ಸಿಟಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

| Published : Aug 15 2024, 01:47 AM IST

ಸಿಟಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ನಗರದ ಹಳೆ ಬಸ್‌ ನಿಲ್ದಾಣದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಯುವಕರಿದ್ದ ಎರಡು ಗುಂಪುಗಳು ಮೊದಲು ಮಾತಿಗೆ ಮಾತು ಬೆಳೆಸಿದ್ದು, ಯುವಕರ ನಡುವೆ ಗಲಾಟೆ ಪ್ರಾರಂಭವಾಗುತ್ತಿದ್ದಂತೆ ಪ್ರಯಾಣಿಕರು ಆತಂಕದಿಂದ ಓಡಿ ಹೋಗಿದ್ದಾರೆ. ಈ ಜಗಳವನ್ನು ಅನೇಕರು ಸುಮ್ಮನೆ ನೋಡುತ್ತಿದ್ದರೆ, ಸಾರಿಗೆ ಬಸ್ ಚಾಲಕರು ಹಾಗೂ ಸಿಬ್ಬಂದಿ ಮೂಕಪ್ರೇಕ್ಷರಾಗಿ ನಿಂತಿದ್ದರು. ಗಲಾಟೆಯ ವೇಳೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿಯೂ ನಡೆದಿದ್ದರಿಂದ ಕೆಲ ಯುವಕರ ಬಟ್ಟೆಗಳು ಹರಿದುಹೋದವು. ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಈ ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದೆ ಇರುವುದು ವಿಪರ್ಯಾಸ. ಯುವಕರು ಆಗಾಗ್ಗೆ ಇಲ್ಲಿ ಜಗಳ ಮಾಡುತ್ತಲೆ ಇರುತ್ತಾರೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹಳೆ ಬಸ್‌ ನಿಲ್ದಾಣದಲ್ಲಿ ಬುಧವಾರ ಸಿಟಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಸುಮಾರು ೨೦ಕ್ಕೂ ಹೆಚ್ಚು ಯುವಕರಿದ್ದ ಎರಡು ಗುಂಪುಗಳು ಮೊದಲು ಮಾತಿಗೆ ಮಾತು ಬೆಳೆಸಿದ್ದು, ಯುವಕರ ನಡುವೆ ಗಲಾಟೆ ಪ್ರಾರಂಭವಾಗುತ್ತಿದ್ದಂತೆ ಪ್ರಯಾಣಿಕರು ಆತಂಕದಿಂದ ಓಡಿ ಹೋಗಿದ್ದಾರೆ. ಈ ಜಗಳವನ್ನು ಅನೇಕರು ಸುಮ್ಮನೆ ನೋಡುತ್ತಿದ್ದರೆ, ಸಾರಿಗೆ ಬಸ್ ಚಾಲಕರು ಹಾಗೂ ಸಿಬ್ಬಂದಿ ಮೂಕಪ್ರೇಕ್ಷರಾಗಿ ನಿಂತಿದ್ದರು. ಗಲಾಟೆಯ ವೇಳೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿಯೂ ನಡೆದಿದ್ದರಿಂದ ಕೆಲ ಯುವಕರ ಬಟ್ಟೆಗಳು ಹರಿದುಹೋದವು. ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಈ ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದೆ ಇರುವುದು ವಿಪರ್ಯಾಸ. ಯುವಕರು ಆಗಾಗ್ಗೆ ಇಲ್ಲಿ ಜಗಳ ಮಾಡುತ್ತಲೆ ಇರುತ್ತಾರೆ.

ಕಾಲೇಜು ಬಿಡುತ್ತಿದ್ದಂತೆ ಬಸ್ ನಿಲ್ದಾಣದಲ್ಲಿ ಜಮಾಯಿಸುವ ಕಾಲೇಜು ಯುವಕರ ಗುಂಪುಗಳು ಮಾದಕ ವಸ್ತುಗಳನ್ನು ಸೇವಿಸಿ ನಿಲ್ದಾಣಕ್ಕೆ ಬಂದು ಕಾಲೇಜು ಯುವತಿಯರಿಗೆ ಕಿರುಕುಳ ಕೊಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಇದುವರೆಗೂ ಯಾವ ಕ್ರಮ ಕೈಗೊಂಡಿರುವುದಿಲ್ಲ. ಹತ್ತಾರು ವರ್ಷಗಳ ಹಿಂದೆ ಇದೇ ಜಾಗದಲ್ಲಿದ್ದ ಹಳೆ ಬಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ನಡುವೆ ಇದೇ ರೀತಿ ಗಲಾಟೆಗಳಾಗುತ್ತಿದ್ದವು. ಇದೀಗ ಅದೇ ಕರಾಳ ಇತಿಹಾಸ ಮರುಕಳಿಸಿದೆ. ಪೊಲೀಸ್‌ ಇಲಾಖೆ ಈಗಲೇ ಎಚ್ಚೆತ್ತುಕೊಂಡು ಪುಂಡರಿಗೆ ಬಿಸಿ ಮುಟ್ಟಿಸಿದಲ್ಲಿ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದಾಗಿದೆ.