ಸಾರಾಂಶ
ಸಾಂಪ್ರದಾಯಕವಾಗಿರುವ ಹಬ್ಬ ಮತ್ತು ಜಾತ್ರೆಗಳ ಆಚರಣೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು, ಇವುಗಳು ಸಮಾಜದಲ್ಲಿ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಉತ್ತಮ ಬದುಕಿನ ಮಹತ್ವವನ್ನು ನಮ್ಮಲ್ಲಿ ಮೂಡಿಸುತ್ತಿವೆ ಎಂದು ಡಾ.ಭಾರತಿ ಕಾಡೇಶನವರ ಹೇಳಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ಸಾಂಪ್ರದಾಯಕವಾಗಿರುವ ಹಬ್ಬ ಮತ್ತು ಜಾತ್ರೆಗಳ ಆಚರಣೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು, ಇವುಗಳು ಸಮಾಜದಲ್ಲಿ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಉತ್ತಮ ಬದುಕಿನ ಮಹತ್ವವನ್ನು ನಮ್ಮಲ್ಲಿ ಮೂಡಿಸುತ್ತಿವೆ ಎಂದು ಬೈಲಹೊಂಗಲದ ಕೆ.ಆರ್.ಸಿ.ಇ.ಎಸ್. ಸಂಸ್ಥೆಯ ಬಿ.ಇಡಿ ಕಾಲೇಜಿನ ಉಪನ್ಯಾಸಕಿ ಡಾ.ಭಾರತಿ ಕಾಡೇಶನವರ ಹೇಳಿದರು.ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಏರ್ಪಡಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಬದುಕುತ್ತಿರುವ ಪರಿಸರದಲ್ಲಿ ಹಲವು ಸ್ಥಳೀಯ ಸಂಸ್ಕೃತಿಗಳು ಜೀವಂತವಾಗಿದ್ದು, ಅವುಗಳ ಮೂಲಕ ನಾವು ನಮ್ಮ ಬದುಕನ್ನು ಗುರುತಿಸಿಕೊಳ್ಳಬಹುದಾಗಿದೆ. ಜಾತ್ರೆಗಳು ಕೂಡ ನಮ್ಮ ಸಂಸ್ಕೃತಿಯ ಪ್ರತೀಕವಾಗಿ ಚಾಲ್ತಿಯಲ್ಲಿವೆ ಎಂದರು.ಭಾರತದಲ್ಲಿ ಹಲವು ಧರ್ಮ, ಜಾತಿ, ವೇಷಭೂಷಣ, ಆಹಾರ ಪದ್ಧತಿಗಳು ವಿಭಿನ್ನವಾಗಿದ್ದರೂ ನಾವು ವಿವಿಧತೆಯಲ್ಲಿ ಏಕತೆ ರೂಢಿಸಿಕೊಂಡಿದ್ದೇವೆ. ಇದುವೆ ಭಾರತದ ಗುಣ ಧರ್ಮವಾಗಿದೆ. ಇಂತಹ ಚಟುವಟಿಕೆಗಳನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸುವ ಮೂಲಕ ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾಗಿದೆ ಎಂದರು.
ಪ್ರಾಚಾರ್ಯ ಡಾ.ಎನ್.ಆರ್. ಸವತಿಕರ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಜಾತ್ರೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸರಸ್ವತಿ ಮಾದರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ.ಅರುಂಧತಿ ಬದಾಮಿ ಸ್ವಾಗತಿಸಿದರು. ವಚನಾ ಬಸಿಡೋಣಿ ಅತಿಥಿ ಪರಿಚಯಿಸಿದರು. ಸಹನಾ ತೋರಗಲ್ಲ ಮತ್ತು ಶಿಲ್ಪಾ ಬಸಲಿಂಗನವರ ನಿರೂಪಿಸಿದರು. ಸುನಂದಾ ಹಟ್ಟಿ ವಂದಿಸಿದರು.