ಜನಪದ ಕಲೆ ಸಂಸ್ಕೃತಿಗೆ ಪ್ರೋತ್ಸಾಹ ಅಗತ್ಯ: ಬೇಗೂರು ಶಿವಪ್ಪ

| Published : Aug 23 2025, 02:00 AM IST

ಜನಪದ ಕಲೆ ಸಂಸ್ಕೃತಿಗೆ ಪ್ರೋತ್ಸಾಹ ಅಗತ್ಯ: ಬೇಗೂರು ಶಿವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜನಪದೀಯರ ಬದುಕು ಹೂವಿನ ಹಾಸಿಗೆಯಲ್ಲ. ಜನಪದ ಕಲೆ ಸಂಸ್ಕೃತಿಗೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕು ಎಂದು ಹಿರಿಯ ಜಾನಪದ ಕಲಾವಿದ ಬೇಗೂರು ಶಿವಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಾಗರ

ಜನಪದೀಯರ ಬದುಕು ಹೂವಿನ ಹಾಸಿಗೆಯಲ್ಲ. ಜನಪದ ಕಲೆ ಸಂಸ್ಕೃತಿಗೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕು ಎಂದು ಹಿರಿಯ ಜಾನಪದ ಕಲಾವಿದ ಬೇಗೂರು ಶಿವಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಮತ್ತು ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಾನಪದ ಇತರೆ ಕಲೆಗಳ ತಾಯಿಬೇರು ಎಂದು ಪ್ರತಿಪಾದಿಸಿದರು.

ಯುವ ಪೀಳಿಗೆ ಜಾನಪದವನ್ನು ಬೆಳೆಸುವ ಕೆಲಸ ಮಾಡಬೇಕು. ಲಯನ್ಸ್‌ನಂತಹ ಸಂಸ್ಥೆ ಜನಪದ ಉಳಿಸುವ ನಿಟ್ಟಿನಲ್ಲಿ ಜಾನಪದ ಪರಿಷತ್‌ನೊಂದಿಗೆ ಕೈಜೋಡಿಸಿರುವುದು ಸ್ವಾಗತಾರ್ಹ ಸಂಗತಿ. ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸಿದರೆ ಕಲೆಯನ್ನು ಗೌರವಿಸಿದಂತೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಪ್ರಸನ್ನ, ಜಾನಪದೀಯರು ಸದಾ ಪೂಜ್ಯರು. ಜಾನಪದ ಮೌಖಿಕ ಪರಂಪರೆಯಾಗಿದ್ದು, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿ ಬಂದಿದೆ. ಅಂತಹ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ವಸಂತ ಕುಗ್ವೆ, ನಾರಾಯಣಪ್ಪ, ರಾಜು ಜನ್ನೆಹಕ್ಲು, ಲಕ್ಷ್ಮಣ ಕುಗ್ವೆ, ಉಷಾರಾಣಿ ಕೆ.ಎನ್., ಬೇಗೂರು ಶಿವಪ್ಪ ಇವರುಗಳನ್ನು ಸನ್ಮಾನಿಸಲಾಯಿತು. ಸತ್ಯನಾರಾಯಣ ಸಿರಿವಂತೆ, ಎಸ್.ಬಸವರಾಜ್, ಸ್ವಾಮಿರಾವ್, ಶ್ರೀಧರ ಈಳಿ, ಪ್ರಕಾಶ್, ವಿನಯಕುಮಾರ್, ಉಮೇಶ್ ಹಿರೇನೆಲ್ಲೂರು, ನಾರಾಯಣಮೂರ್ತಿ, ಶರಾವತಿ, ಚೂಡಾಮಣಿ ರಾಮಚಂದ್ರ, ಪ್ರಭಾವತಿ ಶ್ರೀಧರ್ ಇನ್ನಿತರರು ಹಾಜರಿದ್ದರು.