ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜನ ಸಾಮಾನ್ಯರಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿಕೊಡಲು ಅಗತ್ಯ ಕ್ರಮ ವಹಿಸುವ ಬಗ್ಗೆ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಘಟಕದ ಪದಾಧಿಕಾರಿಗಳ ಸಭೆ ನಡೆಯಿತು.ಪಟ್ಟಣದ ಶ್ರೀ ರಂಗನಾಯಕಿ ಸ್ತ್ರೀ ಸಮಾಜದಲ್ಲಿ ಸಂಸ್ಥೆ ರಾಜ್ಯ ಕಾರ್ಯದರ್ಶಿ ಕಿರಂಗೂರು ವಿಜಯ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ ಕೆಲಸ, ಕಾರ್ಯ ಹಾಗೂ ಪದಾಧಿಕಾರಿಗಳ ಸಭೆ ನಡೆಸುವ ಸಂಬಂದ್ಧ ತ್ವರಿತವಾಗಿ ಕಚೇರಿ ತೆರೆಯಲು ತೀರ್ಮಾನಿಸಲಾಯಿತು.
ಪ್ರಸ್ತುತ ಎಲ್ಲೆಡೆ ಡೆಂಘೀ ಉಲ್ಬಣವಾಗುತ್ತಿದೆ. ಟೌನ್ ಸೇರಿದಂತೆ ಇತರೆಡೆಗಳಲ್ಲಿ ಎಳನೀರು ಮಾರಾಟ ಮಾಡುವವರು ಎಳನೀರು ಚಿಪ್ಪನ್ನು ಅಲ್ಲಲ್ಲೆ ಬಿಸಾಡುತ್ತಿದ್ದಾರೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಈ ಸಂಬಂಧ ಪುರಸಭೆಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದು ಎಳನೀರು ಮಾರಾಟ ಮಾಡುವವರೇ ಸ್ವಚ್ಚತೆ ಮಾಡುವಂತೆ ತಿಳಿಹೇಳುವ ಕೆಲಸ ಮಾಡಲು ನಿರ್ಧರಿಸಲಾಯಿತು.ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂಬಂಧ ರೋಗಿಗಳಿಂದ ಹಣ ಕೇಳುತ್ತಿರುವುದಾಗಿ ಕೇಳಿ ಬರುತ್ತಿದೆ. ಬಡವರಿಗೆ ಉಚಿತ ಆರೋಗ್ಯ ಸಿಗುತ್ತಿದೆಯೇ? ಇಲ್ಲವೆ ಎಂಬುದರ ಪರಿಶೀಲಿಸಿ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು ಎಂದು ಪದಾಧಿಕಾರಿಗಳಿಗೆ ತಿಳಿಸಲಾಯಿತು.
ತಾಲೂಕು ಕಚೇರಿ ಸೇರಿದಂತೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ಪದಾಧಿಕಾರಿಗಳು ಭೇಟಿ ನೀಡಿ ಜನ ಸಾಮಾನ್ಯರಿಗೆ ಸರ್ಕಾರದ ಸವಲತ್ತುಗಳನ್ನು ದೊರೆಕಿಸಿಕೊಡುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.ಈ ವೇಳೆ ಪದಾಧಿಕಾರಿಗಳಾದ ಆಶಾಲತಾ ಪುಟ್ಟೇಗೌಡ, ಸರಸ್ವತಿ, ಡಾ. ರಾಂಪುರ ನಾಗರಾಜು, ಚಂದ್ರಶೇಖರ್, ಎನ್. ಲೋಕೇಶ್, ವಿಜೇಂದ್ರ ಪುಟ್ಟು, ನವೀನ್‌ಕುಮಾರ್, ಡಾ. ರಾಘವೇಂದ್ರ, ಶಿವಕುಮಾರ್ ಇದ್ದರು.
ಕಾಡಾನೆಗಳ ದಾಳಿ ತೆಗೆದ ಮರಗಳು ನಾಶ, ಅಪಾರ ನಷ್ಟಹಲಗೂರು:ಕಾಡಾನೆಗಳ ದಾಳಿಯಿಂದ ಜಮೀನಿನಲ್ಲಿ ಬೆಳೆಯಲಾಗಿದ್ದ ತೇಗದ ಮರಗಳು ನಾಶವಾಗಿರುವ ಘಟನೆ ಸಮೀಪದ ಎಚ್. ಬಸಾಪುರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಬಸವನಬೆಟ್ಟ ಅರಣ್ಯ ಪ್ರದೇಶದ ಸಮೀಪ ಇರುವ ಎಚ್.ಬಸಾಪುರ ಗ್ರಾಮದ ಆನಂದ್ ಅವರಿಗೆ ಸೇರಿದ ಜಮೀನಲ್ಲಿ ಸುಮಾರು 15 ವರ್ಷಗಳಿಂದ ತೆಗದ ಮರಗಳನ್ನು ಬೆಳಸುತ್ತಿದ್ದರು. ತಡ ರಾತ್ರಿ ಕಾಡಾನೆಗಳ ಗುಂಪು ದಾಳಿ ಮಾಡಿ ಸುಮಾರು 12 ಮರಗಳನ್ನು ಮುರಿದು ಹಾಕಿವೆ. ಇದರಿಂದಾಗಿ ಅಪಾರ ನಷ್ಟ ಉಂಟಾಗಿದೆ.ಈ ವೇಳೆ ಆನಂದ್ ಮಾತನಾಡಿ, 15 ವರ್ಷಗಳ ಹಿಂದೆ ಸುಮಾರು 400ಕ್ಕೂ ಹೆಚ್ಚು ತೆಗದ ಮರಗಳನ್ನು ನಾಟಿ ಮಾಡಿದ್ದು , ನಮ್ಮ ಜಮೀನು ಅರಣ್ಯ ಪ್ರದೇಶದ ಅಂಚಿನಲ್ಲಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು ಹೀಗಾಗಿ ಅರಣ್ಯ ಕೃಷಿ ಮಾಡಿದ್ದೇವೆ.ಅದರೂ ಕೂಡಾ ಕಾಡಾನೆಗಳು ದಾಳಿ ಮಾಡಿ ತೆಂಗು ಮತ್ತು ತೆಗೆದ ಮರಗಳನ್ನು ಮುರಿದು ಹಾಕಿವೆ. ಇನ್ನು ಕೆಲವು ವರ್ಷಗಳಲ್ಲಿ ಕಟಾವು ಮಾಡಬೇಕಿತ್ತು. ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಅಳಲು ತೋಡಿಕೊಂಡರು.ಅರಣ್ಯ ಪ್ರದೇಶದ ಅಂಚಿನ ಬಹುತೇಕ ಗ್ರಾಮಗಳಲ್ಲಿ ನಿತ್ಯ ಕಾಡು ಪ್ರಾಣಿಗಳ ಉಪಟಳ ಹೆಚ್ಚಿದೆ. ಇದರ ನಿಯಂತ್ರಣಕ್ಕೆ ಸೋಲಾರ್ ಫೆನ್ಸ್ ಹಾಗೂ ರೈಲ್ವೆ ಕಂಬಿ ಅಳವಡಿಸಲಾಗಿದೆ. ಆದರೂ ಕಾಡಾನೆಗಳ ದಾಳಿ ಮಾಡುವುದು ತಪ್ಪಿಲ್ಲ. ಒಂದು ಮರಕ್ಕೆ ಐವತ್ತು ಸಾವಿರ ಬೆಲೆ ಬಾಳುತ್ತೆದೆ. ರೈತರ ಗೋಳು ಯಾರು ಕೇಳುವವರು ಯಾರು ಇಲ್ಲ. ಅರಣ್ಯ ಇಲಾಖೆ ಹಾಗೂ ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.