ಭಾರತ ಚುನಾವಣಾ ಆಯೋಗ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ, ಎಸ್.ಐ.ಆರ್. ನಂತರ ದಾವಣಗೆರೆ ಜಿಲ್ಲೆಯಾದ್ಯಂತ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತ ಚುನಾವಣಾ ಆಯೋಗ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ, ಎಸ್.ಐ.ಆರ್. ನಂತರ ದಾವಣಗೆರೆ ಜಿಲ್ಲೆಯಾದ್ಯಂತ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್.ಐ.ಆರ್. ಕುರಿತಂತೆ ಮಂಗಳವಾರ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಸ್.ಐ.ಆರ್. ಪ್ರಕ್ರಿಯೆ ನಂತರ ಅಂತಿಮ ಮತದಾರರ ಪಟ್ಟಿಯಲ್ಲಿ 1808 ಮತಗಟ್ಟೆಗಳಲ್ಲಿ 657005 ಪುರುಷ, 663734 ಮಹಿಳೆಯರು ಮತ್ತು 80 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 1320819 ಮತದಾರರಿದ್ದಾರೆ ಎಂದರು.
ಯುವ ಮತದಾರರು (18–19 ವರ್ಷ): 24,056 ಹೊಸ ಯುವ ಮತದಾರರು ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ.ಅನುಪಾತ ವಿವರ: ಇಪಿ ಅನುಪಾತ- ಎಲೆಕ್ಟರ್ ಟು ಪಾಪ್ಯುಲೇಶನ್ ಅನುಪಾತ ಶೇ.69ರಷ್ಟಿದೆ. ಈ ಹಿಂದೆ ಶೇ. 73 ಇತ್ತು. ಲಿಂಗಾನುಪಾತ: ಪ್ರತಿ 1,000 ಪುರುಷರಿಗೆ 1,010 ಮಹಿಳಾ ಮತದಾರರಿದ್ದಾರೆ.
85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರರು: 9,638 ವಿಶೇಷ ಚೇತನ ಮತದಾರರು: 19,916 ಸಾಗರೋತ್ತರ ಮತದಾರರು: ಒಟ್ಟು 13 (5 ಪುರುಷರು, 8 ಮಹಿಳೆಯರು) ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಂದರ್ಭದಲ್ಲಿ ಹೊಸ ಸೇರ್ಪಡೆಗಳು: 26,747, ತಿದ್ದುಪಡಿಗಳು 22,463, ಹೆಸರು ತೆಗೆದುಹಾಕಿರುವ ಸಂಖ್ಯೆ 4,147 ಇದರಲ್ಲಿ ಮೃತಪಟ್ಟವರು 110, ಗೈರುಹಾಜರಿ 6, ಈಗಾಗಲೇ ನೋಂದಾಯಿತರು 42, ಶಾಶ್ವತ ಸ್ಥಳಾಂತರ 3,811, ಅನರ್ಹರು 178 ಇದ್ದು ನಿವ್ವಳ ಸೇರ್ಪಡೆ 22,600 ಮತದಾರರು.ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಾಲೂಕು ಕಚೇರಿಗಳು ಹಾಗೂ ಎಲ್ಲ ಮತಗಟ್ಟೆ ಅಧಿಕಾರಿಗಳ ಬಳಿ ಸಾರ್ವಜನಿಕರ ಪರಿಶೀಲನೆಗಾಗಿ ಲಭ್ಯವಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು **ECINET APP ** ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ನೋಂದಾಯಿಸಲು ಪ್ರತಿಯೊಬ್ಬ ನಾಗರೀಕರ ಹಕ್ಕಾಗಿರುತ್ತದೆ. ಈ ಸದಾವಕಾಶ ಪ್ರತಿಯೊಬ್ಬರು ತಪ್ಪದೇ ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್, ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.
- - --27ಕೆಡಿವಿಜಿ35:
ದಾವಣಗೆರೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಎಸ್ಐಆರ್ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.