ಸಮಾಜದಲ್ಲಿ ಮಠಗಳು ಮಾಡುವ ಕಾರ್ಯ ದೊಡ್ಡದು- ಗುಂಜೀಕರ

| Published : Jun 20 2025, 12:35 AM IST

ಸಾರಾಂಶ

ಭಾರತ ದೇಶದಲ್ಲಿ ಹಲವಾರು ವರ್ಷಗಳಿಂದ ನಮ್ಮ ಮಠ ಮಾನ್ಯಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಬಹಳ ದೊಡ್ಡ ಕಾರ್ಯವೆಂದು ಜಿಲ್ಲಾ ಮಾಜಿ ನೌಕರರ ಸಂಘದ ಅಧ್ಯಕ್ಷ ರವಿ ಗುಂಜೀಕರ ಹೇಳಿದರು.

ನರಗುಂದ: ಭಾರತ ದೇಶದಲ್ಲಿ ಹಲವಾರು ವರ್ಷಗಳಿಂದ ನಮ್ಮ ಮಠ ಮಾನ್ಯಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಬಹಳ ದೊಡ್ಡ ಕಾರ್ಯವೆಂದು ಜಿಲ್ಲಾ ಮಾಜಿ ನೌಕರರ ಸಂಘದ ಅಧ್ಯಕ್ಷ ರವಿ ಗುಂಜೀಕರ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಗವಿಮಠದ ಜಗದ್ಗುರು ಯಚ್ಚರಸ್ವಾಮಿಗಳ ಗವಿಮಠದಲ್ಲಿ ಕರ್ತೃ ಜಗದ್ಗುರು ಶ್ರೀ ಯಚ್ಚರಸ್ವಾಮಿಗಳ 189ನೇ ಆರಾಧನಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮೌನೇಶ್ವರ ಪುರಾಣ ಪ್ರವಚನ ಮಂಗಲೋತ್ಸವ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮಠಗಳು ಕೇವಲ ಧಾರ್ಮಿಕತೆಗೆ ಸೀಮಿತವಾಗದೆ, ಸಮಾಜದ ಒರೆ ಕೋರೆಗಳನ್ನು ತಿದ್ದುವಲ್ಲಿ ಕೆಲಸ ಮಾಡಬೇಕು ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.

ಶಿರೋಳ ಗವಿಮಠವು ಕೇವಲ ಧಾರ್ಮಿಕತೆಗೆ ಸೀಮಿತಗೊಳ್ಳದೆ ಸಾಮಾಜಿಕ ಸೇವೆಯಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಲಿಂಗನಬಂಡಿ ಮೌನೇಶ್ವರ ಮಠದ ಉಳವೆಂದ್ರ ಶ್ರೀಗಳು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತಂದೆ, ತಾಯಿಯ ತ್ಯಾಗವನ್ನು ಅರ್ಥ ಮಾಡಿಕೊಂಡು ಬದುಕನ್ನು ನಿರ್ಮಿಸಿಕೊಳ್ಳಬೇಕು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಗಲಿರುಳು ದುಡಿಯುತ್ತಾರೆ, ಅವರ ಬೆವರು ಸುರಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಾರೆ, ಹಾಗಾಗಿ ಮಕ್ಕಳು ಕೇವಲ ಪುಸ್ತಕದ ಕತೆಗಳನ್ನು ಓದದೇ ತಮ್ಮ ತಂದೆ ತಾಯಿಯ ಜೀವನವನ್ನು ಚೆನ್ನಾಗಿ ಓದಿದರೆ ಮಾತ್ರ ಆದರ್ಶ ವ್ಯಕ್ತಿಯಾಗಿ ನಿರ್ಮಾಣಗೊಳ್ಳುತ್ತಾನೆ ಎಂದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ 52 ವಿದ್ಯಾರ್ಥಿಗಳಗೆ ಶ್ರೀಮಠದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗವಿಮಠದ ಅಭಿನವ ಯಚ್ಚರ ಶ್ರೀಗಳು, ಆರ್.ಡಿ. ಕಡ್ಲಿಕೊಪ್ಪ, ಸಿದ್ದು ಪಾಟೀಲ, ಪ್ರಕಾಶ ಗೌಡ ತಿರಕನಗೌಡ್ರ, ರಾಜು ಕಲಾಲ, ಲಾಲಸಾಬ ಅರಗಂಜಿ, ಅಮೀರ ನಾಯಕ್ ಫಕ್ಕೀರಪ್ಪ ಹದಲಿ, ದೊಡ್ಡಸಿದ್ದಪ್ಪ ಪತ್ತಾರ, ವೀರಭದ್ರಪ್ಪ ಕಮ್ಮಾರ, ಶ್ರೀನಿವಾಸ ಇನಾಮದಾರ, ಮಲ್ಲಪ್ಪ ಚಿಕ್ಕನರಗುಂದ, ಈರಣ್ಣ ದಿಂಡಿ, ಎಸ್.ವೈ. ಮುಲ್ಕಿಪಾಟೀಲ, ಶ್ರೀಕಾಂತ ದೊಡ್ಡಮನಿ, ಮೈಲಾರಪ್ಪ ಹೂಗಾರ, ಪ್ರಭಾಕರ ಉಳ್ಳಾಗಡ್ಡಿ ಸೇರಿದಂತೆ ಮುಂತಾದವರು ಇದ್ದರು.

ವಿನಾಯಕ ಶಾಲಾದಾರ ಸ್ವಾಗತಿಸಿದರು. ಬಾಪುಗೌಡ ತಿಮ್ಮನಗೌಡ ನಿರೂಪಿಸಿ, ವಂದಿಸಿದರು.