ಸಂತೆಯಲ್ಲಿ ಸುಂಕ ವಸೂಲಿ ಖಂಡಿಸಿ ಗುಂಡ್ಲುಪೇಟೆಯಲ್ಲಿ ರೈತಸಂಘ ಪ್ರತಿಭಟನೆ

| Published : Jul 09 2024, 12:53 AM IST

ಸಂತೆಯಲ್ಲಿ ಸುಂಕ ವಸೂಲಿ ಖಂಡಿಸಿ ಗುಂಡ್ಲುಪೇಟೆಯಲ್ಲಿ ರೈತಸಂಘ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಸೋಮವಾರ ಸಂತೆಯಲ್ಲಿ ಟೆಂಡರ್ ಕರೆಯದೆ ಜಾನುವಾರುಗಳಿಗೆ ಸುಂಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಸಾಮೂಹಿಕ ರೈತಸಂಘದ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಟೆಂಡರ್‌ ಕರೆಯದೆ ಹಣ ವಸೂಲಿ ವಿರುದ್ಧ ಪೊಲೀಸರಿಗೆ ದೂರು

ಕನ್ನಡಪ್ರಭ ವಾರ್ತೆ ಗುಂಡುಪೇಟೆ

ತಾಲೂಕಿನ ಬೇಗೂರು ಗ್ರಾಮದ ಸೋಮವಾರ ಸಂತೆಯಲ್ಲಿ ಟೆಂಡರ್ ಕರೆಯದೆ ಜಾನುವಾರುಗಳಿಗೆ ಸುಂಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಸಾಮೂಹಿಕ ರೈತಸಂಘದ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಕಳೆದ ವಾರ ರೈತಸಂಘದ ಕಾರ್ಯಕರ್ತರ ಪ್ರತಿಭಟನೆಯ ಹಿನ್ನಲೆ ಜಾನುವಾರುಗಳ ಸುಂಕ ವಸೂಲಿ ನಿಲ್ಲಿಸಿದೆ, ಟೆಂಡರ್‌ ಕರೆಯದೆ ಹಣ ವಸೂಲಿ ಮಾಡಿರುವ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖಂಡ ಹೊನ್ನೂರು ಪ್ರಕಾಶ್‌ ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ರೈತಸಂಘದ ಹೋರಾಟಕ್ಕೆ ಸುಂಕ ನಿಲ್ಲಿಸಿದ್ದು ಮೊದಲನೇ ಜಯವಾಗಿದೆ. ಅಕ್ರಮವಾಗಿ ವಸೂಲಿ ಮಾಡಿರುವ ಹಣವನ್ನು ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಬೇಕು, ಈ ದಂಧೆಯಲ್ಲಿ ಭಾಗಿಯಾಗದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಅಕ್ರಮ ಹಣ ವಸೂಲಿ ವಸೂಲಿ ಮಾಡಿರುವ ಬಗ್ಗೆ ಬೇಗೂರು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಕಳುಹಿಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ವೀರನಪುರದ ನಾಗಪ್ಪ, ಕಮರಳ್ಳಿ ಪ್ರಸಾದ್, ಉತ್ತಂಗೆರೆಹುಂಡಿ ಮಹೇಶ್, ಮಾಡ್ರಹಳ್ಳಿ ಪಾಪಣ್ಣ, ಪುಟ್ಟೇಗೌಡ, ಹಸುಗೂಲಿ ಮಹೇಶ್, ಕಬ್ಬಳ್ಳಿ ಪ್ರಕಾಶ್, ಕೇಶವ, ಕೂತನೂರ್ ಗಣೇಶ್, ಅಗತಗೌಡನಹಳ್ಳಿ ಜಗದೀಶ್ ಸೇರಿ ಹಲವರಿದ್ದರು.

ಗ್ರಾಪಂ ಸಂತೆ ಸಂಬಂಧ ಟೆಂಡರ್‌ ಕರೆದರೂ ಜಾನುವಾರುಗಳಿಗೆ ಸುಂಕ ವಸೂಲಿ ಮಾಡುವುದು ಬೇಡ. ಸುಂಕ ವಸೂಲಿಗೆ ಗ್ರಾಪಂ ಮುಂದಾದರೆ ಮತ್ತೆ ರೈತಸಂಘ ಹೋರಾಟ ನಡೆಸುತ್ತದೆ.

ಹೊನ್ನೂರು ಪ್ರಕಾಶ್‌, ರೈತ ಮುಖಂಡ.