದ್ರೇ ಡೈರಿ ಮತ್ತು ರೈತರಿಗೆ ನಷ್ಟ ಆಗುತ್ತೇ. ಹಾಲಿನ ಫ್ಯಾಟ್ ವಿಚಾರದಲ್ಲಿ ಕಾರ್ಯದರ್ಶಿ ಮತ್ತು ರೈತರ ನಡುವೆ ಗಲಾಟೆ ಆಗಿರೋದು ಸತ್ಯ.
ಪುಪ್ಪಲತಾ. ಮೇಲ್ವಿಚಾರಕಿ. ಕೊರಟಗೆರೆ--------------