ರೈತ ಹನುಮಂತ ಕೆಂಚನಗುಡ್ಡ ಗ್ರಾಮದ ನಿವಾಸಿಯಾಗಿದ್ದು, ಹೆಂಡತಿಯ ಊರಾದ ಕೂರಿಗನೂರು ಗ್ರಾಮದಲ್ಲಿ ವಾಸವಾಗಿದ್ದರು. ಊರ ಹೊರಗಿನ ಕೆರೆಯ ಬಳಿ ಇರುವ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ತೆಕ್ಕಲಕೋಟೆ: ಸಮೀಪದ ಕರೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೂರಿಗನೂರು ಗ್ರಾಮದಲ್ಲಿ ರೈತ ಕುರುಬರ ಹನುಮಂತ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಬೆಳೆಗಾಗಿ ಸಾಲ ಮಾಡಿದ್ದ, ಅಲ್ಲದೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟು, ಬರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬೆಳೆಗಾಗಿ ₹1 ಲಕ್ಷ ಸಾಲ ಹಾಗೂ ಇತರರಲ್ಲಿ ₹2 ಲಕ್ಷ ಕೈ ಸಾಲ ಒಟ್ಟು ₹3 ಲಕ್ಷ ಸಾಲ ಮಾಡಿದ್ದಾರು ಎಂದು ಹೇಳಿದ್ದಾರೆ.

ರೈತ ಹನುಮಂತ ಕೆಂಚನಗುಡ್ಡ ಗ್ರಾಮದ ನಿವಾಸಿಯಾಗಿದ್ದು, ಹೆಂಡತಿಯ ಊರಾದ ಕೂರಿಗನೂರು ಗ್ರಾಮದಲ್ಲಿ ವಾಸವಾಗಿದ್ದರು. ಊರ ಹೊರಗಿನ ಕೆರೆಯ ಬಳಿ ಇರುವ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಕೂರಿಗನೂರು ಗ್ರಾಮದಲ್ಲಿ 5 ಎಕರೆ ಸಾಗುವಳಿ ಮಾಡುತ್ತಿದ್ದರು. ಅಲ್ಲದೆ ಕೆಂಚನಗುಡ್ಡದಲ್ಲಿ 0.75 ಸೆಂಟ್ಸ್ ಭೂಮಿಯನ್ನು ಮೃತ ರೈತ ಹೊಂದಿದ್ದಾನೆ. ಈ ಬಗ್ಗೆ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ವ್ಯವಹಾರ: ವ್ಯಕ್ತಿಯ ಕೊಲೆ

ಕುರುಗೋಡು: ತಾಲೂಕಿನ ಯಲ್ಲಾಪುರ ಕ್ರಾಸ್‌ನ ನರ್ಸರಿಯೊಂದರ ಬಳಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ತಡರಾತ್ರಿ ಜರುಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ವ್ಯಕ್ತಿಯನ್ನು ಕುರುಗೋಡಿನ ಉಜ್ಜಳಪೇಟೆ ನಿವಾಸಿ ಎನ್. ಉಮಾಶಂಕರ (38) ಎಂದು ಗುರುತಿಸಲಾಗಿದೆ. ಉಮಶಂಕರ ಅವರು ಪೊಲೇಪಲ್ಲಿ ಅರುಣಕುಮಾರ್ ಅವರಿಗೆ ₹60 ಸಾವಿರ ಮೌಲ್ಯದ ನರ್ಸರಿ ಗೊಬ್ಬರ ಮಾರಾಟ ಮಾಡಿ ₹ 50 ಸಾವಿರ ನಗದು ಪಡೆದಿದ್ದರು. ಭಾನುವಾರ ರಾತ್ರಿ ಉಳಿದ ₹10 ಸಾವಿರ ಕೊಡುವ ವಿಷಯದಲ್ಲಿ ಜಗಳ ವಿಕೋಪಕ್ಕೆ ತಿರುಗಿದಾಗ ಪೊಲೇಪಲ್ಲಿ ಅರುಣಕುಮಾರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಘಟನೆಗೆ ಕುರಿತಂತೆ ಆಂಧ್ರಪದೆಶದ ಕಡಪ ಜಿಲ್ಲೆಯ ವೇಮಾಪಲ್ಲಿ ಗ್ರಾಮದ ಪೊಲೇಪಲ್ಲಿ ಅರುಣಕುಮಾರ್ (25), ಕುರುಗೋಡಿನ ಹಂಡಿ ಹನುಮಂತ ಮತ್ತು ಯಲ್ಲಾಪುರ ಮಂಜುನಾಥ ಅವರನ್ನು ಬಂಧಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಡಿ. ಪೆನ್ನೆಕರ್, ಡಿವೈಎಸ್ಪಿ ಪ್ರಸಾದ ಗೋಖಲೆ, ಸಿಪಿಐ ಬಾಳನಗೌಡ, ಪಿಎಸ್ಐ ಸುಪ್ರಿತ್ ವಿರೂಪಾಕ್ಷಿ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು. ಸಹೋದರ ಎನ್. ಎರಿಶಂಕರ ನೀಡಿದ ದೂರಿನನ್ವಯ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.