ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Jan 09 2025, 12:47 AM IST

ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮೇಲುಕೋಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಯಲ್ಲಿಯೂ ಮೂಲ ಸೌಕರ್ಯ ಒದಗಿಸಬೇಕೆಂಬ ಗುರಿ ನನ್ನದಾಗಿದೆ. ಸರ್ಕಾರದಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮೇಲುಕೋಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ‌ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಹಿರೇಮರಳಿ ಗ್ರಾಮದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕ್ಷೇತ್ರದ ಪ್ರತಿ ಹಳ್ಳಿಯಲ್ಲಿಯೂ ಮೂಲ ಸೌಕರ್ಯ ಒದಗಿಸಬೇಕೆಂಬ ಗುರಿ ನನ್ನದಾಗಿದೆ. ಸರ್ಕಾರದಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ರೈತಸಂಘದ ಮುಖಂಡರಾದ ಎಸ್.ಕೃಷ್ಣಮೂರ್ತಿ, ಎಚ್.ಇ.ರವಿಕುಮಾರ್, ರಮೇಶ್, ಸತ್ಯ, ಎಚ್.ಶಿವರಾಂ, ಗ್ರಾಪಂ ಸದಸ್ಯರಾದ ಪುಟ್ಟ, ಮಾಜಿ ಅಧ್ಯಕ್ಷ ಅಶೋಕ್, ಗುತ್ತಿಗೆದಾರರಾದ ಕರುಣಾಕರ, ಧರ್ಮೇಶ್, ಗ್ರಾಮದ ಯಜಮಾನರು, ಯುವಕರು ಇತರರಿದ್ದರು.

ಪ್ರೌಢಶಾಲೆ ಕಟ್ಟಡದ ರಿಪೇರಿ ಹಾಗೂ ಬಣ್ಣ ಬಳಿಸಿ ನವೀಕರಣ

ಪಾಂಡವಪುರ:

ತಾಲೂಕಿನ ಅರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಾರಾಯಣ ಆಸ್ಪತ್ರೆ ಮೈಸೂರು ಅವರ ಧನ ಸಹಾಯ ಹಾಗೂ ಆರ್‌ ಎಫ್‌ಸಿ (ರೈಟ್ ಫಾರ್ ಕಾಸ್ ) ಎನ್‌ಜಿಒ ಸಹಾಯದೊಂದಿಗೆ ಕಟ್ಟಡದ ರಿಪೇರಿ ಮಾಡಿಸಿ ಹಾಗೂ ಬಣ್ಣ ಬಳಿಸಿ ನವೀಕರಣಗೊಳಿಸಲಾಯಿತು.

ಇದೇ ವೇಳೆ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ನಾರಾಯಣ ಹಾಸ್ಪಿಟಲ್ ಮೈಸೂರು ರೀಜನಲ್ ಮುಖ್ಯಸ್ಥೆ ನಿರ್ಮಲ ಮಾದಪ್ಪ, ನಾರಾಯಣ ಆಸ್ಪತ್ರೆ ಸೀನಿಯರ್ ಮ್ಯಾನೇಜರ್ ಸೋಮನಾಥ್, ಆರ್‌ಎಫ್‌ಸಿ ತಂಡದ ಮುಖ್ಯಸ್ಥ ಮಧು, ಅಕ್ಷರ ದಾಸೋಹ ಉಪನಿರ್ದೇಶಕ ರಂಗಸ್ವಾಮಿ, ಎಸ್ ಡಿ ಎಂ ಸಿ ಅಧ್ಯಕ್ಷ ಮಹೇಶ್, ಮುಖ್ಯ ಶಿಕ್ಷಕ ಎಸ್.ವಿ.ಚಲುವೇಗೌಡ ಇತರರು ಹಾಜರಿದ್ದರು.

ಇದೇ ವೇಳೆ ಶಾಲೆಗೆ ಮೂರು ಕಂಪ್ಯೂಟರ್‌ಗಳು, ಶಾಲೆಯ 108 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್, ನೋಟ್ ಪುಸ್ತಕಗಳು, ಜಾಮಿಟ್ರಿ ಬಾಕ್ಸ್ ಹಾಗೂ ಪೆನ್ನುಗಳನ್ನು ಉಡುಗೊರೆಯಾಗಿ ನೀಡಲಾಯಿತು.