ಸಾರಾಂಶ
ರಾಮನಾಥಪುರದಲ್ಲಿ ಕಾಂಂಗ್ರೆಸ್ ಅಭ್ಯರ್ಥಿ ಮತ ಪ್ರಚಾರ । ಕಾರ್ಯಕರ್ತರ ಸಭೆ । ಕಾಂಗ್ರೆಸ್ ಮುಖಂಡರು ಭಾಗಿ
ಕನ್ನಡಪ್ರಭ ವಾರ್ತೆ ರಾಮನಾಥಪುರಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ತಮ್ಮನ್ನು ಕೈಹಿಡಿಯಲಿದ್ದಾರೆ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂಘಟನಾತ್ಮಕ ಹೋರಾಟ ಮಾಡುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮ ವಹಿಸಬೇಕು ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮತದಾರರಲ್ಲಿ ಮನವಿ ಮಾಡಿದರು.
ಹಾಸನ ಲೋಕಸಭಾ ಚುನಾವಣೆಯ ಹಿನ್ನೆಲೆ ಬುಧವಾರ ರಾಮನಾಥಪುರ ಪಟ್ಟಣದ ಶ್ರೀ ಪಟ್ಟಾಭಿರಾಮ ಶಾಲೆಯ ಆವರಣದಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀಧರ್ ಗೌಡ ಹಾಗೂ ಎಂ.ಟಿ. ಕೃಷ್ಣೇಗೌಡ ನೇತೃತ್ವದಲ್ಲಿ ರಾಮನಾಥಪುರ ಹೋಬಳಿಯ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಭಾರಿ ಮಹತ್ವ ಪಡೆದಿದ್ದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಮಾತ್ರ ಗೆಲ್ಲಲು ಸಾಧ್ಯ. ಹಿಂದೆ ಅರಕಲಗೂಡು ತಾಲೂಕಿಗೆ ನಮ್ಮ ತಾತ, ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡ ಅವರು ಅವರ ಆಡಳಿತ ಅವಧಿಯಲ್ಲಿ ಜಾತಿ ಭೇದ ಮಾಡದೆ ಸಮಗ್ರ ಅಭಿವೃದ್ಧಿ ಯೋಜನೆ ನೀಡಿದರು. ಗ್ರಾಮೀಣ ಭಾಗದ ರೈತರು, ಬಡವರು, ದೀನ ದಲಿತರೊಂದಿಗೆ ಪ್ರೀತಿ ವಿಶ್ವಾಸ ಗಳಿಸಿದ್ದರು. ಅವರ ಮೊಮ್ಮಗನಾದ ನಾನು ಅವರ ಈ ಹಿಂದೆ ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆದು ನಿಮ್ಮೆಲ್ಲರ ಸೇವೆ ಮಾಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.
‘ಹಾಸನ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ನನ್ನ ಮೇಲೆ ಕೇಂದ್ರದ ಮುಖಂಡರು ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ಇಟ್ಟು ಟಿಕೆಟ್ ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳಲು ನಿಮ್ಮೆಲ್ಲರ ಆಶೀರ್ವಾದ ಮುಖ್ಯ ಎಂದು ಶ್ರೀ ರಾಮನಾಥಪುರದ ರಾಮೇಶ್ವರ ಸ್ವಾಮಿ, ಸುಬ್ರಮಣ್ಯ ಸ್ವಾಮಿ ಸನ್ನಿಧಿಯಿಂದ ಪ್ರಚಾರ ಪ್ರಾರಂಭಿಸಿದ್ದು ಸಂತೋಷವಾಗಿದೆ. ದಯಮಾಡಿ ಕಾರ್ಯಕರ್ತರು ಪ್ರತಿ ಗ್ರಾಮಗಳ ಬೂತ್ ಮಟ್ಟದಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ನಮಗೆ ಜಯ ಕಟ್ಟಿಟ್ಟ ಬುತ್ತಿ’ ಎಂದು ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.ಅರಕಲಗೂಡು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದ ಆಭ್ಯರ್ಥಿಗಳಾದ ಶ್ರೇಯಸ್ ಪಟೇಲ್ ಅವರು ಹಾಸನ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರು ಮಾಜಿ ಸಚಿವ ಪುಟ್ಟಸ್ವಾಮಿಗೌಡರ ಮೊಮ್ಮಗನಾಗಿದ್ದು, ಹಾಸನ ಜಿಲ್ಲೆಯಿಂದ ಈ ಹಿಂದೆ ಪುಟ್ಟಸ್ವಾಮಿಗೌಡರು ದೇವೇಗೌಡರನ್ನು ಸೋಲಿಸಿದ ರೀತಿಯಲ್ಲಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿ, ಪಾರ್ಲಿಮೆಂಟ್‌ನಲ್ಲಿ ಹಾಸನ ಜಿಲ್ಲೆ ಅಭ್ಯರ್ಥಿ ಕಾಣುವಂತೆ ಮಾಡಬೇಕು. ಅದ್ದರಿಂದ ಹೆಚ್ಚಿನ ಮತ ನೀಡಿ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶ್ರಮವಹಿಸಿ, ಜಯಶೀಲ ಮಾಡಬೇಕು ಎಂದು ಮತದಾರರಲ್ಲಿ ವಿನಂತಿಸಿಕೊಂಡರು.
ಜಿಲ್ಲಾಧ್ಯಕ್ಷ ಲಕ್ಷಣ್, ಹಾಸನ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಶಿವಪ್ಪ, ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಶ್ರೀಧರಗೌಡ, ಎಂ.ಟಿ. ಕೃಷ್ಣೇಗೌಡ, ಡಾ. ದಿನೇಶ್ ಗೌಡ, ಬೊಮ್ಮನಹಳ್ಳಿ ಕೃಷ್ಣೇಗೌಡ ರಾಮನಕೊಪ್ಪಲು ರಾಮೇಗೌಡ, ಗಂಗೂರು ಮಧುಕರ್, ವಕೀಲ ರಾಜೇಶ್ ಬಿಳಗೋಲಿ, ಬಿ.ಜೆ. ರಾಮೇಗೌಡ, ರಾಮಚಂದ್ರ, ವಿನಯ್ ಗಾಂಧಿ, ಪೀರ್ ಸಾಬ್, ಚಂದೇಗೌಡ, ಭಾಗೋಳು ಬಾಗೇವಾಳು ಮಂಜಣ್ಣ, ಚಿಕ್ಕಣ್ಣ ಶೆಟ್ಟಿ, ಜಾಕಿರ್ ಹುಸೇನ್, ಮಹಮ್ಮದ್, ರಾಮಚಂದ್ರ ಇದ್ದರು.ರಾಮನಾಥಪುರ ಪಟ್ಟಾಭಿರಾಮ ಶಾಲೆಯ ಅವರಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖಂಡ ಎಂ.ಟಿ. ಕೃಷ್ಣೇಗೌಡ ಮಾಡಿದರು. ಈ ವೇಳೆ ಶ್ರೇಯಸ್ ಪಟೇಲ್ ಇದ್ದರು.