ಗುಡ್ಡೆಹೊಸೂರು ಗ್ರಾಪಂ ದೊಡ್ಡಬೆಟ್ಟಗೇರಿ ಗ್ರಾಮದ ಅರಣ್ಯ ಹಕ್ಕು ಸಮಿತಿ ಗ್ರಾಮ ಸಭೆ ಗ್ರಾಪಂ ಸಭಾಂಗಣ ನಡೆಯಿತು.

ಕುಶಾಲನಗರ: ಗುಡ್ಡೆಹೊಸೂರು ಗ್ರಾಪಂ ದೊಡ್ಡಬೆಟ್ಟಗೇರಿ ಗ್ರಾಮದ ಅರಣ್ಯ ಹಕ್ಕು ಸಮಿತಿ ಗ್ರಾಮ ಸಭೆ ಗ್ರಾಪಂ ಸಭಾಂಗಣ ನಡೆಯಿತು.

ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾದ ಸುಮಾ ಬಿ.ಆರ್. ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸೌಮ್ಯ ಕೆ., ಉಪಾಧ್ಯಕ್ಷ ಪ್ರವೀಣ್ ಕುಮಾರ್, ವಾರ್ಡ್ ಸದಸ್ಯರಾದ ಲಕ್ಷ್ಮಣ್ ಯಶೋಧ ಹಾಗೂ ಚಿದಾನಂದ್ ಉಪಸ್ಥಿತರಿದ್ದರು.

ಪಿಡಿಒ ಸುಮೇಶ್ ಎಂ.ಆರ್. ಅವರು ಅರಣ್ಯ ಹಕ್ಕು ಕಾಯ್ದೆಯಡಿ ಸ್ವಾಧೀನ ಪತ್ರವನ್ನು ಪಡೆಯಲು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ಕುರಿತು ಮಾಹಿತಿ ನೀಡಿದರು. ತದನಂತರ ದಾಖಲಾತಿಗಳನ್ನು ಪರಿಶೀಲಿಸಿ 28 ಅರ್ಜಿಗಳನ್ನು ಕ್ರಮಬದ್ಧವಾಗಿದೆ ಎಂದು ಪರಿಗಣಿಸಿ ಅನುಮೋದನೆಗಾಗಿ ಮುಂದಿನ ಹಂತಕ್ಕೆ ರವಾನಿಸಲು ತೀರ್ಮಾನಿಸಲಾಯಿತು. ಕಚೇರಿ ಸಹಾಯಕ ಕೌಶಿಕ್ ಸ್ವಾಗತಿಸಿದರು.