ಹನೂರಿನ ಗುಂಡಾಲ್ ಡ್ಯಾಂ ಬಳಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಸರತ್ತು

| Published : Jun 11 2024, 01:39 AM IST

ಸಾರಾಂಶ

ಹನೂರಿನ ಸಮೀಪದ ಗುಂಡಾಲ್ ಜಲಾಶಯದ ಬಳಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಹನೂರು ಸಮೀಪ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆ ಒತ್ತೊಯ್ಯಲು ಚಿರತೆ ದಾಳಿ, ರೈತರ ಆತಂಕಕನ್ನಡಪ್ರಭ ವಾರ್ತೆ ಹನೂರು

ಗುಂಡಾಲ್ ಜಲಾಶಯದ ಬಳಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.ಹನೂರು ಸಮೀಪದ ಗುಂಡಾಲ್ ಜಲಾಶಯದ ಬಳಿ ಬರುವ ರೈತ ಮಹೇಶ್ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಒತ್ತೊಯ್ಯಲು ದಾಳಿ ನಡೆಸಿದಾಗ ಪಕ್ಕದಲ್ಲಿ ಇದ್ದ ರೈತರು ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದಾಗ ಕೂಗಿಕೊಂಡಾಗ ಚಿರತೆ ಮೇಕೆಯನ್ನು ಬಿಟ್ಟು ಪರಾರಿಯಾಗಿದೆ.

ಭಯಬೀತರಾದ ರೈತರು: ಗುಂಡಾಲ್ ಜಲಾಶಯದ ಬಿ ಆರ್ ಟಿ ವಲಯ ಅರಣ್ಯ ಪ್ರದೇಶದಿಂದ ಬಂದಿರುವ ಚಿರತೆ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ರಾತ್ರಿ ಹಗಲಿನಲ್ಲಿ ಕಾಣಿಸಿಕೊಂಡು ನಾಯಿ ಮತ್ತು ಮೇಕೆ ಕುರಿಗಳನ್ನು ತಿಂದು ಹಾಕುತ್ತಿದ್ದು, ಈ ಬಗ್ಗೆ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯಲು ಒತ್ತಾಯಿಸಿದ್ದಾರೆ. ಸೂಕ್ತ ಪರಿಹಾರಕ್ಕೆ ಆಗ್ರಹ: ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಚಿರತೆ ರೈತರ ಸಾಕುಪ್ರಾಣಿಗಳನ್ನು ದಾಳಿ ಮಾಡಿ ಕೊಂದು ತಿಂದಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದು ಅರಣ್ಯ ಅಧಿಕಾರಿಗಳು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.

ಜಮೀನಿನಲ್ಲಿ ಜೋಳದ ಕಟಾವು ಮಾಡುತ್ತಿದ್ದಾಗ ಜೊತೆಯಲ್ಲೇ ಮೇಯುತ್ತಿದ್ದ ಮೇಕೆಯನ್ನು ನಮ್ಮ ಕಣ್ಣಮುಂದೆ ಚಿರತೆ ಬಂದು ಕಚ್ಚಿ ಒತ್ತೊಯ್ಯುತ್ತಿದ್ದಾಗ ಕೆಲಸ ಮಾಡುತ್ತಿದ್ದ ನಾವು ಕಿರುಚಾಡಿದಾಗ ಮೇಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದೆ. ಆದರೂ ಮೇಕೆ ಉಳಿಯಲಿಲ್ಲ ಸಾವನ್ನಪ್ಪಿದೆ. ಹೀಗಾಗಿ ಅರಣ್ಯ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆಹಿಡಿದು ಬೇರೆ ಬಿಡಬೇಕು.ಮಹೇಶ್ ,ರೈತ, ಗುಂಡಲ್ ಜಲಾಶಯ ಬಳಿ ಬರುವ ತೋಟದ ಮನೆ ನಿವಾಸಿ .

ಚಿರತೆಗೆ ಸೆರೆ ಹಿಡಿಯಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆ ಓಡಾಡುವ ಸ್ಥಳದಲ್ಲಿ ಕ್ಯಾಮರಾ ಮತ್ತು ಬೋನ್ ಗಳನ್ನುಇಡಲಾಗಿದೆ. ಹೀಗಾಗಿ ಜಿಪಿಎಸ್ ಅಳವಡಿಸಿರುವುದರಿಂದ ಚಿರತೆ ಓಡಾಡುವುದು ಇಲಾಖೆಗೆ ಮಾಹಿತಿ ಇದೆ. ಹಗಲು ರಾತ್ರಿ 40 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜನೆಗೊಳಿಸಲಾಗಿದೆ. ಹೀಗಾಗಿ ರೈತರು ಚಿರತೆ ಸೆರೆ ಹಿಡಿಯುವವರೆಗೆ ತೋಟದ ಮನೆಗಳಲ್ಲಿರುವ ಪುಟ್ಟ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಜೊತೆಗೆ ರೈತರು ಒಬ್ಬೊಬ್ಬರೇ ಓಡಾಡಬಾರದು ರಾತ್ರಿ ವೇಳೆಯಲ್ಲಿ ಯಾರೂ ಹೊರಗೆ ಬರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಜೊತೆಗೆ ಸಾಕು ಪ್ರಾಣಿಗಳನ್ನು ಸಹ ಸುರಕ್ಷತಾ ಸ್ಥಳದಲ್ಲಿ ಕಟ್ಟಿ ಹಾಕಬೇಕು ಜೊತೆಗೆ ಚಿರತೆ ಕಂಡು ಬಂದರೆ ತಕ್ಷಣ ಅರಣ್ಯ ಅಧಿಕಾರಿಗಳಿಗೆ ತಿಳಿಸಿದರೆ ಅಂತಹ ಸಂದರ್ಭದಲ್ಲಿ ರೈತರು ಗುಂಪು ಕೂಡದೆ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಹೀಗಾಗಿ ಈ ಭಾಗದಲ್ಲಿ ಸಂಚರಿಸುತ್ತಿರುವ ಚಿರತೆ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತಿರುವುದರಿಂದ ವಿಳಂಬವಾಗುತ್ತಿದೆ. ಹೀಗಾಗಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ ಕೂಡಲೇ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ವಾಸು, ವಲಯ ಅರಣ್ಯ ಅಧಿಕಾರಿ, ಬಿ ಆರ್ ಟಿ.