29ರಂದು ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ

| Published : Sep 27 2025, 12:02 AM IST

ಸಾರಾಂಶ

ಸೆ.29ರಂದು ಬೆಳಗ್ಗೆ 9.30ಕ್ಕೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೖತ್ತದ ಬಳಿಯ ಸರ್ಕಾರಿ ಅತಿಥಿಗೃಹದ ಆವರಣದಿಂದ ಸಾಗಲಿರುವ ರಾಮನಗರದ ವೈವಿಧ್ಯಮಯ ತಂಡಗಳೂ ಸೇರಿದಂತೆ ಜಿಲ್ಲೆಯ ಕಲಾತಂಡಗಳ ಕಲಾ ಜಾಥಾವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಸಲಿದ್ದಾರೆ.

ಕಲಾತಂಡಗಳಿಂದ ಜಾನಪದ ಮೆರುಗು । ಕಲಾತಂಡಗಳ ಕಲಾ ಜಾಥಾಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಾನಪದ ಪರಿಷತ್ ವತಿಯಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ಸೆ.29ರಂದು 5ನೇ ವರ್ಷದ ಜಾನಪದ ದಸರಾ ಆಯೋಜಿಸಲಾಗಿದ್ದು, ಜಾನಪದ ಕಲಾ ತಂಡಗಳಿಂದ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ ಕಲಾಪ್ರೇಮಿಗಳ ಮನಸೂರೆಗೊಳ್ಳಲಿದೆ ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಎಚ್.ಟಿ ಮಾಹಿತಿ ನೀಡಿದ್ದಾರೆ.ಸೆ.29ರಂದು ಬೆಳಗ್ಗೆ 9.30ಕ್ಕೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೖತ್ತದ ಬಳಿಯ ಸರ್ಕಾರಿ ಅತಿಥಿಗೃಹದ ಆವರಣದಿಂದ ಸಾಗಲಿರುವ ರಾಮನಗರದ ವೈವಿಧ್ಯಮಯ ತಂಡಗಳೂ ಸೇರಿದಂತೆ ಜಿಲ್ಲೆಯ ಕಲಾತಂಡಗಳ ಕಲಾ ಜಾಥಾವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆ ಮುಂಭಾಗದಲ್ಲಿ ಪೊನ್ನಚ್ಚನ ಮಧೂಸೂದನ್ ಅವರ ಸಂಗ್ರಹದಲ್ಲಿನ ಜಾನಪದ ವಸ್ತುಗಳ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 10.15ಕ್ಕೆ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ದಸರಾವನ್ನು ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟರಾಜಾ, ಕೊಡವ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಬ್ಯಾರಿ ಭಾಷಾ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್., ಕೃಷಿಕ ಮಹಿಳೆ ಭಾಗೀರಥಿ ಹುಲಿತಾಳ, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.ಮಧ್ಯಾಹ್ನ 11.30 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಕೊಡಗಿನ ವಿವಿಧ ಕಲಾತಂಡಗಳಿಂದ ಜಾನಪದ ಕಲಾ ವೈವಿಧ್ಯ ಆಯೋಜಿತವಾಗಿದೆ. ಮಾಲ್ದಾರೆಯ ಶ್ರೀ ಮುತ್ತಪ್ಪ ಚಂಡೆ ಮೇಳ ತಂಡದಿಂದ ಚಂಡೆ ವಾದ್ಯ, ವಿರಾಜಪೇಟೆ ತಾಲೂಕು ಜಾನಪದ ಪರಿಷತ್ ಘಟಕದಿಂದ ಕಂಸಾಳೆ, ಆದಿವಾಸಿ ನೃತ್ಯ, ಜಾನಪದ ಹಾಡು, ನೃತ್ಯ, ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ಘಟಕದಿಂದ ಜಾನಪದ ನೃತ್ಯ, ಓಂಶ್ರೀ ದಯಾನಂದ ತಂಡದಿಂದ ಜಾನಪದ ಗೀತೆ, ಗೋಣಿಕೊಪ್ಪ ತಾಲೂಕು ಜಾನಪದ ಘಟಕದಿಂದ ವೈವಿಧ್ಯಮಯ ಕಾರ್ಯಕ್ರಮ, ಕೊಡವ ಸಾಹಿತ್ಯ, ಸಂಸ್ಕೃತಿ ಅಕಾಡೆಮಿಯಿಂದ ಜಾನಪದ ವೈವಿಧ್ಯ, ಅರೆಭಾಷಾ ಸಾಹಿತ್ಯ ಅಕಾಡೆಮಿಯಿಂದ ನೃತ್ಯರೂಪಕ, ಕರ್ನಾಟಕ ಬ್ಯಾರಿ ಸಾಹಿತ್ಯ, ಸಂಸ್ಕೃತಿ ಅಕಾಡೆಮಿಯಿಂದ, ಚಿಕ್ಕ ಬೆಟ್ಟಗೇರಿ ಕಲಾತಂಡದಿಂದ ಜಾನಪದ ನೃತ್ಯ, ನಾಟ್ಯಾಂಜಲಿ ಕಲಾತಂಡದಿಂದ ಜಾನಪದ ನೃತ್ಯ, ಮಡಿಕೇರಿ ತಾಲೂಕು ಯುವ ಜಾನಪದ ಪರಿಷತ್‌ನಿಂದ ಜನಪದ ಗೀತೆ, ಮೂರ್ನಾಡುವಿನ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಜಾನಪದ ಗೀತೆ, ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ಜಾನಪದ ಸಮೂಹಗೀತೆ, ಕುಶಾಲನಗರ ತಾಲೂಕು ಘಟಕದಿಂದ ಜಾನಪದ ನೃತ್ಯ -ಭಾಗಮಂಡಲದ ಶ್ರೀ ಕಾವೇರಿ ಮಹಿಳಾ ಸಂಘದಿಂದ ಜಾನಪದ ಸಮೂಹಗೀತೆ, ಶನಿವಾರಸಂತೆ ಹೋಬಳಿ ಜಾನಪದ ಪರಿಷತ್ ಘಟಕದಿಂದ ಜಾನಪದ ಸಮೂಹ ಗೀತೆ, ಮಡಿಕೇರಿ ತಾಲೂಕು ಜಾನಪದ ಪರಿಷತ್‌ನಿಂದ ಜಾನಪದ ಗೀತೆ ಸೇರಿದಂತೆ ಸಾಕಷ್ಟು ಜಾನಪದ ವೈವಿಧ್ಯಗಳ ಕಾರ್ಯಕ್ರಮ ಆಯೋಜಿಸಲ್ಪಟ್ಟಿವೆ ಎಂದು ಅನಿಲ್ ಎಚ್‌.ಟಿ. ಮಾಹಿತಿ ನೀಡಿದ್ದಾರೆ.