ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಐದು ಚಿನ್ನದ ಪದಕ

| Published : Mar 15 2024, 01:17 AM IST

ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಐದು ಚಿನ್ನದ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜಿನ ಕೀರ್ತಿ ಪತಾಕೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚೆಲುವರಾಯಸ್ವಾಮಿ, ಪ್ರಾಂಶುಪಾಲರು ಡಾ. ಅಣ್ಣಯ್ಯ ತೈಲೂರು ಹಾಗೂ ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2023 - 24ನೇ ಸಾಲಿನ ಕಲಾ ವಿಭಾಗದ ಪದವಿ ಪರೀಕ್ಷೆಯಲ್ಲಿ ಐದು ಚಿನ್ನದ ಪದಕ ಹಾಗೂ 13 ನಗದು ಬಹುಮಾನಗಳನ್ನು ತನ್ನದಾಗಿಸಿಕೊಂಡು ಇಡೀ ಜಿಲ್ಲೆಗೆ ಮಾದರಿಯಾಗಿದೆ.

ಕಲಾ ವಿಭಾಗದಿಂದ ನಂದೀಶ್ ಬಿ, ಅರ್ಥಶಾಸ್ತ್ರ ವಿಷಯದಲ್ಲಿ ಎರಡು ಚಿನ್ನದ ಪದಕ, ಕನ್ನಡದಲ್ಲಿ ಎರಡು ಚಿನ್ನದ ಪದಕ ಹಾಗೂ 10 ನಗದು ಬಹುಮಾನಗಳನ್ನು ಗಳಿಸಿಕೊಂಡಿರುತ್ತಾರೆ.

ಸಮಾಜ ಶಾಸ್ತ್ರ ವಿಷಯದಲ್ಲಿ ಸೌಂದರ್ಯ ಒಂದು ಚಿನ್ನದ ಪದಕ ಹಾಗೂ ನಗದು ಬಹುಮಾನ, ಅರ್ಥಶಾಸ್ತ್ರ ವಿಷಯದಲ್ಲಿ ಮನ್ಮಿತ್ ಹಾಗೂ ನಂದನ್ ಕುಮಾರ್ ನಗದು ಬಹುಮಾನ ಪಡೆದು ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಕಾಲೇಜಿನ ಕೀರ್ತಿ ಪತಾಕೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹೆಚ್ಚಿಸಿದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚೆಲುವರಾಯಸ್ವಾಮಿ, ಪ್ರಾಂಶುಪಾಲರು ಡಾ. ಅಣ್ಣಯ್ಯ ತೈಲೂರು ಹಾಗೂ ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ.

ಗ್ರಾಮೀಣ ಕಾಲೇಜು ಎಂದು ಮೂಗು ಮುರಿದು ಸೌಲಭ್ಯಗಳ ಕೊರತೆ, ಸರಿಯಾದ ಪ್ರಾಧ್ಯಾಪಕರಿಲ್ಲ ಎಂಬ ಕುಂಟು ನೆಪ ಹೇಳಿ ನಗರ ಪ್ರದೇಶಗಳತ್ತ ವಿದ್ಯಾರ್ಜನೆಗಾಗಿ ಧಾವಿಸುವ ವಿದ್ಯಾರ್ಥಿಗಳಿಗೆ ಕೊಪ್ಪ ಕಾಲೇಜು ಮಾದರಿಯಾಗಿದೆ. 2003 ರಲ್ಲಿ ಆರಂಭವಾದ ಈ ಕಾಲೇಜು 2016 ರವರೆಗೂ ಸತತವಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪದವಿಗಳಲ್ಲಿ ಚಿನ್ನದ ಪದಕ ಪಡೆಯುತ್ತಾ ಬಂದಿದೆ.