ಸಾರಾಂಶ
- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಬದುಕಿಗೆ ಅರ್ಥ, ಸಮಸ್ಯೆಗೆ ಪರಿಹಾರವೇ ಜಾನಪದ ಎಂದು ಜಾನಪದ ಚಂದ್ರಪ್ಪ ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಾನಪದ ಚಂದ್ರಪ್ಪ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಟ್ಟಣದ ಗಾಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಉಪನ್ಯಾಸ ನೀಡಿ ಮಾತಿನಾಡಿದರು. ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತದೆ. ಪ್ರತಿಯೊಂದು ಸಮಾಜವೂ ತನ್ನ ಪುರಾತನರ ಸಾರ ಹೀರಿ ತನ್ನ ಸದ್ಯದ ಬದುಕಿ ಗೊಂದು ಅರ್ಥವನ್ನೂ, ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರ, ತನ್ನ ಭಕ್ತಿಗೊಂದು ರೂಪ - ಕಲೆ, ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ ಎಂದು ಹೇಳಿದರು.ಹಿಂದಿನ ಕಾಲದ ಸಂಸ್ಕೃತಿ ಹಾಗೂ ಇಂದಿನ ಕಾಲದಲ್ಲಿರುವ ಸಂಸ್ಕೃತಿ ಪ್ರಗತಿ ಹೇಗೆ ಸಾಗುತ್ತಿದೆ. ಇಂದಿನ ಕಾಲದ ಕುಟುಂಬದ ವ್ಯವಸ್ಥೆ, ಅವರ ಭಾಷೆ, ವೇಷ, ಸಂಪ್ರದಾಯ, ವಿಚಾರ, ಪ್ರಸ್ತುತ ಅತ್ತೆ ಸೊಸೆಯರ ಸಂಬಂಧ, ತಂದೆ ತಾಯಿ, ಮಕ್ಕಳ ಸಂಬಂಧ, ಕುಟುಂಬದವರ ಜೊತೆಗಿನ ಸಂಬಂಧ ಕುರಿತು ಮಾತನಾಡಿ, ಜಾನಪದ ಶೈಲಿಯ ಹಾಡುಗಳನ್ನು ಹೇಳಿದರು.ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್ ಮಾತನಾಡಿ, ಮನೆಯಲ್ಲಿ ಖುಷಿ, ಶಾಂತಿ, ನೆಮ್ಮದಿಯಿಂದ ಬದುಕಬೇಕು. ನಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ, ಉನ್ನತಿ, ಶಿಸ್ತು ಎಂಬುದು ಜೀವನದ ಅತ್ಯುತ್ತಮ ಸಂಗತಿ ಅಳವಡಿಸಿ ಕೊಳ್ಳಬೇಕು. ತಂದೆ, ತಾಯಿಯನ್ನು ಗೌರವಿಸಬೇಕು. ನಂತರ ಗುರುಗಳನ್ನು ಪೂಜಿಸಬೇಕು. ಬಾಲ್ಯದ ದಿನಗಳನ್ನು ಮೆಲಕು ಹಾಕುತ್ತಾ ನಮ್ಮ ಶಾಲೆಗೆ ಹಲವಾರು ಸವಲತ್ತುಗಳನ್ನು ಮಾಡಿಸಿ ಕೊಡುತ್ತೇನೆ ಎಂದ ಅವರು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ನಮ್ಮ ನಾಡು ನುಡಿ ಪರಂಪರೆ ಕನ್ನಡ ಸಾಹಿತ್ಯ ಉಳಿಸಬೇಕು. ಗೌರವಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುನಿತಾ ಮಾತನಾಡಿ ನಮ್ಮ ಕನ್ನಡ ನಾಡು ನುಡಿ ಬಗ್ಗೆ ಹೇಳಿ ಹಲವಾರು ರಾಜರು, ರಾಜ ಮನೆತನಗಳು ನಾಡನ್ನಾಳಿದ ಅರಸರ ಆಶ್ರಯ ಪಡೆದ ಕವಿಗಳು ರಾಜಾಶ್ರಯದಲ್ಲಿ ಸಾಹಿತ್ಯ ರಚಿಸಿದ್ದಾರೆ. ಹಲ್ಮೀಡಿ ಶಾಸನದಲ್ಲಿ ಕನ್ನಡದಲ್ಲಿ ಉಲ್ಲೇಖದ ಬಗ್ಗೆ ತಿಳಿಸಿದ ಅವರು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಹಾಕಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನಮ್ಮ ಶಾಲೆ ಮಕ್ಕಳಿಗೆ ಒದಗಿ ಬಂದಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ. ಕನ್ನಡ ಶಾಲೆಗಳು ಉಳಿಯಬೇಕೆಂದರೆ ಉತ್ತಮ ಯೋಜನಾ ಬದ್ಧ ಕಲಿಕೆಯಾಗಬೇಕು. ಕನ್ನಡ ಪುಸ್ತಕವನ್ನು ಹೆಚ್ಚು ಓದುವುದರಿಂದ ಪರಿಪೂರ್ಣ ಜ್ಞಾನ ಸಂಪಾದಿಸ ಬಹುದು ಎಂದು ತಿಳಿಸಿದರು. ಕನ್ನಡದ ಸಣ್ಣ ಸಣ್ಣ ಕಥೆಗಳನ್ನು ಕೇಳುವ, ಆಲಿಸುವ ಹಾಗೂ ಹೇಳುವ ಮೂಲಕ ಕನ್ನಡದ ವಿಚಾರ ಕಲಿಯಬಹುದು ಎಂದು ಹೇಳಿದರು.ಶಾಲೆ ಮುಖ್ಯ ಶಿಕ್ಷಕರು ಜಯ ಕುಮಾರಾಚಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಕೃತಿ ಚಿಂತಕರು ಓಂಪ್ರಕಾಶ್ ಶಿರ್ವಿ ಅವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಗಾಯಕ ಮಂಜುನಾಥ್ ಹಾಡು ಹಾಡಿದರು.
ರಂಗ ಪರಿಕರ ಸಂಗ್ರಹಕಾರ ಕೃಷ್ಣಮೂರ್ತಿ ಅಜ್ಜಂಪುರ, ಶಿವನಿ ಎಸ್. ಸಾಕಮ್ಮ , ಸುನಿತಾ ಕಿರಣ್, ಕುಸುಮಾ ಎನ್.ಆರ್. ಸುಧಾ ಕೆ.ಎಸ್. ದರ್ಶಿನಿ ಭಾಗವಹಿಸಿದ್ದರು.--5ಕೆಟಿಆರ್.ಕೆ. 8ಃ ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ಅಜ್ಜಂಪುರ ತಾ.ಕಸಾಪ ಅಧ್ಯಕ್ಷ ಜಾನಪದ ಚಂದ್ರಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಯ ಕುಮಾರಾಚಾರ್ ಮತ್ತಿತರರು ಭಾಗವಹಿಸಿದ್ದರು.