ಯುವ ಪೀಳಿಗೆ ಸಂಪ್ರದಾಯ ಸಂಸ್ಕೃತಿ ಪಾಲಿಸಿ

| Published : Feb 29 2024, 02:01 AM IST

ಸಾರಾಂಶ

ಸಮಾಜ ಸಂಘಟನೆಯಿಂದ ಪ್ರತಿಭಾನ್ವಿತ ಹಾಗೂ ಉತ್ಸಾಹಿ ಯುವ ಪೀಳಿಗೆಗೆ ಪ್ರೋತ್ಸಾಹ ದೊರೆಯುತ್ತದೆ. ಹಿರಿಯರು ನಾವು ಸದಾ ಇವರ ಹಿಂದೆ ಇದ್ದು ಸ್ವಯಂ ಸ್ಪೂರ್ತಿ ತುಂಬಬೇಕು

ಗದಗ: ಯುವ ಪೀಳಿಗೆ ನಮ್ಮ ಸಂಪ್ರದಾಯ ಸಂಸ್ಕೃತಿ ಪರಂಪರೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಹಿರಿಯರನ್ನು ಗೌರವಿಸಿ ಸಮಾಜದಲ್ಲಿ ಸಂಘಟನೆಯಿಂದ ಮುಂದುವರೆಯಬೇಕು ಎಂದು ಸಂತೋಷ ಅಕ್ಕಿ ಹೇಳಿದರು.

ನಗರದ ಪಂಚಮಸಾಲಿ ಮಹಿಳಾ ಸಂಘದ ಕಾರ್ಯಾಲಯದಲ್ಲಿ ಜರುಗಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜವು ದೊಡ್ಡ ಸಮಾಜವಾಗಿದ್ದು, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಯುವ ಪೀಳಿಗೆ ಮುನ್ನಡೆಯಡಬೇಕಾಗಿದೆ.ನಾನು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿರುವದು ಎಲ್ಲ ಹಿರಿಯರ ಆಶೀರ್ವಾದವೇ ಕಾರಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಉಗಲಾಟ ಮಾತನಾಡಿ, ಸಮಾಜ ಸಂಘಟನೆಯಿಂದ ಪ್ರತಿಭಾನ್ವಿತ ಹಾಗೂ ಉತ್ಸಾಹಿ ಯುವ ಪೀಳಿಗೆಗೆ ಪ್ರೋತ್ಸಾಹ ದೊರೆಯುತ್ತದೆ. ಹಿರಿಯರು ನಾವು ಸದಾ ಇವರ ಹಿಂದೆ ಇದ್ದು ಸ್ವಯಂ ಸ್ಪೂರ್ತಿ ತುಂಬಬೇಕು ಎಂದರು.

ಜಿಲ್ಲಾ ಚೇಂಬರ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜಯಶ್ರೀ ಪಾಟೀಲ ಮಾತನಾಡಿ, ರೈತಾಪಿ ಕುಟುಂಬವೇ ಪಂಚಮಸಾಲಿಗಳದ್ದು, ಇತ್ತೀಚೆಗೆ ಅನೇಕ ಸಮಾಜ ಬಾಂಧವರು ವಿವಿಧ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸ್ಥಾನ ಮಾಡುವ ಮೂಲಕ ಸಾಧನೆಯ ಹಾದಿಯಲ್ಲಿರುವದು ಸಮಾಜದ ಪ್ರಗತಿ ಎಂದರು.

ಈ ವೇಳೆ ಅನ್ನಪೂರ್ಣ ಮಾಡಲಗೇರಿ, ವಿಜಯಶ್ರೀ ಇಲಕಲ್, ಸುಮಂಗಲಾ ಕೊನೆಹೊಲ, ಗೀತಾ ಉಗಲಾಟದ, ಮಂಜುಳಾ ತಂಗೋಡಿ, ಶಾರದಾ ಕರಮುಡಿ, ಗಂಗಾ ತಂಗೋಡಿ, ಶೋಭಾ ಬೈರಿ ಉಪಸ್ಥಿತರಿದ್ದರು.

ಮಾಧುರಿ ಮಾಳೇಕೊಪ್ಪ, ಶಶಿಕಲಾ ಮಾಲೀಪಾಟೀಲ ಪ್ರಾರ್ಥಿಸಿದರು. ರೇಣುಕಾ ಅಮಾತ್ಯ ಸ್ವಾಗತಿಸಿದರು. ಸುಜಾತಾ ಗುಡಿಮನಿ ಪರಿಚಯಿಸಿದರು. ಸುಮಾ ಪಾಟೀಲ ನಿರೂಪಿಸಿದರು. ಶಿವಲೀಲಾ ಅಕ್ಕಿ, ಕಾವ್ಯ ಉಗಲಾಟದ ನಿರ್ವಹಿಸಿದರು. ಕಾವೇರಿ ಪಾಟೀಲ ವಂದಿಸಿದರು.