ಐವರು ಅಂತಾರಾಜ್ಯ ಕಳ್ಳರ ಬಂಧನ: 350ಚೀಲ ಅಡಕೆ ವಶ

| Published : Jan 16 2025, 12:46 AM IST

ಸಾರಾಂಶ

ಬೀರೂರು, ಕಳೆದ ಡಿ.12ರಂದು ಅಡಕೆ ಕದ್ದು ಮಾಲೀಕರಿಕೆ ಒಪ್ಪಿಸದೆ ತಲೆಮರೆಸಿಕೊಂಡಿದ್ದ ಅಂತಾರಾಜ್ಯ ಕಳ್ಳರನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಬೀರೂರು ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

₹1.5ಕೋಟಿ ಮೌಲ್ಯದ 335 ಅಡಕೆ ಚೀಲಗಳು , ಒಂದು 12 ಚಕ್ರಗಳ ಲಾರಿ, ಹಾಗೂ ₹ 2.30.000 ನಗದು ಪೊಲೀಸರ ವಶ

ಕನ್ನಡಪ್ರಭ ವಾರ್ತೆ, ಬೀರೂರು.ಕಳೆದ ಡಿ.12ರಂದು ಅಡಕೆ ಕದ್ದು ಮಾಲೀಕರಿಕೆ ಒಪ್ಪಿಸದೆ ತಲೆಮರೆಸಿಕೊಂಡಿದ್ದ ಅಂತಾರಾಜ್ಯ ಕಳ್ಳರನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಬೀರೂರು ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಬೆಟ್ಟದಮಕ್ಕಿ ಗ್ರಾಮದ ಅಮೀರ್ ಹಮ್ಮದ್ ( 38), ಶಿವಮೊಗ್ಗ ಟೌನ್, ಟಿಪ್ಪು ನಗರ ವಾಸಿ ಮೊಹಮ್ಮದ್ ಗೌಸ್ ಖಾನ್ (30) ವರ್ಷ, , ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ಸವಾರಿಪಾಳ್ಯದ ಮೊಹಮ್ಮದ್ ಸುಭಾನ್ ಗಬ್ಬರ್(24 ) , ಮೊಹಮ್ಮದ್ ಫಯಾಜ್ (29), ಕಡೂರಿನ ಮೊಹಮ್ಮದ್ ಸಾದಿಕ್‌ ( 42) ಬಂದಿತ ಆರೋಪಿಗಳು. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತರಿಂದ ₹1.05.52.500 ಮೌಲ್ಯದ 335 ಅಡಕೆ ಚೀಲಗಳು, ಒಂದು 12 ಚಕ್ರಗಳ ಲಾರಿ, ಹಾಗೂ ₹ 2.30.000 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನಾ ವಿವರ: ಪಟ್ಟಣದ ಶ್ರೀ ಬಾಲಾಜಿ ರೋಡ್ ವೇಸ್‌ನ ಮಾಲೀಕ ದುಲಾರಂ ಮೂಲಕ ಬೀರೂರಿನ ದೇವಗಿರಿ ಟ್ರೇಡರ್ಸ್ ನಲ್ಲಿ ಡಿ.12 ರಂದು ತಲಾ 70 ಕೆಜಿ ತೂಕದ ಸುಮಾರು 350 ಚೀಲಗಳು ಲೋಡ್ ಆಗಿದ್ದು ಗುಜರಾತ್ ರಾಜ್ಯದ ವಲ್ಸಾದ್ ಸ್ಥಳಕ್ಕೆ ತಲುಪಬೇಕಾಗಿತ್ತು. ಲಾರಿ ಚಾಲಕ ಮೊಹಮ್ಮದ್ ಸುಬಾನ್ ಹಾಗೂ ಸಹಚರ ಮೊಹಮ್ಮದ್ ಫಯಾಜ್ ಇಬ್ಬರು ಸೇರಿ ಅಡಕೆಯನ್ನು ಗುಜರಾತ್ ಗೆ ತಲುಪಿಸದೇ ವಂಚಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಿ.12ರಂದು ಗುಜರಾತ್ ನ ವಲ್ಸಾದ್ ಎಂಬಲ್ಲಿಗೆ ತೆರಳಲು 350 ಚೀಲ ಅಡಕೆ ಲೋಡ್ ಆಗಿರುವ ಬಗ್ಗೆ ಅಮೀರ್ ಹಮ್ಮದ್ , ಸಾದಿಕ್ ಕಡೂರು ಸಾದಿಕ್, ಮೊಹಮ್ಮದ್ ಗೌಸ್ ಹಾಗೂ ಹನೀಫ್ ಗೆ ಮಾಹಿತಿ ನೀಡಿ, ನಂತರ ಹೊಳಲ್ಕೆರೆ ತಾಲೂಕಿನ ಹೊಸಳ್ಳಿ ಗ್ರಾಮದ ವಾಸಿ ಮಲ್ಲಿಕಾರ್ಜುನ್ ಕೋಳಿ ಫಾರಂ ಬಳಿ ಹೋಗಿ ಮಾರಾಟ ಮಾಡುವ ಉದ್ದೇಶದಿಂದ ಅನ್ ಲೋಡ್ ಮಾಡಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳು ಬೀರೂರು ಸೆರಿದಂತೆ ಬೇರೆ ಬೇರೆ ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮೊಹಮ್ಮದ್ ಸಾದಿಕ್ @ ಕಡೂರು ಸಾದಿಕ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಬೀರೂರು , ಕಡೂರು , ಯಗಟಿ ,ಸಿಂಗಟಗೆರೆ ,ತುಮಕೂರು ಜಿಲ್ಲೆ ಕುಣಿಗಲ್, ಹಾಸನ, ಹಳೆಬೀಡು , ಉಡುಪಿ, ವಿಜಯನಗರ ,ಮೈಸೂರು,ಗದಗ ,ಬೆಳಗಾವಿ, ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ ಹಾಗೂ ಹೊರರಾಜ್ಯಗಳಲ್ಲಿಯೂ ಮನೆ ಕಳವು ಪ್ರಕರಣಗಳು ದಾಖಲಾಗಿವೆ.

ಆರೋಪಿ ಅಮೀರ್ ಅಮ್ಮದ್ ವಿರುದ್ಧ ಉಡುಪಿ ಜಿಲ್ಲೆ ಹಿರಿಯಡ್ಕ, ಮಂಗಳೂರು, ಚಿಕ್ಕಮಗಳೂರು , ಶಿವಮೊಗ್ಗ ತೀರ್ಥಹಳ್ಳಿ , ಮೈಸೂರು, ಹಾವೇರಿ, ಬೆಂಗಳೂರಿನ ಮಾಗಡಿ , ತುಮಕೂರಿನ ಶಿರಾ,ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಮನೆ ಕಳವು, ಕೊಲೆ ಪ್ರಕರಣಗಳು ದಾಖಲಾಗಿವೆ.ಆರೋಪಿ ಮೊಹಮ್ಮದ್ ಗೌಸ್ ನ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಕೋಕಾ ಕಾಯ್ದೆಯಡಿ ಹಾಗೂ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿವೆ.ಆರೋಪಿಗಳ ಪತ್ತೆಗೆ ಡಾ. ವಿಕ್ರಂ ಅಮಟೆ ಮಾರ್ಗದರ್ಶನದಲ್ಲಿ, ಕಡೂರು ವೃತ್ತ ನಿರೀಕ್ಷಕ ರಫೀಕ್, ನೇತೃತ್ವದಲ್ಲಿ ಬೀರೂರು ಪೊಲೀಸ್ ಠಾಣೆ ಸಜಿತ್ ಕುಮಾರ್ ಜಿ.ಆರ್,ಪಿಎಸ್ ಐ ಗಳಾದ ಡಿ.ವಿ.ತಿಪ್ಪೇಶ್, ಶಶಿಕುಮಾರ್ ವೈ.ಎನ್. ಗಣಪತಿ, ಬೀರೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಡಿ.ವಿ.ಹೇಮಂತ್ ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ಬಿ.ಹೆಚ್.ರಾಜಪ್ಪ ಹಾಗೂ ಅಜ್ಜಂಪುರ ಪೊಲೀಸ್ ಠಾಣೆ ನಾಗರಾಜ ವೈ, ಜೀಪ್ ಚಾಲಕ ಚಂದ್ರ ನಾಯ್ಕ ಒಳಗೊಂಡ ತಂಡ ರಚಿಸಲಾಗಿತ್ತು. ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ನಯಾಜ್ ಅಂಜುಮ್, ರಬ್ಬಾನಿ, ಬೀರೂರು ಠಾಣೆಯ ರಾಧ ತಾಂತ್ರಿಕ ಸಹಯೋಗದೊಂದಿಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಿ ಗಿ ತನಿಖೆ ನಡೆಸಿ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕಿ ಬೆಂಗಳೂರಿನ ತಿರುಪಾಳ್ಯದ ಸ್ಕೋಂಡೋ ಅಪಾರ್ಟ್ ಮೆಂಟ್ ಬಳಿ ಆರೋಪಿಗಳನ್ನು ಬಂಧಿಸಿ ಬೆಲೆ ಬಾಳುವ ಮೇಲ್ಕಂಡ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾ ತಂಡವನ್ನು ಪೊಲೀಸ್ ಅಧೀಕ್ಷಕರು, ಶ್ಲಾಘಿಸಿ ಬಹುಮಾನ ನೀಡಿದ್ದಾರೆ.15 ಬೀರೂರು 1ಬೀರೂರು ಪೋಲಿಸರು ಕಳೆದ ಡಿ.12ರಂದು ಅಡಿಕೆ ಕದ್ದ ಆರೋಪಿಗಳನ್ನು ಬಂದಿಸಿ ಅವರಿಂದ 1ಕೋಟಿ22ಲಕ್ಷ ರೂ ಗಳನ್ನು ವಶಪಡಿಸಿಕೊಂಡಿದ್ದಾರೆ. ತರೀಕೆರೆ ಡಿವೈಎಸ್ಪಿ ಹಾಲಮೂರ್ತಿ, ಕಡೂರು ವೃತ್ತನಿರೀಕ್ಷಕ ರಪೀಕ್, ಪಿಎಸೈ, ಸಜಿತ್ ಕುಮಾರ್ ಜಿ.ಆರ್ - ಪಿ.ಎಸ್.ಐ ಡಿ.ವಿ.ತಿಪ್ಪೇಶ್ - ಪಿ.ಎಸ್.ಐ ಅಜ್ಜಂಪುರ ಪೊಲೀಸ್ ಠಾಣೆ, ಶಶಿಕುಮಾರ್ ವೈ.ಎನ್ ಇದ್ದರು.