ಅರಣ್ಯ ಇಲಾಖೆಯಿಂದ ಕಾಡಾನೆಯ ನಿಯಂತ್ರಣ, ಸ್ಥಳಾಂತರ ಭರವಸೆ: ಎಂ.ಜಿ. ಸತ್ಯನಾರಾಯಣ

| Published : Jun 20 2025, 12:35 AM IST

ಅರಣ್ಯ ಇಲಾಖೆಯಿಂದ ಕಾಡಾನೆಯ ನಿಯಂತ್ರಣ, ಸ್ಥಳಾಂತರ ಭರವಸೆ: ಎಂ.ಜಿ. ಸತ್ಯನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಭಾಗದಲ್ಲಿ ಕಾಡಾನೆಯ ನಿಯಂತ್ರಣ ಮತ್ತು ಸ್ಥಳಾಂತರ ಕಾರ್ಯವನ್ನು ಮುಂದಿನ ೨ ವಾರದಲ್ಲಿ ಮಾಡುವುದಾಗಿ ಮಂಗಳೂರು ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಭರವಸೆ ನೀಡಿದ್ದಾರೆ. ಅವರ ಸ್ಪಂದನೆ ನಮಗೆ ವಿಶ್ವಾಸ ಮೂಡಿಸಿದೆ ಎಂದು ಭಾರತೀಯ ಕಿಸಾನ್ ಸಂಘದ ಮಂಗಳೂರು ವಿಭಾಗ ಅಧ್ಯಕ್ಷ ಎಂ.ಜಿ.ಸತ್ಯನಾರಾಯಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ ಮತ್ತು ಬೆಳ್ತಂಗಡಿ ತಾಲೂಕು ಪರಿಸರದಲ್ಲಿ ಹಲವು ಸಮಯದಿಂದ ಆನೆ ದಾಳಿಗೆ ಸಂಬಂಧಿಸಿ ಜೂ.೧೮ ರಿಂದ ಪರಿಶೀಲನೆ ನಡೆಸಿ ವರದಿ ಪಡೆದು ಕಾಡಾನೆಯ ನಿಯಂತ್ರಣ ಮತ್ತು ಸ್ಥಳಾಂತರ ಕಾರ್ಯವನ್ನು ಮುಂದಿನ ೨ ವಾರದಲ್ಲಿ ಮಾಡುವುದಾಗಿ ಮಂಗಳೂರು ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಭರವಸೆ ನೀಡಿದ್ದಾರೆ. ಅವರ ಸ್ಪಂದನೆ ನಮಗೆ ವಿಶ್ವಾಸ ಮೂಡಿಸಿದೆ ಎಂದು ಭಾರತೀಯ ಕಿಸಾನ್ ಸಂಘದ ಮಂಗಳೂರು ವಿಭಾಗ ಅಧ್ಯಕ್ಷ ಎಂ.ಜಿ.ಸತ್ಯನಾರಾಯಣ ತಿಳಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಪ್ರಾಣಿಗಳ ಹಾವಳಿಯಿಂದಾಗಿ ಕೃಷಿ ಉತ್ಪನ್ನಗಳು ಸಂಪೂರ್ಣವಾಗಿ ನಾಶವಾಗಿದೆ ಮತ್ತು ಅಲ್ಲಲ್ಲಿ ಜೀವ ಹಾನಿಯೂ ಆಗಿದೆ. ಈ ಕುರಿತು ಜೂ.೬ರಂದು ಪುತ್ತೂರಿನ ಅರಿಯಡ್ಕ ಗ್ರಾ.ಪಂ ಸಭಾಭವನದಲ್ಲಿ ದ.ಕ. ಜಿಲ್ಲಾ ಸಂತ್ರಸ್ತ ರೈತ ಸದಸ್ಯರ ಸಭೆ ನಡೆಸಿ ಜೂ.೭ಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿಸಿದ ಇಲಾಖೆಯ ಪ್ರಮುಖರಿಗೆ ಮನವಿ ಮಾಡಿದ್ದೇವೆ. ಕಾವು, ಅರಿಯಡ್ಕ, ಪೆರ್ಲಂಪಾಡಿ, ಮಾಡನ್ನೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ೬ ತಿಂಗಳಿನಿಂದ ಆನೆ ದಾಳಿ ಜಾಸ್ತಿ ಆಗಿದೆ ಎಂದರು.ಸಮಸ್ಯೆ ಕುರಿತು ಜೂ.೧೭ಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರ ಸಹಕಾರದೊಂದಿಗೆ ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಡಾ. ಕರಿಕಾಲನ್ ಅವರು ಆನೆ ದಾಳಿಯ ಪರಿಶೀಲನೆಗೆ ಒಪ್ಪಿದ್ದಾರೆ. ಕಾಡಾನೆಯ ನಿಯಂತ್ರಣ ಮತ್ತು ಸ್ಥಳಾಂತರ ಕಾರ್ಯವನ್ನು ಮುಂದಿನ ೨ ವಾರದಲ್ಲಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.ಈ ಮಧ್ಯೆ ಕಾಡಾನೆಯ ಹಾವಳಿಗೊಳಪಟ್ಟ ರೈತರ ಸಭೆಯನ್ನು ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಪುತ್ತೂರಿನಲ್ಲಿ ಕರೆದು ನೇರ ಮಾತುಕತೆ ಹಾಗು ಮಾಹಿತಿ ಪಡೆದುಕೊಳ್ಳುವ ಆಶ್ವಾಸನೆ ನೀಡಿದ್ದಾರೆ ಎಂದ ಅವರು ಮುಂದಿನ ದಿನ ದ.ಕ.ಜಿಲ್ಲಾ ಪರಿಸರದಲ್ಲಿ ರೈತ ವರ್ಗದವರಿಗೆ ವನ್ಯ ಪ್ರಾಣಿಗಳಿಂದ ತೊಂದರೆ ಆದರೆ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ಇವರನ್ನು ಸಂಪರ್ಕಿಸಿದರೆ ಇಲಾಖೆಯ ಮೂಲಕ ರಕ್ಷಣೆಯನ್ನು ಕೊಡುವುದಾಗಿ ಅರಣ್ಯಸಂರಕ್ಷಣಾಧಿಕಾರಿಯವರು ಮಾಹಿತಿ ನೀಡಿದ್ದಾರೆ ಎಂದರು.ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಪ್ರಸಾದ್, ಪುತ್ತೂರು ಅಧ್ಯಕ್ಷ ಜನಾರ್ಧನ ರೈ, ಸದಸ್ಯ ದಿವ್ಯಪ್ರಸಾದ್ ಕಾವು ಇದ್ದರು.