ಸಾರಾಂಶ
ಕಟ್ಟಿನಮನೆ ಶ್ರೀ ಸಿದ್ದಿ ವಿನಾಯಕಸ್ವಾಮಿ ರಥೋತ್ಸವ ಮಂಗಳವಾರದಿಂದ ಶುಕ್ರವಾರದವರೆಗೆ ಸಂಭ್ರಮದೊಂದಿಗೆ ನಡೆಯಿತು.
ನರಸಿಂಹರಾಜಪುರ: ಕಟ್ಟಿನಮನೆ ಶ್ರೀ ಸಿದ್ದಿ ವಿನಾಯಕಸ್ವಾಮಿ ರಥೋತ್ಸವ ಮಂಗಳವಾರದಿಂದ ಶುಕ್ರವಾರದವರೆಗೆ ಸಂಭ್ರಮದೊಂದಿಗೆ ನಡೆಯಿತು. ಮಂಗಳವಾರ ಧ್ವಜಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ರಥೋತ್ಸವ ಕಾರ್ಯಕ್ರಮ ಪ್ರಾರಂಭವಾಯಿತು. ಬುಧವಾರ ಕಲಶ ಸ್ಥಾಪನೆ, ಮೂಡುಗಣಪತಿ, ಗಣ ಹೋಮ,ರಾತ್ರಿ ರಂಗೋತ್ಸವ, ಪಲ್ಲಕ್ಕಿ ಉತ್ಸವ ನಡೆಯಿತು. ಗುರುವಾರ ಪ್ರಧಾನ ಗಣ ಹೋಮ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮದ್ಯಾಹ್ನ ಹಾಗೂ ರಾತ್ರಿ ರಥೋತ್ಸವ ನಡೆಯಿತು. ನಂತರ ಅಷ್ಟಾವಧಾನ ಸೇವೆ ನಡೆಯಿತು. ಶುಕ್ರವಾರ ಅವಭೃತ ಸ್ನಾನ, ಸತ್ಯಗಣಪತಿ ವೃತ ನಡೆಯಿತು. 4 ದಿನಗಳ ಕಾಲ ನಡೆದ ಸಿದ್ದಿ ವಿನಾಯಕಸ್ವಾಮಿ ರಥೋತ್ಸವದಲ್ಲಿ ನೂರಾರು ಭಕ್ತರು ಪ್ರತಿ ದಿನ ಆಗಮಿಸಿ ಪೂಜೆ ಸಲ್ಲಿಸಿ ಮುಡಿಗಂಧ ಪ್ರಸಾದ ಸ್ವೀಕರಿಸಿದರು.