ಆನೆಗೊಂದಿ ಪೇಟೆಯೊಳಗೆ- ಅಮ್ಮಸಂದ್ರ, ದಂಡಿನಶಿವರ ಗ್ರಾಮಚರಿತೆ...

| Published : Apr 22 2025, 01:54 AM IST

ಆನೆಗೊಂದಿ ಪೇಟೆಯೊಳಗೆ- ಅಮ್ಮಸಂದ್ರ, ದಂಡಿನಶಿವರ ಗ್ರಾಮಚರಿತೆ...
Share this Article
  • FB
  • TW
  • Linkdin
  • Email

ಸಾರಾಂಶ

ನನ್ನೂರು'''' ಅಧ್ಯಾಯದಲ್ಲಿ ಸಿಮೆಂಟ್‌ ಕಾರ್ಖಾನೆ ಬಂದು ಸುತ್ತಮುತ್ತಲಿನ ಜನರ ಆರ್ಥಿಕ ಸ್ಥಿತಿಗತಿ ಹೇಗೆ ಬದಲಾಯಿತು? ಎಂಬುದನ್ನು ವಿವರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು ಇಲ್ಲಿನ ಅಂಚೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿರುವ ಡಾ.ಅಮ್ಮಸಂದ್ರ ಸುರೇಶ್‌ ಅವರು ''''''''ಆನೆಗೊಂದಿ ಪೇಟೆಯೊಳಗೆ'''''''' ಎಂಬ ಜಾನಪದ ಕೃತಿಯನ್ನು ಪ್ರಕಟಿಸಿದ್ದಾರೆ. ಇದು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಅಮ್ಮಸಂದ್ರ- ದಂಡಿನ ಶಿವರ ಎಂಬ ಜೋಡಿ ಗ್ರಾಮಗಳ ಚರಿತೆಯಾಗಿದೆ.ಒಂದು ಕಾಲಕ್ಕೆ ಅಮ್ಮಸಂದ್ರ ಅಂದರೆ ಸಿಮೆಂಟ್‌ಗೆ ಫೇಮಸ್‌. ಹೀಗಾಗಿ ಡಾ.ಸುರೇಶ್‌ ಅವರು ''''''''ನನ್ನೂರು'''''''' ಅಧ್ಯಾಯದಲ್ಲಿ ಸಿಮೆಂಟ್‌ ಕಾರ್ಖಾನೆ ಬಂದು ಸುತ್ತಮುತ್ತಲಿನ ಜನರ ಆರ್ಥಿಕ ಸ್ಥಿತಿಗತಿ ಹೇಗೆ ಬದಲಾಯಿತು? ಎಂಬುದನ್ನು ವಿವರಿಸಿದ್ದಾರೆ. ಜೊತೆಗೆ ಕಾರಬ್ಬ, ನಾಗರಹಬ್ಬ, ಶನಿವಾರಗಳು ಅದರಲ್ಲೂ ಶ್ರಾವಣ ಶನಿವಾರ ಆಚರಣೆ ಹೇಗಿರುತ್ತದೆ ಎಂಬುದನ್ನು ದಾಖಲಿಸಿದ್ದಾರೆ. ಅಮ್ಮಸಂದ್ರ- ದಂಡಿನ ಶಿವರ ಎರಡು ಅಕ್ಕಪಕ್ಕದ ಊರುಗಳು, ಬೆಳದಂತೆಲ್ಲಾ ಜೋಡಿಗ್ರಾಮಗಳಾಗಿವೆ. ಹೀಗಾಗಿ ''''''''ಎಲ್ಲರಿಗೂ ಒಂದೂರಾದರೆ ನನಗೆ ಎರಡೂರು'''''''' ಎಂದು ಎರಡು ಗ್ರಾಮಗಳ ಸಂಪೂರ್ಣ ಚಿತ್ರವನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.ಬರದಬೀಡಾಗಿದ್ದ ಸುತ್ತಮುತ್ತಲಿನ ಗ್ರಾಮಗಳು ಹೇಮಾವತಿ ನದಿಯ ನೀರು ಬಂದ ನಂತರ ಬದಲಾಗಿರುವುದನ್ನು ಹಸಿರಿನ ಉಲ್ಲಾಸ ಕಂಡುಬಂದಿರುವುದನ್ನು ವಿವರಿಸಿದ್ದಾರೆ.ಸೂತಕವಿಲ್ಲದ ಮನೆಯಿಲ್ಲ- ಒಂದು ರೀತಿಯಲ್ಲಿ ಸಾವಿಲ್ಲದ ಮನೆಯಿಂದ ಸಾಸುವೆ ತಾ ಎಂಬಂತೆ ಇದೆ. ಯಾರದಾದರೂ ಮನೆಯಲ್ಲಿ ಸೂತಕ ಉಂಟಾದಾಗ ಅದನ್ನು ತೆಗೆಯುವ ದಾಸಪ್ಪ ಮತ್ತು ಜೋಗಪ್ಪಂದಿರ ಪಾತ್ರ ಇಲ್ಲಿದೆ. ''''''''ನನ್ನೂರಿನ ಜಾನಪದ'''''''' ಅಧ್ಯಾಯದಲ್ಲಿ ಯಕ್ಷಗಾನ, ಮುಖವೀಣೆ, ಸೋಮನ ಕುಣಿತ, ಕೋಲಾಟ, ನಗಾರಿ ವಾದ್ಯ, ಸೋಬಾನೆ ಪದ, ಭಜನೆ, ರಂಗಭೂಮಿ, ಚಲನಚಿತ್ರ, ಕ್ರೀಡೆಯ ವಿವರ, ಸಾಧಕರನ್ನು ಪರಿಚಯಿಸಿದ್ದಾರೆ. ಭರತ ಖಂಡದಲ್ಲಿಯೂ ಎಲ್ಲಿಯೂ ಕಂಡು ಬರದ ಕುರುಡು ಸೋಮಗಳು ಇಲ್ಲಿನ ವಿಶೇಷತೆ.ದಂಡಿನಶಿವರ ಹೊನ್ನಾದೇವಿ ದೇವಾಲಯ. ಹೊನ್ನಾದೇವಿ ಜಾತ್ರೆ, ಹೊನ್ಮಮ್ಮ ಹೊರಟಾಳೆ ಬಸವಾನ ಬೆನ್ನೇರಿ! ಕುರಿತು ಮಾಹಿತಿ ಇದೆ. ನನ್ನೂರಿನ ಹಬ್ಬಗಳು ಮತ್ತು ಆಚರಣೆಗಳು ಅಧ್ಯಾಯದಲ್ಲಿ ಸುಂಕಿಮಾರಿ ಹಬ್ಬ, ಕಾಲಘಟ್ಟಮ್ಮನ ಹಬ್ಬ, ಕಣಿವೆ ಮಲ್ಲಪ್ಪನ ಆಚರಣೆ, ಹರಿಸೇವೆ, ಹೊಸ ಹೊಸ ಹಬ್ಬಗಳ ಆಚರಣೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಮೊಹರಂ ಹಬ್ಬ ಯಾವ ರೀತಿ ಭಾವೈಕ್ಯತೆಯ ಸಂಕೇತವಾಗಿದೆ ಎಂಬುದನ್ನು ಕೂಡ ದಾಖಲಿಸಿದ್ದಾರೆ. ದಂಡಿನಶಿವರದ ಹೊನ್ನಾದೇವಿಗೂ ನಾಗಮಂಗಲದ ಬಡಗುಡಮ್ಮನಿಗೂ ಸಂಬಂಧವಿದೆಯೇ? ಎಂಬುದನ್ನು ವಿಮರ್ಶಾತ್ಮಕವಾಗಿ ನೋಡಿದ್ದಾರೆ.''''''''ನನ್ನೂರಿನ ಸಾಧಕರು'''''''' ಅಧ್ಯಾಯದಲ್ಲಿ ದಾಖಲೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅವರಿಂದ ಹಿಡಿದು ಜಾನಪದ ತಜ್ಞ ಡಾ.ಡಿ.ಕೆ. ರಾಜೇಂದ್ರ, ಡಿ.ಎಚ್‌. ವೀರಯ್ಯ, ಕೋಲಾಟದ ರಂಗಣ್ಣ, ಕಾಂಗ್ರೆಸ್‌ ನಂಜಪ್ಪ, ವಿದ್ವಾನ್‌ ನರಸಿಂಹಾಚಾರ್‌, ಡಿ.ಎಸ್. ಗಂಗಾಧರಗೌಡ,ಡಿ.ಟಿ. ವೆಂಕಟೇಶ್‌, ಶಿವಮೊಗ್ಗಿ ಬೋರೇಗೌಡ, ಗುಡಿಗೌಡರ ಸಿದ್ದೇಗೌಡ. ಈಶ್ವರ ದಲ ಮಾತ್ರವಲ್ಲದೇ ಕಾರ್ಮಿಕ ನಾಯಕ ಎನ್‌. ಶಿವಣ್ಣ ಅವರ ವ್ಯಕ್ತಿಪರಿಚಯವೂ ಇದೆ.ಇದರ ಜೊತೆಗೆ ''''''''ನನ್ನೂರಿನ ವಿಶಿಷ್ಟ ವ್ಯಕ್ತಿಗಳು'''''''' ಎಂದು ನಮ್ಮೂರ ಜೋಗಪ್ಪ, ಜೋಗಿರ ರಾಜಪ್ಪ, ಬುದ್ಧಿವಂತ ಸೋಮ, ಅರಕೆರೆಯ ದಾಸಪ್ಪ, ವೀರಣ್ಣ, ಪೋಸ್ಟ್‌ ಗುಂಡಣ್ಣ, ನರಸಿಂಹ, ವಿಶ್ವಮಾನವ ಅಗ್ರ, ಶಾಸ್ತ್ರದ ಕೆಂಪನಿಂಗಜ್ಜ, ಅನಾನುಬಾಹು ಶಿವಣ್ಣ ಅವರ ಬಗ್ಗೆ ಪರಿಚಯವಿದೆ. ಅದರಲ್ಲೂ ಸಾಕ್ಷರತಾ ಪ್ರಮಾಣ ಕಡಿಮೆ ಇದ್ದಾಗ ಪೋಸ್ಟ್‌ ಹಂಚಲು ಹೋಗುತ್ತಿದ್ದ ಗುಂಡಣ್ಣ ತಾನೇ ಪತ್ರ ಒಡೆದು, ಅದರೊಳಗಿನ ವಿವರಗಳನ್ನು ತಿಳಿಸಿ ಬರುತ್ತಿದ್ದ ಸ್ವಾರಸ್ಯಕರ ಸಂಗತಿಗಳು ಇವೆ. ಡಾ.ಅಮ್ಮಸಂದ್ರ ಸುರೇಶ್‌ ಅವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌.ಡಿ ಹಾಗೂ ಸಂಗೀತ ವಿವಿಯಿಂದ ಡಿ.ಲಿಟ್‌ ಪಡೆದವರು. ಹೀಗಾಗಿ ಈ ಕೃತಿಯಲ್ಲಿ ಅವರ ಸಂಶೋಧನಾತ್ಮಕ, ವಿಮರ್ಶಾತ್ಮಕ ಚಿಕಿತ್ಸಕ ನೋಟವೂ ಹರಿದಿದೆ. ಬದಲಾದ ಸಾಮಾಜಿಕ ವ್ಯವಸ್ಥೆಗಳತ್ತ ಒಂದು ಸಂಶೋಧನಾತ್ಮಕ ನೋಟವನ್ನೂ ಹರಿಸಿದ್ದಾರೆ. ಮದುವೆ ಎಂಬ ಸಾಂಪ್ರದಾಯಿಕ ಚೌಕಟ್ಟು ತೋರ್ಪಡಿಕೆಗೆ ಮರಳಾದ ಬಗೆ, ನೂತನ ವಧು-ವರರ ಮೆರವಣಿಗೆ, ಸೋಬಾನೆ ಪದ, ಪ್ರಸ್ತುತ ಮತ್ತು ಭವಿಷ್ಯದ ಮದುವೆಗಳು, ಮಂತ್ರಮಾಂಗಲ್ಯ ಮತ್ತು ವಿವಾಹ ಸಂಹಿತೆ ಕುರಿತು ವಿಶ್ಲೇಷಣಾತ್ಮಕ ವ್ಯಾಖ್ಯಾನವಿದೆ.ಇತಿಹಾಸ ಅರಿಯಬೇಕಾದರೆ ಮೊದಲ ಗ್ರಾಮಗಳ ಚರಿತ್ರೆಯನ್ನು ಅರಿಯಬೇಕು. ಗ್ರಾಮಗಳ ಒಟ್ಟು ಚರಿತ್ರೆಯೆ ದೇಶದ ಚರಿತ್ರೆ. ಹೀಗಾಗಿ ಗ್ರಾಮಗಳ ಎಲ್ಲಾ ರೀತಿಯ ವಿಷಯಗಳನ್ನು ಮುಂದಿನ ಪೀಳಿಗೆಗೆ ದಾಖಲೆ ಮೂಲಕ ನೀಡುವುದು ಕೂಡ ಮುಖ್ಯ. ವ್ಯಕ್ತಿಗಳು ಬದಲಾಗಬಹುದು. ಆದರೆ ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ಈ ರೀತಿಯ ಆಚರಣೆಗಳು ಇದ್ದೇ ಇರುತ್ತವೆ. ತಮ್ಮ ಗ್ರಾಮಗಳ ಚರಿತ್ರೆಯನ್ನು ದಾಖಲು ಮಾಡುವವರಿಗೆ ಇದೊಂದು ರೀತಿಯಲ್ಲಿ ಆಕರ ಗ್ರಂಥದಂತಿದೆ. ಕಳೆದ ಐವತ್ತು ವರ್ಷಗಳ ಇತಿಹಾಸ ಇಲ್ಲಿ ದಾಖಲಾಗಿದೆ. ಜಾನಪದದ ಬಗ್ಗೆ ,ಸಂಶೋಧನೆಯ ಬಗ್ಗೆ, ಗ್ರಾಮ ಚರಿತ್ರೆಗಳ ಬಗ್ಗೆ ಆಸಕ್ತಿ ಇರುವವರು ಕುತೂಹಲದಿಂದ ಓದಬಹುದಾದ ಕೃತಿ ಇದು.ಈ ಕೃತಿಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ, ಜಾನಪದ ತಜ್ಞ ಪ್ರೊ.ಡಿ.ಕೆ. ರಾಜೇಂದ್ರ ಅವರು ಮುನ್ನುಡಿ ಬರೆದಿದ್ದಾರೆ. ಮೈಸೂರಿನ ಎನ್‌ಕೆಎಸ್‌ ಪ್ರಕಾಶನ ಪ್ರಕಟಿಸಿದೆ. ಆಸಕ್ತರು ಮೊ.97418 15817, ಡಾ. ಅಮ್ಮಸಂದ್ರ ಸುರೇಶ್‌, ಮೊ. 94484 02346 ಸಂಪರ್ಕಿಸಬಹುದು.---