ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು

| Published : Jan 25 2025, 01:03 AM IST

ಸಾರಾಂಶ

ಜಗಳೂರು ತಾಲೂಕಿನ ಪಲ್ಲಾಗಟ್ಟೆ ವಲಯದಲ್ಲಿ ಪಲ್ಲಾಗಟ್ಟೆಯ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನಕ್ಕೆ ₹2 ಲಕ್ಷ, ಪಾಲನಾಯಕನ ಕೋಟೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹1.50 ಲಕ್ಷಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರುಗೊಳಿಸಿದ್ದಾರೆ.

- ಮಾರಿಕಾಂಬಾ, ಆಂಜನೇಯ ದೇಗುಲಗಳ ₹3,50 ಲಕ್ಷ ಡಿಡಿ ಹಸ್ತಾಂತರ - - - ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಪಲ್ಲಾಗಟ್ಟೆ ವಲಯದಲ್ಲಿ ಪಲ್ಲಾಗಟ್ಟೆಯ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನಕ್ಕೆ ₹2 ಲಕ್ಷ, ಪಾಲನಾಯಕನ ಕೋಟೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹1.50 ಲಕ್ಷಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರುಗೊಳಿಸಿದ್ದಾರೆ.

ಈ ಆರ್ಥಿಕ ಸಹಾಯಧನದ ಡಿ.ಡಿ. ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ಜನಾರ್ದನ್ ಎಸ್. ದೇವಸ್ಥಾನ ಆಡಳಿತ ಕಮಿಟಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭ ಜನಾರ್ದನ್ ಎಸ್. ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮಾಜದ ಅಭಿವೃದ್ಧಿಗಾಗಿ ಡಾ.ವೀರೇಂದ್ರ ಹೆಗ್ಗಡೆ ಅವರು ಕೈಗೊಂಡ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು, ಶ್ರೀ ಕ್ಷೇತ್ರ ಧರ್ಮಸ್ಥಳದ ದಾನ ಪರಂಪರೆಯಂತೆ ಶ್ರೀ ಕ್ಷೇತ್ರದಿಂದ ಸಮಾಜದ ಅಭಿವೃದ್ಧಿಗೆ ಹಲವು ರೀತಿಯ ಸಹಾಯಧನಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶ್ರೀ ಮಾರಿಕಾಂಬ ದೇವಿ ಸೇವಾ ಸಮಿತಿ ಅಧ್ಯಕ್ಷ ಎಚ್.ಸಿ. ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಎನ್. ರಾಜು, ಖಜಾಂಚಿ ಜಿ.ಸಿ. ರೇವಣಸಿದ್ದಪ್ಪ, ಒಕ್ಕೂಟ ಅಧ್ಯಕ್ಷೆ ರಮೀಜಾಬಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಬಿ.ಒ. ಹನುಮಂತಪ್ಪ, ಉಪಾಧ್ಯಕ್ಷ ಸಣ್ಣಗೌಡ ಪಿ.ಎಚ್., ಕಾರ್ಯದರ್ಶಿ ಪಿ.ಬಿ. ವಿರೂಪಾಕ್ಷಪ್ಪ, ಖಜಾಂಚಿ ಎಚ್.ಜೆ. ಮಾರನಾಯಕ, ತಾಲೂಕಿನ ಯೋಜನಾಧಿಕಾರಿ ಗಣೇಶ್ ಎನ್., ವಲಯ ಮೇಲ್ವಿಚಾರಕಿ ರೂಪಾದೇವಿ, ಸೇವಾಪ್ರತಿನಿಧಿಗಳಾದ ಕವಿತಾ ಹಾಗೂ ಮೆಹಂರುಂಬಿ, ಸಮಿತಿ ಪದಾಧಿಕಾರಿಗಳು, ಊರಿನ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.

- - - -24ಜೆಜಿಎಲ್2: