ಕನ್ನಡಪ್ರಭ ವಾರ್ತೆ ಕೋಲಾರ
ಒಳಮೀಸಲಾತಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಜಾರಿ ಮಾಡದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಸಮಿತಿ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಈ ವರದಿಯನ್ನು 5 ಗುಂಪುಗಳ ಬದಲಾಗಿ 3 ಗುಂಪುಗಳಾಗಿ ವಿಂಗಡಿಸಿ ಕೇವಲ ನೇರ ನೇಮಕಾತಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಂಬಡ್ತಿ ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ಬಗ್ಗೆ ಯಾವೂದೇ ಅಧಿಕೃತ ಆದೇಶವನ್ನು ಜಾರಿ ಮಾಡಿಲ್ಲ. ಈ ಬಗ್ಗೆ ಸಂಪುಟದಲ್ಲಿ ನಿರ್ಣಯ ಮಾಡದಿರುವುದೇ ಕಾರಣ ಒಳಮೀಸಲಾತಿಯನ್ನು ಮುಂಬಡ್ತಿಯಲ್ಲಿ ಆದೇಶಿಸುವವರೆಗೆ ತಡೆ ಹಿಡಿಯಲಾಗಿದೆ ಎಂದು ಹೇಳಿಕೆ ನೀಡಿದರೂ ಸಹ ಯಾವೂದೇ ರೀತಿ ಕಾರ್ಯಾದೇಶವನ್ನು ಜಾರಿ ಮಾಡದ ಕಾರಣ ಉನ್ನತ ಹುದ್ದೆಗಳನ್ನು ಕಳೆದು ಕೊಳ್ಳುವಂತಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು. ಆದಿ ಕರ್ನಾಟಕ, ಆದಿ ಅಂಧ್ರ ಮತ್ತು ಆದಿ ದ್ರಾವಿಡ ಇವರು ಪ್ರವರ್ಗ-ಎ ಮತ್ತು ಬಿ ರಲ್ಲಿಯೂ ಮೀಸಲಾತಿಯನ್ನು ಪಡೆಯ ಬಹುದಾಗಿದೆ ಎಂಬ ಆದೇಶ ಜಾರಿ ಮಾಡಲಾಗಿದೆ. ನ್ಯಾ.ನಾಗಮೋಹನ್‌ದಾಸ್ ವರದಿಯ ಶಿಫಾರಸ್ಸಿನಂತೆ ಆಯಾ ಜಾತಿಯಲ್ಲಿ ಹೆಸರಿನಲ್ಲಿ ಜಾತಿ ಪತ್ರವನ್ನು ವಿತರಿಸಲಾಗುತ್ತಿದೆ. ಸರ್ಕಾರವು ಜಾರಿ ಮಾಡಿರುವ ಒಳ ಮೀಸಲಾತಿಯ ನಿರ್ಣಯವನ್ನು ಕಾಯ್ದೆ ಮೂಲಕ ಮಾನ್ಯ ಮಾಡಲು ಚಳಿಗಾಲದ ಅಧಿವೇಶನದಲ್ಲಿ ಅಂಗಿಕರಿಸಿ ರಾಜ್ಯ ಪಾಲರ ಸಹಿ ಕಳುಹಿಸಲಾಗಿತ್ತು. ಅದರೆ ರಾಜ್ಯಪಾಲರು ಕೆಲವು ಅಂಶಗಳಿಗೆ ಹಾಗೂ ಆಲೆಮಾರಿ ಸಮುದಾಯವು ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಪ್ರವರ್ಗ-ಎ ಅಲೆಮಾರಿಗಳಿಗೆ ಶಿಫಾರಸ್ ಮಾಡಲಾಗಿತ್ತು. ಅದರೆ ಸರ್ಕಾರವು ಸಚಿವ ಸಂಪುಟದಲ್ಲಿನ ನಿರ್ಣಯದಲ್ಲಿ ಸ್ಪರ್ಶ ಜಾತಿಯವರೊಂದಿಗೆ ಸೇರ್ಪಡೆ ಮಾಡಿರುವುದು ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಅದ್ದರಿಂದ ಈ ಕಾಯ್ದೆಗೆ ಸಹಿ ಮಾಡದಂತೆ ರಾಜ್ಯ ಪಾಲರಿಗೆ ಮನವಿ ಮಾಡಲಾಗಿತ್ತು. ನಂತರದಲ್ಲಿ ಒಳಮೀಸಲಾತಿಯ ತೊಡುಕುಗಳನ್ನು ರಾಜ್ಯ ಪಾಲರ ಗಮನಕ್ಕೆ ತಂದು ಸಹಿ ಪಡೆಯಲಾಗಿದೆ ಎಂದು ಹೇಳಿದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ರಾಜ್ಯಪಾಲರು ನೆರೆ ರಾಜ್ಯಗಳು ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿಯನ್ನು ಕಲ್ಪಿಸಿರುವ ಪ್ರದೇಶಗಳಲ್ಲಿ ನೇರ ನೇಮಕಾತಿಯ ಜೂತೆಗೆ ಮುಂಬಡ್ತಿಯನ್ನು ಬ್ಯಾಕ್‌ಲಾಗ್‌ನಲ್ಲಿ ಉಪವರ್ಗೀಕರಣ ಮಾಡಿದ್ದನ್ನು ನಮ್ಮ ರಾಜ್ಯವು ಏಕೆ ಪಾಲಿಸಿಲ್ಲ ಎಂಬುವುದು ಆಲೆಮಾರಿಗಳ ದೂರಾಗಿದೆ. ಸಂವಿಧಾನ್ಮಕವಾಗಿರುವ ಮುಂಬಡ್ತಿ ಮತ್ತು ಬ್ಯಾಕ್ ಲಾಗ್‌ನಲ್ಲಿ ಯಾಕೇ ಉಪವರ್ಗಿಕರಣವನ್ನು ಯಾಕೆ ಕಲ್ಪಿಸಿಲ್ಲ. ಈ ಮಸೂದೆಯನ್ನು ಎಲ್ಲಾ ಸಂವಿಧಾನತ್ಮಕ ಅಂಶಗಳ ಬಗ್ಗೆ ಸೃಷ್ಠಿಕರಣ ಕೋರಿ ಸರ್ಕಾರಕ್ಕೆ ಪತ್ರವನ್ನು ಬರೆದಿರುತ್ತಾರೆ. ಅದಕ್ಕೆ ಸರ್ಕಾರವು ಸ್ವಷ್ಟನೆ ಸಹ ನೀಡಿದೆ ಎಂದರು. ಶೇ. 50ರಷ್ಟು ಮೀಸಲಾತಿಯಲ್ಲಿ ನೇಮಕಾತಿ ನೀಡಲು ಆದೇಶಿಸಿರುವುದು ಸ್ವಲ್ಪವಾದರೂ ನ್ಯಾಯ ದಕ್ಕಿದಂತಾಗಿದೆ. 30 ವರ್ಷಗಳ ಹೋರಾಟಗಳಿಗೆ ಮಾನ್ಯತೆ ನೀಡದೆ 3 ದಿನದ ಹೋರಾಟಕ್ಕೆ ಮಾನ್ಯತೆ ನೀಡಿದೆ. ಇದು ಕೇವಲ ಶಿಕ್ಷಣ ಮತ್ತು ಹುದ್ದೆಗಳಿಗೆ ಮೀಸಲಾಗದೆ ಎಲ್ಲಾ ಕ್ಷೇತ್ರಗಳಲ್ಲೂ ಮೀಸಲಾತಿ ಲಭ್ಯವಾಗಬೇಕು. ಸರ್ಕಾರವು ಈ ಎಲ್ಲಾ ಲೋಪದೋಷಗಳನ್ನು ಸರಿಪಡೆಸದಿದ್ದರೆ ಹೋರಾಟಗಳು ಅನಿವಾರ್ಯವಾಗಲಿದೆ ಎಂದು ತಿಳಿಸಿದರು. ಈವರೆಗೆ ನೀಡಿರುವ ಎಲ್ಲಾ ವರದಿಗಳ ಸಮೀಕ್ಷೆಯ ಪ್ರಕಾರ ಮಾದಿಗ ಜನಸಂಖ್ಯೆ ಸುಮಾರು 15 ಲಕ್ಷಕ್ಕೂ ಹೆಚ್ಚಿದೆ. ಬುಡಕಟ್ಟು ಮೀಸಲಾತಿ ಶೇ. 1ರಷ್ಟು ಇರುವುದನ್ನು ತೆಗೆದಿರುವುದು ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಲು ಅವಕಾಶ ನೀಡಿದಂತಾಗಿದೆ. ಇದು ಸರಿಪಡೆಸದೆ ಒಳಮೀಸಲಾತಿ ನೀಡಿರುವುದು ತೊಂದರೆ ನೀಡಿದಂತಾಗಿದೆ. ಇದರ ಪರಿಣಾಮ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠವನ್ನು ಮಾದಿಗ ದಂಡೋರ ಕಲಿಸಲಿದೆ. ಕಳೆದ 70 ವರ್ಷಗಳಿಂದ ಮಾದಿಗ ದಂಡೋರ ಸಮುದಾಯವು ಮೀಸಲಾತಿಯಲ್ಲಿ ವಂಚಿತರಾಗಿರುವುದು ನಮ್ಮ ಮೇಧಾವಿಗಳಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾಧ್ಯಕ್ಷ ಮುನಿರಾಜು ಮಾತನಾಡಿ, ಸರ್ಕಾರವು ಮೀಸಲಾತಿ ಶೇ. 50ರಷ್ಟು ಇರುವುದನ್ನು ಶೇ. 56ಕ್ಕೆ ಏರಿಕೆ ಮಾಡಿದರೂ ಸಹ ಒಳಮೀಸಲಾತಿಯನ್ನು ಶೇ. 50ರ ಅಡಿಯ ಮೀಸಲಾತಿಯಲ್ಲಿ ಜಾರಿ ಮಾಡುವುದಾಗಿ ತಿಳಿಸಿರುವುದು ಅನ್ಯಾಯವಾಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಹಾರೋಹಳ್ಳಿ ರವಿ, ಪದಾಧಿಕಾರಿಗಳಾದ ಅಂಜನಪ್ಪ, ಹಾರೋಹಳ್ಳಿ ಸುರೇಶ್, ಮುಳಬಾಗಿಲು ವೆಂಕಟೇಶ್, ಹಾರೋಹಳ್ಳಿ ನಾರಾಯಣಸ್ವಾಮಿ, ರಾಮು, ಪಿಳ್ಳಪ್ಪ, ಉಮೇಶ್, ಪೂಜೇಶ್, ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ ಉಪಸ್ಥಿತರಿದ್ದರು.