ಐವರು ಕಳ್ಳರ ಬಂಧನ, 4 ಲಕ್ಷ ಮೌಲ್ಯದ ವಸ್ತು ವಶ

| Published : Apr 06 2024, 12:51 AM IST

ಸಾರಾಂಶ

ಹಲವು ದಿನಗಳಿಂದ ಕಳ್ಳತನದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದು, ₹ 4.02 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.

ಹುಬ್ಬಳ್ಳಿ:

ಹಲವು ದಿನಗಳಿಂದ ಕಳ್ಳತನದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದು, ₹ 4.02 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.ಈಚೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮತ್ತು ಸರಗಳ್ಳತನ ನಡೆಯುತ್ತಿರುವ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ಜಾಡು ಹಿಡಿದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಐ ಎಸ್.ಎಚ್. ಯಳ್ಳೂರ ನೇತೃತ್ವದ ತಂಡವು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೋಕುಲ ರಸ್ತೆಯ ನಿವಾಸಿ ನಾಗರಾಜ ಬಾಚಣಕಿ (26), ಹಳೇಹುಬ್ಬಳ್ಳಿ ಜಗದೀಶನಗರದ ಸಾಗರ ದುಂಡಿ (22), ಜಂಗ್ಲಿಪೇಟೆಯ ಗಣೇಶ ಕಟ್ಟಿಮನಿ (23) ಮನೆಗಳ್ಳರು ಹಾಗೂ ದೇವರಾಜ ನಗರದ ಗಣೇಶ ಪಾಂಚಾಣ (25) ಹಾಗೂ ಸರಗಳ್ಳರಾದ ಶಿವಶಂಕರ ಕಾಲನಿಯ ಪ್ರವೀಣ ಹಂಚಿಮನಿ (20) ಎಂಬುವರನ್ನು ಬಂಧಿಸಿದ್ದು, ಅವರಿಂದ ₹4,02,550 ಮೌಲ್ಯದ 78 ಗ್ರಾಂ ಚಿನ್ನಾಭರಣ, 65 ಗ್ರಾಂ ಬೆಳ್ಳಿಯ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.