ಸಾರಾಂಶ
ದೇಶ ಮೊದಲು, ಜನರ ಹಿತ ಮೊದಲು ಎಂಬುದು ಬಿಜೆಪಿ ಸಿದ್ಧಾಂತವಾಗಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂಬ ನಿಸ್ವಾರ್ಥ ನೀತಿಯ ಕಾರಣದಿಂದ ದೇಶದಲ್ಲಿ ಬಿಜೆಪಿ 3ನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ.
ಬ್ಯಾಡಗಿ: ಜಗತ್ತಿನಲ್ಲಿಯೇ ಹೆಚ್ಚು ಕಾರ‍್ಯಕರ್ತರನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದು, ನರೇಂದ್ರ ಮೋದಿಯ ಅವರ ಆಡಳಿತದಿಂದ ಭಾರತ 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ನೂತನ ತಾಲೂಕಾಧ್ಯಕ್ಷರ ಪದಗ್ರಹಣ ಕಾರ‍್ಯಕ್ರಮದಲ್ಲಿ ಮಾತನಾಡಿದರು.ದೇಶ ಮೊದಲು, ಜನರ ಹಿತ ಮೊದಲು ಎಂಬುದು ಬಿಜೆಪಿ ಸಿದ್ಧಾಂತವಾಗಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂಬ ನಿಸ್ವಾರ್ಥ ನೀತಿಯ ಕಾರಣದಿಂದ ದೇಶದಲ್ಲಿ ಬಿಜೆಪಿ 3ನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾದ್ಯವಾಗಿದೆ ಎಂದರು.
ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ನೂತನ ತಾಲೂಕಾಧ್ಯಕ್ಷರು ಹೆಚ್ಚಿನ ಒತ್ತು ನೀಡಬೇಕಿದೆ. ಬೂತ್ ಮಟ್ಟದಲ್ಲಿ ಕೆಳ ಹಂತದಿಂದಲೇ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡಲು ಕಾರ‍್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಬೇಕಿದೆ ಎಂದರು.ನಿರ್ಗಮಿತ ಬಿಜೆಪಿ ಅಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ, ಕಳೆದ ಎರಡು ವರ್ಷದಿಂದ ಪಕ್ಷ ಸಂಘಟನೆಗೆ ಸಾಕಷ್ಟು ಒತ್ತು ನೀಡಿದ್ದೇನೆ. ಬಿಜೆಪಿ ಸದಸ್ಯತ್ವ ಅಭಿಯಾನ ಸಹ ಯಶಸ್ವಿ ಮಾಡಿದ್ದೇನೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 20 ಸಾವಿರ ಮತಗಳ ಮುನ್ನಡೆ ಗಳಿಸಲು ಶ್ರಮಿಸಿದ್ದೇನೆ. ಮುಂಬರುವ ದಿನಗಳಲ್ಲಿ ಪಕ್ಷವನ್ನು ಬಲಪಡಿಸಲು ನೂತನ ಅಧ್ಯಕ್ಷ ರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.ನೂತನ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಕಾರ‍್ಯಕರ್ತರನ್ನು ಗುರುತಿಸಿ ಉನ್ನತ ಹುದ್ದೆ ನೀಡುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದರು.
ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮಾಜಿ ಶಾಸಕ ಶಿವರಾಜ ಸಜ್ಜನ, ಬಸವರಾಜ ಛತ್ರದ, ಎನ್.ಎಂ. ಈಟೇರ, ಶಿವಕುಮಾರ ಮುದ್ದಪ್ಪಳವರ, ವಿರುಪಾಕ್ಷಪ್ಪ ಕಡ್ಲಿ, ಭೋಜರಾಜ ಕರೂದಿ, ಶಿವಬಸಪ್ಪ ಕುಳೆನೂರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಪುರಸಭೆ ಉಪಾಧ್ಯಕ್ಷ ಸುಭಾಷ ಮಾಳಗಿ, ಒಬಿಸಿ ಮೋರ್ಚಾ ಅಧ್ಯಕ್ಷ ನೀಲಪ್ಪ ಚಾವಡಿ, ವಿಜಯಭರತ ಬಳ್ಳಾರಿ, ಹಾಲೇಶ ಜಾಧವ, ಎಂ.ಎಸ್. ಪಾಟೀಲ, ನಂಜುಂಡೇಶ ಕಳ್ಳೇರ, ಪುರಸಭೆ ಸದಸ್ಯರಾದ ವಿನಯಕುಮಾರ ಹಿರೇಮಠ, ಕಲಾವತಿ ಬಡಿಗೇರ, ಕವಿತಾ ಸೊಪ್ಪಿಮನಠ ಇತರರು ಇದ್ದರು.