ಸಾರಾಂಶ
ಜಮೀನೊಂದರಲ್ಲಿ ಜಾನುವಾರುಗಳಿಗೆ ಕೂಡಿಟ್ಟ, ಜೋಳದ ಕಣಿಕೆ, ಶೇಂಗಾ ಹೊಟ್ಟು, ಬತ್ತದ ಮೇವಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದೊಡ್ಡ ಪ್ರಮಾಣದ ಬಣವೆ ಸುಟ್ಟು ಕರಕಲಾಗಿರುವ ಘಟನೆ ನಗರದ ಹೊರವಲಯದ ಹಳಿಸಗರ ಪ್ರದೇಶದಲ್ಲಿ ನಡೆದಿದೆ.
ಶಹಾಪುರ: ಜಮೀನೊಂದರಲ್ಲಿ ಜಾನುವಾರುಗಳಿಗೆ ಕೂಡಿಟ್ಟ, ಜೋಳದ ಕಣಿಕೆ, ಶೇಂಗಾ ಹೊಟ್ಟು, ಬತ್ತದ ಮೇವಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದೊಡ್ಡ ಪ್ರಮಾಣದ ಬಣವೆ ಸುಟ್ಟು ಕರಕಲಾಗಿರುವ ಘಟನೆ ನಗರದ ಹೊರವಲಯದ ಹಳಿಸಗರ ಪ್ರದೇಶದಲ್ಲಿ ನಡೆದಿದೆ.
ನಿಂಗಪ್ಪ ತಂದೆ ರಾಯಪ್ಪ ಕುರಿಯವರಿಗೆ ಸೇರಿದ ಈ ಬಣಮೆ, ಏಕಾಏಕ ಹೊತ್ತಿ ಉರಿಯಿತು, ಬೆಂಕಿಯಲ್ಲಿ ಟ್ರಾಕ್ಟರ್‌ಗೂ ಬೆಂಕಿ ಹತ್ತಿದ್ದು, ಒಟ್ಟು 2 ಲಕ್ಷ ರು.ಗಳಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ನಿಂಗಪ್ಪ ತಿಳಿಸಿದ್ದಾರೆ.ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ನಡೆಸಿದರು. ಈ ಕುರಿತು ಅಗ್ನಿಶಾಮಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಬರಗಾಲದಿಂದ ತತ್ತರಿಸಿರುವ ತಾಲೂಕಿನಲ್ಲಿ ಬೇರೆಡೆ ಸಾಲ ಮಾಡಿ ಜಾನುವಾರುಗಳಿಗೆ ಮೇವು ಸಂಗ್ರಹಿಸಿಡಲಾಗಿತ್ತು. ಈಗ ಮೇವಿನ ಬಣವೆಗೆ ಬೆಂಕಿ ಬಿದ್ದಿದ್ದರಿಂದ ಜಾನುವಾರಗಳಿಗೆ ಮೇವು ಇಲ್ಲದಂತಾಗಿದೆ. ಜಾನುವಾರಗಳು ಉಳಿಸಿಕೊಳ್ಳಲು ಮತ್ತೆ ಸಾಲ ಮಾಡಿ ನೀವು ಖರೀದಿಸುವ ಶಕ್ತಿ ನನ್ನಲ್ಲಿಲ್ಲ. ಸರ್ಕಾರ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿದರೆ ಜಾನುವಾರು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಮಾರಾಟ ಮಾಡುವ ಪರಸ್ಥಿತಿ ಇದೆ. ಜಾನುವಾರಗಳಿಂದಲೇ ನಮ್ಮ ಉಪಜೀವನ ನಡೆದಿದ್ದು, ಈಗ ಜಾನುವಾರಗಳೇ ಇಲ್ಲದೆ ಹೋದರೆ ನಮ್ಮ ಜೀವನಬೀದಿ ಪಾಲಾಗುತ್ತದೆ ಎಂದು ನಿಂಗಪ್ಪ ಅಳಲು ತೋಡಿಕೊಂಡರು.