ಸಾರಾಂಶ
Fear of arrest: MLA Tunnur absent from flag hoisting?
- ಪಿಎಸ್ಸೈ ಪರಶುರಾಮ್ ಶಂಕಾಸ್ಪದ ಸಾವು ಪ್ರಕರಣದ ಆರೋಪಿ ಶಾಸಕ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಆಗಮಿಸಿರಲಿಲ್ಲ.ನಗರ ಠಾಣೆಯ ಪಿಎಸ್ಸೈ ಆಗಿದ್ದ ಪರಶುರಾಮ್ ಶಂಕಾಸ್ಪದ ಸಾವಿನ ಪ್ರಕರಣದಲ್ಲಿ ಶಾಸಕ ತುನ್ನೂರು ಹಾಗೂ ಪುತ್ರ ಸನ್ನೀಗೌಡ ಆರೋಪಿಗಳು. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಬಂಧನ ಭೀತಿಯಿಂದ ಶಾಸಕ ತುನ್ನೂರು ಆಗಮಿಸಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಾಸಕ ತುನ್ನೂರು ಹಾಗೂ ಪುತ್ರನ ಬಂಧಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಗಳು ಹಾಗೂ ಶಾಸಕರ ಕಚೇರಿಗೆ ಮುತ್ತಿಗೆ ಘಟನೆಗಳಿಂದಾಗಿ ಅಲ್ಲಿ ಪೊಲೀಸ್ ಪಹರೆ ನೀಡಲಾಗಿದೆ.ವರ್ಗಾವಣೆ ತಡೆಗೆ ಪರಶುರಾಮ್ ಅವರಿಗೆ 30 ಲಕ್ಷ ರು.ಗಳವನ್ನು ಶಾಸಕ ಹಾಗೂ ಪುತ್ರ ಕೇಳಿದ್ದರಿಂದ, ಖಿನ್ನತೆಗೊಳಗಾಗಿದ್ದ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂಬುದಾಗಿ ಪತ್ನಿ ಶ್ವೇತಾ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
-15ವೈಡಿಆರ್14 : ಚೆನ್ನಾರೆಡ್ಡಿ ತುನ್ನೂರು, ಶಾಸಕರು, ಯಾದಗಿರಿ.