ಜಾನಪದ ಹಾಡುಗಳು ಜನರ ಬದುಕಿನ ಜೀವಾಳ: ಕೆ.ಪುಂಡಲೀಕರಾವ್‌ ಪ್ರತಿಪಾದನೆ

| Published : Nov 30 2024, 12:48 AM IST

ಜಾನಪದ ಹಾಡುಗಳು ಜನರ ಬದುಕಿನ ಜೀವಾಳ: ಕೆ.ಪುಂಡಲೀಕರಾವ್‌ ಪ್ರತಿಪಾದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಜಾನಪದ ಪರಿಷತ್‌ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಸಂಭ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ಗ್ರಾಮೀಣ ಭಾಗದಲ್ಲಿ ಜನಪದ ನಶಿಸಿ ಹೋಗುವಂಥ ಸಂದರ್ಭದಲ್ಲಿ ಈ ರೀತಿಯ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಗ್ರಾಮೀಣ ಭಾಗ ದಲ್ಲಿ ಹೆಚ್ಚು ಹೆಚ್ಚು ಜಾನಪದ ಗೀತೆಗಳು ಬೆಳಕಿಗೆ ಬರಲು ಸಾಧ್ಯ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಪುಂಡಲೀಕರಾವ್‌ ನುಡಿದರು.ಕನ್ನಡ ಜಾನಪದ ಪರಿಷತ್‌ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಸಂಭ್ರಮದಲ್ಲಿ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಲಬುರಗಿ ಜಿಲ್ಲಾ ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಎಂಬಿ ನಿಂಗಪ್ಪ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಜಾನಪದ ಗೀತೆಗಳಿಗೆ ಬಹಳ ಮಹತ್ವವಿದೆ. ಅದರಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಅದರ ಪ್ರಭಾವ ಹೆಚ್ಚು ಕಾಣುತ್ತೇವೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಜಾನಪದ ಗೀತೆಗಳ ಬಗ್ಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಮಾತನ್ನಾಡಿ, ಜಾನಪದ ಗೀತೆಗಳನ್ನು ಕಂಡು ಹಿಡಿದವರು ಯಾರು ಎಂದು ಹೇಳಲು ಸಾಧ್ಯವಿಲ್ಲ. ಇದು ಪಾರಂಪರಿಕವಾಗಿ ಸಮಾಜಕ್ಕೆ ಬಂದ ಕೊಡುಗೆ ಇಂದು ಎಲ್ಲರೂ ಸೇರಿ ಜಾನಪದ ಗೀತೆಗಳನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಾಗಿದೆ ಎಂದು ನುಡಿದರು.ವಿಜಯ ಲಕ್ಷ್ಮೀ ಕೌಟಗೆ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಕರ್ನಾಟಕದ ಮಕುಟದಂತಿರುವ ಬೀದರ್‌ ಜಿಲ್ಲೆಯಲ್ಲಿ ಇಂತಹ ಜಾನಪದ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಿಕೊಂಡು ಬಂದಂಥವರಲ್ಲಿ ಮಹಿಳಾ ಮಣಿಗಳಿದ್ದಾರೆ ಎಂದರು.ಎಸ್‌ಎಂ ಜನವಾಡಕರ್‌ ಮಾತನಾಡಿ, ಜಾನಪದ ಕಲೆ ಹಳ್ಳಿ ಹಳ್ಳಿಗಳಲ್ಲಿ ಬೆಳೆಯಬೇಕಾದರೆ ಸಮುದಾಯ ಹಾಗೂ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯ ಎಂದರು.ಹಿರಿಯ ಸಾಹಿತಿ ಎಂಜಿ ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೊ.ಎಸ್‌ಬಿ ಕುಚಬಾಳ, ಶಾಲಿವಾನ ಗಂದಗೆ, ಸಿದ್ಧಮ್ಮ ಹಳಕಾಯಿ, ಕನ್ನಡ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ಶೇಷರಾವ್‌ ಬೆಳಕೋಣಿಕರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.