ಸಾರಾಂಶ
ಕೆ.ಪಿ.ಎಂ.ಇ. ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ 6 ಜನರಿಗೆ ತಲಾ 1 ಲಕ್ಷ ರು., 28 ಜನರಿಗೆ ತಲಾ 50 ಸಾವಿರ ರು., 13 ಜನರಿಗೆ ತಲಾ 10 ಸಾವಿರ ರು. ಓರ್ವನಿಗೆ 5 ಸಾವಿರ ರು. ದಂಡ ವಿಧಿಸಿ ಒಂದು ವಾರದೊಳಗೆ ದಂಡ ಕಟ್ಟಲು ಆದೇಶಿಸಿಲಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಯಮ-2009 ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲೆಯ 48 ಆಸ್ಪತ್ರೆ ಮತ್ತು ವೈದ್ಯರಿಗೆ ಒಟ್ಟು ₹21.35 ಲಕ್ಷ ದಂಡ ವಿಧಿಸಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ನಡೆದ ಕೆ.ಪಿ.ಎಂ.ಇ ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರ ಸಭೆಯಲ್ಲಿ ನಿರ್ಧರಿಸಲಾಗಿದೆ.ಕೆ.ಪಿ.ಎಂ.ಇ. ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ 6 ಜನರಿಗೆ ತಲಾ 1 ಲಕ್ಷ ರು., 28 ಜನರಿಗೆ ತಲಾ 50 ಸಾವಿರ ರು., 13 ಜನರಿಗೆ ತಲಾ 10 ಸಾವಿರ ರು. ಓರ್ವನಿಗೆ 5 ಸಾವಿರ ರು. ದಂಡ ವಿಧಿಸಿ ಒಂದು ವಾರದೊಳಗೆ ದಂಡ ಕಟ್ಟಲು ಆದೇಶಿಸಿಲಾಗಿದೆ. ಉಳೀದಂತೆ ಓರ್ವ ವೈದ್ಯನಿಗೆ ಎಚ್ಚರಿಕೆ ನೀಡಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ನ್ಯಾಯಾಲಯದಲ್ಲಿ ಮೊಕದೊಮ್ಮೆ ಹೂಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಸಿ. ಅವರು ಎಚ್ಚರಿಕೆ ನೀಡಿದ್ದಾರೆ.
ಕಳೆದ ಡಿಸೆಂಬರ್ ದಿಂದ ಫೆಬ್ರವರಿ ಮಾಹೆ ವರೆಗೆ ಆರೋಗ್ಯ ಇಲಾಖೆಯಿಂದ ನಿಯಮಿತ ದಾಳಿ ನಡೆಸಿ ಒಟ್ಟು 49 ಆಸ್ಪತ್ರೆ ಮತ್ತು ವೈದ್ಯರ ಮೇಲೆ ಕೆ.ಪಿ.ಎಂ.ಇ. ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇಲಾಖಾ ಎಫ್.ಐ.ಆರ್. ದಾಖಲಿಸಲಾಗಿತ್ತು. ಬುಧವಾರ ನಡೆದ ಸಭೆಗೆ ಸದರಿ ಆಸ್ಪತ್ರೆ, ವೈದ್ಯರ ಅಹವಾಲು ಆಲಿಸಲು ಆಹ್ವಾನಿಸಲಾಗಿತ್ತು. ಈ ಪೈಕಿ ಸುಮಾರು 33 ಜನ ಹಾಜರಾಗಿದ್ದರು.ಸಭೆಯಲ್ಲಿ ಡಿ.ಎಚ್.ಓ. ಡಾ.ರತಿಕಾಂತ ಸ್ವಾಮಿ, ಐ.ಎಂ.ಎ. ಅಧ್ಯಕ್ಷ ಡಾ. ಗುರುಲಿಂಗಪ್ಪ, ಜಿಲ್ಲಾ ಆಯೂಷ್ ಅಧಿಕಾರಿ ಡಾ.ಗಿರಿಜಾ ನಿಗ್ಗುಡಗಿ ಸೇರಿದಂತೆ ಇನ್ನಿತರ ಇದ್ದರು.