ಸಾರಾಂಶ
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಪಂಚಲಿಂಗೇಶ್ವರ ಸದನದಲ್ಲಿ ಮೇ 27ರಂದು ಪಣಿಕ್ಕರ್ ಬಿರುದು ಪಡೆದ ಕಾರಣಕ್ಕಾಗಿ ವಿಟ್ಲ ಅರಮನೆಯ ಬಂಗಾರು ಅರಸರಿಂದ ಸನ್ಮಾನ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಭಗವಂತನ ಸನ್ನಿಧಿಯಲ್ಲಿ ದೊರಕುವ ಸನ್ಮಾನಗಳು ವೃತ್ತಿಕ್ಷೇತ್ರದ ಸಾಧನೆಗೆ ಬಲ ನೀಡುತ್ತದೆ ಎಂದು ದೈವನರ್ತಕ ಪ್ರಮೋದ್ ಪಣಿಕ್ಕರ್ ಹೇಳಿದರು.ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಪಂಚಲಿಂಗೇಶ್ವರ ಸದನದಲ್ಲಿ ಮೇ 27ರಂದು ಪಣಿಕ್ಕರ್ ಬಿರುದು ಪಡೆದ ಕಾರಣಕ್ಕಾಗಿ ವಿಟ್ಲ ಅರಮನೆಯ ಬಂಗಾರು ಅರಸರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿಟ್ಲ ಅರಮನೆಯ ಕೃಷ್ಣಯ್ಯ ಹಾಗೂ ಸನ್ಮಾನ ಸ್ವೀಕರಿಸಿದ ಪ್ರಮೋದ್ ಪಣಿಕ್ಕರ್, ಅವರ ಪತ್ನಿ ಶೋಭನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯರಾಮ ಬಲ್ಲಾಳ, ರಾಜಾರಾಮ ವರ್ಮ, ನಟೇಶ್ ವಿಟ್ಲ, ಹರೀಶ್ ವಿಟ್ಲ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಬಂಗಾರು ಅರಸರು ಪ್ರಮೋದ್ ಪಣಿಕ್ಕರ್ - ಶೋಭನಾ ದಂಪತಿಯನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪ್ರಮೋದ್ ದಂಪತಿ ಬಂಗಾರು ಅರಸರಿಗೆ ಗೌರವ ದ್ಯೋತಕವಾಗಿ ಹೂ- ಹಣ್ಣು ಕಾಣಿಕೆಗಳನ್ನು ಸಮರ್ಪಿಸಿದರು. ವೇದಮೂರ್ತಿ ಅಮೈ ಗಿರೀಶ್ ಭಟ್ ಪ್ರಾರ್ಥಿಸಿದರು. ಇರಾಬಾಳಿಕೆ ಸತೀಶ ಆಳ್ವ ಸನ್ಮಾನಪತ್ರ ವಾಚಿಸಿದರು. ಕುಂಡಕೋಳಿ ಶ್ರೀನಿವಾಸ ರೈ ಸ್ವಾಗತಿಸಿದರು. ಬೆಂಗ್ರೋಡಿಗುತ್ತು ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.