ಸಾರಾಂಶ
Fire accident: Automobile garage gutted
ಹುಣಸಗಿ: ವಜ್ಜಲ್ ಗ್ರಾಮದಲ್ಲಿ ಭಾನುವಾರ ರಾತ್ರಿ ಬೈಕ್ ಬಿಡಿ ಭಾಗಗಳ ಆಟೋ ಮೊಬೈಲ್ಸ್ ಗ್ಯಾರೇಜಿಗೆ ಆಕಸ್ಮಿಕ ಬೆಂಕಿ ತಗುಲಿ ಬೈಕ್ ಸೇರಿದಂತೆ ಲಕ್ಷಾಂತರ ಮೌಲ್ಯದ ಸಾಮಾನು ಸುಟ್ಟು ಭಸ್ಮವಾಗಿವೆ. ಭಾನುವಾರ ಸಂಜೆ ಬೈಕ್ ದುರಸ್ತಿ ಮಾಡಿ 4 ಬೈಕ್ ಗಳನ್ನು ಒಳಗಡೆ ಇಟ್ಟು, ಬೀಗ ಹಾಕಿಕೊಂಡು ಮನೆಗೆ ಹೋದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ ಎಂದು ಮಾಲೀಕ ಹನುಮಂತ್ ಲಿಂಗದಹಳ್ಳಿ ತಿಳಿಸಿದ್ದಾರೆ. ಅಂದಾಜು 4ಲಕ್ಷ ರು.ಗಳಿಗೂ ಅಧಿಕ ಮೌಲ್ಯದ ಬೈಕ್ ಬಿಡಿ ಭಾಗಗಳು ಹಾಗೂ ಗ್ಯಾರೇಜ್ ನಿತ್ಯ ಬಳಕೆಯ ವಸ್ತುಗಳು ಇದ್ದವು ಎಂದು ತಿಳಿದು ಬಂದಿದೆ. ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಬಳಿಕ ಸ್ಥಳಕ್ಕೆ ಸುರಪುರದಿಂದ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿ ನಂದಿಸಿದರು. ಈ ಕುರಿತು ಸ್ಥಳಕ್ಕೆ ಹುಣಸಗಿ ಪೊಲೀಸರು ಹಾಗೂ ಗ್ರಾಮ ಆಡಳಿತ ಅಧಿಕಾರಿ ಬಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
---17ವೈಡಿಆರ್12: ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದಲ್ಲಿರುವ ಆಟೋ ಮೊಬೈಲ್ಸ್ ಗ್ಯಾರೇಜ್ ಗೆ ಬೆಂಕಿ ಹತ್ತಿರುವುದು.