ಭದ್ರಾ ಡ್ಯಾಂ ನೀರು ಹರಿಸದಂತೆ ಒತ್ತಾಯ

| Published : May 24 2024, 12:48 AM IST

ಸಾರಾಂಶ

ಭದ್ರಾ ಡ್ಯಾಂನಿಂದ ನದಿಗೆ ನಿತ್ಯವೂ 2 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದೆ. ಆದೇಶ ಶೀಘ್ರ ಹಿಂಪಡೆಯಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಒತ್ತಾಯಿಸಿದೆ.

ದಾವಣಗೆರೆ: ಭದ್ರಾ ಡ್ಯಾಂನಿಂದ ನದಿಗೆ ನಿತ್ಯವೂ 2 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದೆ. ಆದೇಶ ಶೀಘ್ರ ಹಿಂಪಡೆಯಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಒತ್ತಾಯಿಸಿದೆ.

ಒಕ್ಕೂಟದ ಮುಖಂಡರು ದೂರವಾಣಿ ಮೂಲಕ ವಿದೇಶಕ್ಕೆ ತೆರಳಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಸಂಪರ್ಕಿಸಿ ಮನವಿ ಮಾಡಿದರು. ಮುಖಂಡರ ಮನವಿಗೆ ಸಚಿವರು ತಕ್ಷಣಕ್ಕೆ ಸ್ಪಂದಿಸಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.

ತಕ್ಷಣವೇ ಭದ್ರಾ ಡ್ಯಾಂನಿಂದ ನೀರು ಹರಿಸದಂತೆ ಮರುಆದೇಶ ಹೊರಡಿಸಬೇಕಿದ್ದು, ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರ ಪರವಾಗಿ ನಿಲ್ಲುವುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ. ಜಿಲ್ಲೆಯ ರೈತರ ಪರ ಕೆಲಸ ಮಾಡುವ ಸಚಿವ ಎಸ್‌.ಎಸ್‌. ಅವರಿಗೆ ಒಕ್ಕೂಟದ ಮುಖಂಡರಾದ ಎಚ್.ಎಸ್. ಲಿಂಗರಾಜ, ಶಾನುಬೋಗರ ನಾಗರಾಜ ರಾವ್, ಎ.ಎಂ. ಮಂಜುನಾಥ, ಕುಂದುವಾಡ ಮಹೇಶ, ಪುನೀತ್, ಹನುಮಂತಪ್ಪ ಇತರರು ಕೃತಜ್ಞತೆ ಸಲ್ಲಿಸಿದ್ದಾರೆ.

- - -(ಸಾಂದರ್ಭಿಕ ಚಿತ್ರ)