ಅಜ್ಜಂಪುರ: ಎಲ್ಲ ಜಾತಿ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿ ಜಾನಪದಕ್ಕೆ ಇದೆ ಎಂದು ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಅಜ್ಜಂಪುರ: ಎಲ್ಲ ಜಾತಿ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿ ಜಾನಪದಕ್ಕೆ ಇದೆ ಎಂದು ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಕರ್ನಾಟಕ ಜಾನಪದ ಪರಿಷತ್ತು ಅಜ್ಜಂಪುರ ತಾಲೂಕು ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ನಂದಿಪುರ ಮಠದಲ್ಲಿ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ಹಾಗೂ ಕಾರ್ತಿಕ ಮಹೋತ್ಸವದ ಪ್ರಯುಕ್ತ ನಡೆದ ಜಾನಪದ ಗೀತೋತ್ಸವ ಉಧ್ಘಾಟಿಸಿ ಮಾತನಾಡಿದರು.

ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜ ಮತ್ತು ಕುಟುಂಬದಲ್ಲಿ ಶಾಂತಿ ಸೌಹಾರ್ದತೆ, ಹೊಂದಾಣಿಕೆಯ ಮನೋಭಾವ ನೆಲೆಸಲು ನಮ್ಮ ಜನಪದರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಜನಪದ ಸಾಹಿತ್ಯ ತತ್ವ ಸಿದ್ಧಾಂತಗಳನ್ನು ಅನುಸರಿಸಬೇಕು. ಜನಪದ ಹಾಡುಗಳನ್ನು ಒಗಟು ಗಾದೆಗಳನ್ನು ಕಲಿತು ಹಾಡಬೇಕು. ಜಾನಪದದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ವಿವಿಧ ಆಧುನಿಕ ಸಾಹಿತ್ಯ, ಸಂಗೀತ ಸಂಸ್ಕೃತಿ ಮೂಲ ಬೇರು ಜಾನಪದ. ಜಾನಪದಕ್ಕೆ ಸಮಾಜ ತಿದ್ದುವ ಶಕ್ತಿ ಇದೆ. ಒಬ್ಬ ವ್ಯಕ್ತಿಯನ್ನು ಸುಸಂಸ್ಕೃತನಾಗಿ ಮಾಡುವುದಲ್ಲದೆ, ಸಮಾಜದ ಎಲ್ಲ ವರ್ಗ ಜಾತಿ ಸಮುದಾಯದ ಜನರೊಂದಿಗೆ ಹೇಗೆ ಬದುಕಿ ಬಾಳಬೇಕೆಂದು ತಿಳಿಸಿಕೊಡುವ ಸಾಮರ್ಥ್ಯ ಜಾನಪದಕ್ಕಿದೆ ಎಂದರು.

ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ. ಅಪ್ಪಗೆರೆ ತಿಮ್ಮರಾಜ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ, ಕಡ್ಡಾಯವಾಗಿ ಇಂದಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ. ಜಾನಪದವೆಂದರೇನು? ಜಾನಪದದಿಂದ ಆಗುವ ಅನುಕೂಲಗಳೇನು? ಜಾನಪದ ಸಾಹಿತ್ಯವನ್ನು, ಒಗಟು ಗಾದೆಗಳನ್ನು ಚಿಕ್ಕಂದಿನಿಂದಲೇ ತಿಳಿಸಿ ಕೊಡಬೇಕೆಂದರು.

ವೇದಿಕೆಯಲ್ಲಿ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ. ಶ್ರೀ ಪತಿ ಪಂಡಿತಾರಾಧ್ಯ ಸ್ವಾಮೀಜಿ, ಶ್ರೀ ಮರುಳ ಸಿದ್ದ ಪಂಡಿತರಾಧ್ಯ ಸ್ವಾಮೀಜಿ, ಶ್ರೀ ತೇಜಸ್ ಶಿವಾಚಾರ್ಯ ಸ್ವಾಮೀಜಿ, ಡಾ. ಮಾಳೇನಹಳ್ಳಿ ಬಸಪ್ಪ, ಅಜ್ಜಂಪುರ ತಾಲೂಕು ಅಧ್ಯಕ್ಷ ಮರುಳ ಸಿದ್ದಪ್ಪ, ಚಂದ್ರಪ್ರಕಾಶ್, ಚಿಕ್ಕನಲ್ಲೂರು ಜಯಣ್ಣ, ತಿಪ್ಪೇಶ್, ಓಂಕಾರ್, ಪಾಟೀಲ್, ನಾಗಭೂಷಣ ಮತ್ತಿತರರು ಇದ್ದರು.

11 ಕೆಕೆಡಿಯು2

ಅಜ್ಜಂಪುರದ ನಂದೀಪುರ ಮಠದಲ್ಲಿ ಚಿಕ್ಕಮಗಳೂರು ಜಿಲ್ಲೆ ಘಟಕದಿಂದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ಹಾಗೂ ಕಾರ್ತಿಕ ಮಹೋತ್ಸವದ ಅಂಗವಾಗಿ ಜಾನಪದ ಗೀತೋತ್ಸವ ಸಂಭ್ರಮ ವನ್ನು ಹುಣಸಘಟ್ಟದ ಶ್ರೀಗಳು ಉಧ್ಘಾಟಿಸಿದರು.