ಸಾರಾಂಶ
ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ಕಾರ್ಯಕ್ರಮವನ್ನು ವಿವೇಕಾನಂದ ಯೂಥ್ ಮೊಮೆಂಟ್‌ನ ಪ್ರದೀಪರೆಡ್ಡಿ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಭವಿಷ್ಯದ ಪೀಳಿಗೆಯನ್ನು ವೈಜ್ಞಾನಿಕ ಸುಧಾರಣೆಗೆ ಕೊಡುಗೆ ನೀಡಲು ಮತ್ತು ವಿಜ್ಞಾನದೊಂದಿಗೆ ಜಾಗತಿಕ ತೊಂದರೆಗಳನ್ನು ಪರಿಹರಿಸಲು ಪ್ರೇರೆಪಿಸುವ ಮೂಲಕ ನಮ್ಮ ರಾಷ್ಟ್ರದ ವೈಜ್ಞಾನಿಕ ಅಡಿಪಾಯವನ್ನು ಬಲಪಡಿಸಲು ವಿಜ್ಞಾನ ದಿನ ಸಹಕಾರಿಯಾಗಲಿದೆ ಎಂದು ವಿವೇಕಾನಂದ ಯೂಥ್ ಮೊಮೆಂಟ್‌ನ ಪ್ರದೀಪರೆಡ್ಡಿ ಹೇಳಿದರು.ತಾಲೂಕಿನ ಭೀಮನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ವಿವೇಕಾನಂದ ಯೂಥ್ ಮೂಮೆಂಟ್ ಸಹಯೋಗದಲ್ಲಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಯ ಮನಸ್ಸಿನಲ್ಲಿ ಕುತೂಹಲ ಹೆಚ್ಚಿಸುವುದರ ಜೊತೆ ಕಾರ್ಯಾಗಾರಗಳು, ಪ್ರದರ್ಶನಗಳು ಮತ್ತು ವಿಜ್ಞಾನ ಮೇಳಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಕ್ಕಳನ್ನು ಸಂವಾದಾತ್ಮಕ ಮತ್ತು ಮೋಜಿನ ರೀತಿಯಲ್ಲಿ ವಿಜ್ಞಾನಕ್ಕೆ ಅನುಕೂಲವಾಗಿ ಅದರ ಮೇಲೆ ಉತ್ಸಾಹ ಹೆಚ್ಚಿಸಲು ಪ್ರೇರೆಪಿಸುತ್ತದೆ ಎಂದರು.ಮುಖ್ಯಗುರುಗಳಾದ ಮಂಜುನಾಥ ಕಡ್ಲೆಗುಂದಿ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನವು ಭಾರತದಾದ್ಯಂತ ವಿವಿಧ ವೈಜ್ಞಾನಿಕ ಕ್ಷೇತ್ರಗಳಲ್ಲಿ ಇತ್ತೀಚಿನ ಸಾಧನೆಗಳು ಮತ್ತು ಪ್ರಾರಂಭಗಳಿಗೆ ಒಂದು ಪ್ರದರ್ಶನವಾಗಿದೆ. ಇದು ರಾಷ್ಟ್ರೀಯ ಹಮ್ಮೆ ಬೆಳೆಸುತ್ತದೆ ಮತ್ತು ಭವಿಷ್ಯದ ಪೀಳಿಗೆಯನ್ನು ವೈಜ್ಞಾನಿಕ ವೃತ್ತಿಯನ್ನು ಮುಂದುವರಿಸಲು ಪ್ರೇರೇಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೇಶ್ಮಾ, ನಾಗನಗೌಡ ವೇದಿಕೆಯಲ್ಲಿದ್ದರು. ಸಹಶಿಕ್ಷಕ ಗಂಗಾಧರ ಸ್ವಾಗತಿಸಿದರು. ಈರಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ನಾಗನಗೌಡ ನಿರೂಪಿಸಿ ವಂದಿಸಿದರು.