ಸಾರಾಂಶ
ನೂರಾರು ವರ್ಷಗಳ ಹಿಂದಿನಿಂದಲೂ ದೇವಾಲಯದ ಮುಂಭಾಗವೇ ರಥವನ್ನು ನಿಲ್ಲಿಸಲಾಗುತ್ತಿತ್ತು. ಇದೀಗ ಚೌಕ ಅಭಿವೃದ್ಧಿ ಹೆಸರಿನಲ್ಲಿ ದಿಢೀರನೆ ರಥವನ್ನು ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಹಿಂದೂ ಪರ ಸಂಘಟನೆಗಳು ಎಚ್ಚರಿಸಿವೆ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದ ಆಜಾದ್ ಚೌಕದಲ್ಲಿರುವ ಹರಿಹರೇಶ್ವರ ದೇವಾಲಯದ ಮುಂಭಾಗದಲ್ಲಿರುವ ದೇವಾಸ್ಥಾನದ ರಥವನ್ನು ಸ್ಥಳಾಂತರ ಮಾಡಲು ಮುಂದಾದರೆ ಉಗ್ರ ಹೋರಾಟವನ್ನು ಮಾಡುವುದಾಗಿ ಹಿಂದೂಪರ ಸಂಘಟನೆಗಳ ಮುಖಂಡರು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಹರಿಹರೇಶ್ವರ ದೇವಾಲಯದ ಮುಂಭಾಗದಲ್ಲಿರುವ ರಥವನ್ನು ಸ್ಥಳಾಂತರಿಸಬೇಕೆಂದು ನಗರಸಭೆ ಹಾಗೂ ತಾಲೂಕು ದಂಡಾಧಿಕಾರಿಗಳು ಸೂಚಿಸುತ್ತಿರುವ ಹಿನ್ನಲೆಯಲ್ಲಿ ದೇವಾಲಯದ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ದೇವಾಲಯ ಟ್ರಸ್ಟ್ ಪದಾದಿಕಾರಿಗಳು ಮಾತನಾಡಿ ಎಚ್ಚರಿಕೆ ನೀಡಿದರು.ರಥ ಸ್ಥಳಾಂತರಕ್ಕೆ ವಿರೋಧ
ನೂರಾರು ವರ್ಷಗಳ ಹಿಂದಿನಿಂದಲೂ ದೇವಾಲಯದ ಮುಂಭಾಗವೇ ರಥವನ್ನು ನಿಲ್ಲಿಸಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ರಥವು ಶಿಥಿಲಗೊಂಡಿದ್ದರಿಂದ ೬ ತಿಂಗಳಿಂದ ಟ್ರಸ್ಟ್ ಮತ್ತು ಹಿಂದೂ ಪರ ಸಂಘಟನೆಗಳು ಸೇರಿ ಪುನರ್ ನಿರ್ಮಿಸಿ ಚಾಲನೆ ಕೊಟ್ಟ ನಂತರ ಇದೀಗ ದಿಢೀರನೆ ರಥವನ್ನು ಸ್ಥಳಾಂತರ ಮಾಡಬೇಕು, ಚೌಕವನ್ನ ಅಭಿವೃದ್ಧಿಪಡಿಸುತ್ತೇವೆಂದು ನಗರಸಭೆಯ ಪೌರಾಯುಕ್ತರು ಹೇಳಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಥವನ್ನು ಸ್ಥಳಾಂತರಿಸಲು ಬಿಡುವುದಿಲ್ಲ. ಒಂದು ವೇಳೆ ಬಲವಂತವಾಗಿ ಸ್ಥಳಾಂತರಿಸಲು ಮುಂದಾದರೆ ದೇವಾಲಯ ಟ್ರಸ್ಟ್ ಹಾಗೂ ಹಿಂದೂ ಪರ ಸಂಘಟನೆಗಳಿಂದ ಉಗ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಸಿದ್ದಾರೆ. ಸರ್ವೇ ಮಾಡಿಸುವ ಭರವಸೆನಂತರ ಮಾತನಾಡಿದ ತಹಸಿಲ್ದಾರ್ ಸುದರ್ಶನ್ ಯಾದವ್ ಭಕ್ತಾದಿಗಳ ಅಹವಾಲು ಅಲಿಸಿದ ನಂತರ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಿಸುತ್ತೇವೆ. ನಮ್ಮಲ್ಲಿ ದಾಖಲೆಗಳಿದ್ದಲ್ಲಿ ಸರ್ವೆ ಮಾಡಲು ಸುಗಮವಾಗಲಿದೆ. ಇಲ್ಲದಿದ್ದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ದಾಖಲೆಗಳನ್ನು ತರಿಸಿಕೊಂಡು ಸರ್ವೇ ಮಾಡಿಸಿಕೊಡಲಾಗುತ್ತದೆಯೆಂದರು. ಈ ಸಂದರ್ಭದಲ್ಲಿ ವಕೀಲ ನೀಲಿ ಮಂಜುನಾಥ್, ಸನಾತನ ಸೇವಾ ಸಂಘದ ಅನುಪಮಾರೆಡ್ಡಿ, ಜಗದೀಶ್, ರವಿ ಅನಿಲ್‌ಕುಮಾರ್, ಮಣಿಕಂಠ, ಮಾಡಿಕೆರೆ ಅರುಣ್, ಕುರುಟಹಳ್ಳಿ ನಾಗೇಶ್, ಜಿತೇಂದ್ರ, ಸುನಿಲ್‌ಕುಮಾರ್, ಮೋಹನ್, ಕಾಳಿ, ಮತ್ತಿತರ ಮುಖಂಡರುಗಳು ಉಪಸ್ಥಿತರಿದ್ದರು