ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ದೊಡ್ಡ ಅನಾಹುತದಿಂದ ಪ್ರಯಾಣಿಕರು ಪಾರಾಗಿರುವ ಘಟನೆ ತಾಲೂಕಿನ ಬೇತಮಂಗಲ ಮುಖ್ಯ ರಸ್ತೆಯ ಭಟ್ರಹಳ್ಳಿ ಗೇಟ್ ಬಳಿ ನಡೆದಿದೆ.

ಕೋಲಾರ : ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ದೊಡ್ಡ ಅನಾಹುತದಿಂದ ಪ್ರಯಾಣಿಕರು ಪಾರಾಗಿರುವ ಘಟನೆ ತಾಲೂಕಿನ ಬೇತಮಂಗಲ ಮುಖ್ಯ ರಸ್ತೆಯ ಭಟ್ರಹಳ್ಳಿ ಗೇಟ್ ಬಳಿ ನಡೆದಿದೆ. 

ಕೋಲಾರದಿಂದ ಬೇತಮಂಗಲಕ್ಕೆ ಹೊರಟ್ಟಿದ್ದ ಬಸ್‌

ಕೋಲಾರದಿಂದ ಬೇತಮಂಗಲಕ್ಕೆ ಹೊರಟ್ಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಭಟ್ರಹಳ್ಳಿ ಗೇಟ್ ಬಳಿ ಬಸ್‌ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಸ್ಥಳಿಯರು ಹಾಗೂ ಪ್ರಯಾಣಿಕರು ಬಸ್‌ಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಬಸ್‌ನಲ್ಲಿ 70 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು, ಬಸ್‌ನ ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಯಾಣಿಕರು ಬೇರೆ ಬಸ್‌ನಲ್ಲಿ ಪ್ರಯಾಣ

ಬಸ್‌ನಲ್ಲಿದ್ದ ಅಗ್ನಿ ಅಳವಡಿಸಲಾಗಿದ್ದ ಉಪಕರಣ ಮೂಲಕ ಬಸ್‌ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಬಸ್‌ನ ನಿರ್ವಾಹಕ ನಂದಿಸಿದ ನಂತರ ಪ್ರಯಾಣಿಕರು ಬೇರೆ ಬಸ್‌ನಲ್ಲಿ ಪ್ರಯಾಣ ಬೆಳಸಿದರು.