ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಗ್ರಾಮೀಣ ಭಾಗದ ಕಲಾವಿದರಿಗೆ ಅಗತ್ಯ ಪ್ರೋತ್ಸಾಹ ನೀಡಿದರೆ ಉನ್ನತ ಸಾಧನೆ ತೋರಲು ಸಾಧ್ಯವಿದೆ ಎಂದು ರಂಗಭೂಮಿ ಕಲಾವಿದ ಶಂಕ್ರಯ್ಯ ಹಿರೇಮಠ ಹೇಳಿದರು.ಸಮೀಪದ ಮುದ್ದಾಪೂರ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ಸರಸ್ವತಿ(ಪ.ಜಾ) ಮಹಿಳಾ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಲೋಕಾಪುರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಜಾನಪದ ಸಾಂಸ್ಕೃತಿಕ ಸಂಭ್ರಮದಲ್ಲಿ ಮಾತನಾಡಿದ ಅವರು, ರಂಗಭೂಮಿ ಜನೋಪಯೋಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಕಲಾವಿದರು ಸೌಲಭ್ಯದಿಂದ ವಂಚಿತರಾಗಿದ್ದು, ಅವರ ಕಲಾ ಬದುಕು ದುಸ್ತರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರ್ಕಾರದಿಂದ ಬರುವ ಮಾಸಾಶನವನ್ನು ಹೆಚ್ಚಿಸಬೇಕು. ನಿಷ್ಠಾವಂತ ಕಲಾವಿದರನ್ನು ಗುರುತಿಸಿ ವಿಶೇಷ ಕಾರ್ಯಕ್ರಮ ಹಾಕಿಕೊಂಡು ಪ್ರೋತ್ಸಾಹ ನೀಡಿದರೆ ಮಾತ್ರ ಕಲಾವಿದರ ಬಾಳು ಹಸನಾಗುತ್ತದೆ. ಅದರೆ ಸರ್ಕಾರ ಕಲೆಗಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟ ಸಾಕಷ್ಟು ಕಲಾವಿದರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಜಾನಪದ ಸಾಂಸ್ಕೃತಿಕ ಸಂಭ್ರಮದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ ಸೋಬಾನ ಪದ, ಜಾನಪದ ಗಾಯನ, ಭಜನಾಪದ, ಭಕ್ತಿಗಾನ ಸುಧೆ, ಸಮೂಹ ನೃತ್ಯ, ಡೊಳ್ಳಿನಪದ, ಲಂಬಾಣಿ ನೃತ್ಯ, ಬೀಸುವಕಲ್ಲು ಪದ ಮುಂತಾದ ಕಲಾ ತಂಡಗಳು ಭಾಗವಹಿಸಿದ್ದವು.ಈ ವೇಳೆ ವರ್ಚಗಲ್ ಶ್ರೀ ಶ್ರದ್ಧಾನಂದ ಆಶ್ರಮದ ಶ್ರೀ ಜಗದೀಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೋಮಲಿಂಗಪ್ಪ ಪೂಜಾರ, ಪ್ರಶಾಂತರಾವ ದೇಸಾಯಿ, ಬಸು ನಾಯ್ಕರ್, ಪರಶುರಾಮ ಹಂಚಾಟೆ, ಅಶೋಕ ಪಟ್ಟಣಶೆಟ್ಟಿ, ಶಂಕರ ಭಜಂತ್ರಿ, ಶಂಕರ ಮಾಳಿ, ಸೈದುಸಾಬ್ ನದಾಫ್, ಶಿವಾನಂದ ಮಡಿವಾಳರ, ಸುರೇಶ ಬನೋಜಿ, ಕೃಷ್ಣಾ ಭಜಂತ್ರಿ, ಸಂಸ್ಥೆ ಅಧ್ಯಕ್ಷೆ ಅಶ್ವಿನಿ ಭಜಂತ್ರಿ ಮತ್ತು ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.