ಬಿದರಹಳ್ಳಿ ಸೇರಿದಂತೆ ಕೆ.ಶೆಟ್ಟಹಳ್ಳಿ, ಕಾಡುಕೊತ್ತನಹಳ್ಳಿ ಮತ್ತು ಕರಡಕೆರೆ ಗ್ರಾಮಗಳ 3 ಗ್ರಾಮಗಳಿಗೆ ಯೋಜನೆಯಿಂದ ದೇವಾಲಯ ಮತ್ತು ಸಮುದಾಯಭವನ ಅಭಿವೃದ್ಧಿಗೆ 22 ಲಕ್ಷದ ಆರ್ಥಿಕ ನೆರವು ನೀಡಿದ್ದು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಸಂಕಲ್ಪ.

ಕೆ.ಎಂ.ದೊಡ್ಡಿ:

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಭಾರತಿನಗರ ಯೋಜನಾ ಕಚೇರಿ ವ್ಯಾಪ್ತಿಯ ಬಿದರಹಳ್ಳಿ ಶ್ರೀಕಾಲಭೈರವೇಶ್ವರ ದೇವಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದರು.

ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ ಅವರು, ದೇವಾಲಯ ಅಭಿವೃದ್ಧಿ ಸಮಿತಿಗೆ ಡಿಡಿ ಹಸ್ತಾಂತರಿಸಿ ನಂತ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 1,50,000 ರು. ಆರ್ಥಿಕ ನೆರವು ಮಂಜೂರು ಮಾಡಿದ್ದು, ದೇವಾಲಯ ಅಭಿವೃದ್ಧಿಗೆ ನೆರವಾಗಿದ್ದಾರೆ ಎಂದರು.

ಗ್ರಾಮಗಳು ಅಭಿವೃದ್ಧಿ ಆಗಬೇಕು ಅಂದರೆ ಗ್ರಾಮದ ಜನತೆ ಒಗ್ಗಟ್ಟಿನಿಂದ ಇರಬೇಕು. ಗ್ರಾಮಸ್ಥರು ಒಟ್ಟಾಗಿ ಸೇರಿ ಧಾರ್ಮಿಕ ಶ್ರದ್ಧಾಕೇಂದ್ರ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಶುಭಹಾರೈಸಿದರು.

ಬಿದರಹಳ್ಳಿ ಸೇರಿದಂತೆ ಕೆ.ಶೆಟ್ಟಹಳ್ಳಿ, ಕಾಡುಕೊತ್ತನಹಳ್ಳಿ ಮತ್ತು ಕರಡಕೆರೆ ಗ್ರಾಮಗಳ 3 ಗ್ರಾಮಗಳಿಗೆ ಯೋಜನೆಯಿಂದ ದೇವಾಲಯ ಮತ್ತು ಸಮುದಾಯಭವನ ಅಭಿವೃದ್ಧಿಗೆ 22 ಲಕ್ಷದ ಆರ್ಥಿಕ ನೆರವು ನೀಡಿದ್ದು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಸಂಕಲ್ಪ ಎಂದರು.

ಯೋಜನೆಯಿಂದ ಗ್ರಾಮೀಣ ಜನರಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶವಾಗಿದೆ ಎಂದರು.

ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು ಮಾತನಾಡಿ, ಧರ್ಮಸ್ಥಳ ಕ್ಷೇತ್ರದಿಂದ ಅನೇಕ ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರ್ಯಕ್ರಮವು ಇಡೀ ರಾಜ್ಯದ ಜನರಿಗಾಗಿ ಮಾಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ವೇಳೆ ಯೋಜನೆ ತಾಲೂಕು ಯೋಜನಾಧಿಕಾರಿ ಮಂಜುನಾಥ್, ವಲಯದ ಮೇಲ್ವಿಚಾರಕ ಎಂ.ಮುನೇಶ್, ನಗದು ಮೇಲ್ವಿಚಾರಕ ರಂಜಿತ್, ಸೇವಾಪ್ರತಿನಿಧಿ ಸವಿತಾ, ಅಶ್ವಿನಿ, ಸಮಿತಿ ಉಪಾಧ್ಯಕ್ಷರು, ಕಾರ್ಯದರ್ಶಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.