ಮಾಲೂರು: ನಗರದ ಬಸ್ ನಿಲ್ದಾಣದಿಂದ ಕೂರ್ನಹೊಸಹಳ್ಳಿ ಗ್ರಾಮಕ್ಕೆ ತೆರಳಲು ಬಸ್ಸಿಗಾಗಿ ಕಾಯುವ ವೇಳೆ ಮಹಿಳೆಯೊಬ್ಬರ ಬ್ಯಾಗ್ ಕಸಿದು ಬ್ಯಾಗಿನಲ್ಲಿದ್ದ ಸುಮಾರು ೬ ಲಕ್ಷ ಬೆಲೆ ಬಾಳುವ ೩೮ ಗ್ರಾಂ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಮಾಲೂರು ನಗರದ ಪೊಲೀಸರು ಬಂಧಿಸಿ ಕಳ್ಳಿಯಿಂದ ಚಿನ್ನದ ಸರ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.
ಆರೋಪಿಯನ್ನು ತಮಿಳುನಾಡು ರಾಜ್ಯದ ಮಧುರೈ ಜಿಲ್ಲೆಯ ಕಡಪಲೂರು ಗ್ರಾಮದ ಮಧು ಅಲಿಯಾಸ್ ವಿಜಯ ಎಂದು ಗುರುತಿಸಲಾಗಿದೆ.ಜುಲೈ ೨೨ರ ಸಂಜೆ ೫:೦೦ ಸಮಯದಲ್ಲಿ ನಗರದ ಬಸ್ ನಿಲ್ದಾಣದಲ್ಲಿ ಗ್ರಾಮಾಂತರ ಭಾಗದ ಕರ‍್ನಹೊಸಳ್ಳಿ ಗ್ರಾಮದ ಗಿರಿಜಮ್ಮ ಅವರು ಗ್ರಾಮಕ್ಕೆ ತರಲು ನಗರದ ಬಸ್ ನಿಲ್ದಾಣದಲ್ಲಿ ಬಸಿಗಾಗಿ ಕಾಯುತ್ತಿದ್ದ ವೇಳೆ ಬಾಗಿನಲ್ಲಿದ್ದ ಸುಮಾರು ೬ ಲಕ್ಷ ಬೆಲೆಬಾಳುವ ಮಾಂಗಲ್ಯ ಸರವನ್ನು ಕಳ್ಳಿಯೊರ್ವಳು ಕಸಿದುಕೊಂಡು ಹೋಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಕಳ್ಳಿಯ ಜಾಡು ಹಿಡಿದ ಹೋದ ಪೊಲೀಸರಿಗೆ ಕಳ್ಳಿಯ ಸುಳಿವು ಸಿಕ್ಕಿದ್ದು ಕಳ್ಳಿಯನ್ನು ಬಂಧಿಸಿ ತನಿಖೆ ನಡೆಸಿ ಸುಮಾರು ೬ ಲಕ್ಷ ಬೆಲೆಬಾಳುವ ೩೮ ಗ್ರಾಮದ ಮಾಂಗಲ್ಯ ಸರ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಪತ್ತೆ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸಿದ ತಂಡದಲ್ಲಿದ್ದ ಎಸ್.ಐ.ಶಾಂತಮ್ಮ, ಎಎಸ್‌ಐ ರಮೇಶ್ ಬಾಬು, ಸಿಬ್ಬಂದಿ ಮುರುಳಿ, ನಾಗರಾಜ್, ಪೂಜಾರ್, ನಾಗಪ್ಪ ತಳವಾರ್, ತೇಜಸ್ವಿನಿ, ಅನಿತಾ, ಐಯ್ಯಪ್ಪ ಅವರನ್ನು ಜಿಲ್ಲಾ ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಎಎಸ್‌ಪಿ ರವಿಶಂಕರ್ ಡಿವೈಎಸ್‌ಪಿ ಜಗದೀಶ್ ವಿ, ಕೃಷ್ಣಪ್ಪ, ಪೋಲಿಸ್ ಇನ್ಸ್ಪೆಕ್ಟರ್ ರಾಮಪ್ಪಗುತೆರ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ‍್ಯವೈಖರಿಯನ್ನು ಶ್ಲಾಘಿಸಿದ್ದಾರೆ.