ಕನ್ನಡಪ್ರಭ ವಾರ್ತೆ ಕುಶಾಲನಗರ ಕರ್ನಾಟಕ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗ ಆಶ್ರಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಯುವಜನರ ನಡುವೆ ಸಹಕಾರ, ಸ್ನೇಹ ಮತ್ತು ವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಅರಣ್ಯ ಇಲಾಖೆ ಮತ್ತು ಅರಣ್ಯ ಅಂಚಿನ ಗ್ರಾಮಗಳಿಂದ ಆಯ್ಕೆಯಾದ 12 ತಂಡಗಳಿಗೆ ಕುಶಾಲನಗರ ಚಿಕ್ಕತ್ತೂರು ಮೈದಾನದಲ್ಲಿ ಕ್ರಿಕೆಟ್ ಪಂದ್ಯವನ್ನು ಹಮ್ಮಿಕೊಂಡರು.
ಕ್ರೀಡಾಕೂಟದಲ್ಲಿ ಅತಿಥಿಗಳಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೆ ಪಿ ಚಂದ್ರಕಲಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮನು ನಂಜುಂಡ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಎ.ಸಿ.ಎಫ್. ಗೋಪಾಲ್ ಎ ಎ, ಮಂಜುನಾಥ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಇದ್ದರು.ಅರಣ್ಯ ಇಲಾಖೆ, ಅರಣ್ಯ ಅಂಚಿನ ಗ್ರಾಮಗಳ 12 ತಂಡಗಳ ಕ್ರಿಕೆಟ್
ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಯುವಜನರ ನಡುವೆ ಸಹಕಾರ, ಸ್ನೇಹ ಮತ್ತು ವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಅರಣ್ಯ ಇಲಾಖೆ ಮತ್ತು ಅರಣ್ಯ ಅಂಚಿನ ಗ್ರಾಮಗಳಿಂದ ಆಯ್ಕೆಯಾದ 12 ತಂಡಗಳಿಗೆ ಕುಶಾಲನಗರ ಚಿಕ್ಕತ್ತೂರು ಮೈದಾನದಲ್ಲಿ ಕ್ರಿಕೆಟ್ ಪಂದ್ಯವನ್ನು ಹಮ್ಮಿಕೊಂಡರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.