ಅಟಲಬಿಹಾರಿ ವಾಜಪೇಯಿ ಶಾಲೆಯಲ್ಲಿ ಮಕ್ಕಳ ಸಂಸತ್ ರಚನೆ

| Published : Jul 26 2024, 01:49 AM IST

ಸಾರಾಂಶ

ಅಟಲ್ ಬಿಹಾರಿ ಶಾಲೆಯ ವಿದ್ಯಾರ್ಥಿ ಮಹೇಶ ಸಾಥಿಹಾಳ ನಾಯಕನಾಗಿ ಹಾಗೂ ವಿದ್ಯಾರ್ಥಿನಿ ಸಮನ್ವಿತಾ ಪೂಜಾರಿ ನಾಯಕಿಯಾಗಿ ಆಯ್ಕೆಯಾಗಿ, ಶಾಲಾ ಕರ್ತವ್ಯಗಳನ್ನು ಪಾಲಿಸುವುದಾಗಿ ಮುಖ್ಯ ಗುರುಗಳ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಅಟಲಬಿಹಾರಿ ವಾಜಪೇಯಿ ಶಾಲೆಯಲ್ಲಿ ಮಕ್ಕಳ ಸಂಸತ್ ರಚಿಸಲಾಯಿತು. ಮಕ್ಕಳು, ಮಕ್ಕಳಿಂದ, ಮಕ್ಕಳಿಗಾಗಿ ಆಯ್ಕೆಯಾದ ಸದಸ್ಯರ ಒಂದು ಸಂಸ್ಥೆ ಅಥವಾ ಸಂಘವೇ ಶಾಲಾ ಮಕ್ಕಳ ಸಂಸತ್ ಆಗಿದೆ. ಮಕ್ಕಳ ಸಂಸತ್‌ನಲ್ಲಿ ಮಕ್ಕಳೇ ಸಂಪೂರ್ಣ ಭಾಗೀದಾರರಾಗಿರುತ್ತಾರೆ. ತಮ್ಮ ಹಕ್ಕುಗಳನ್ನು ಪಡೆಯುವ ಮೂಲಕ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಕಲಿಯುವ ವೇದಿಕೆಯಾಗಿದೆ. ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಮೌಲ್ಯವಾಗಿದೆ ಎಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಯಿತು.

ಅಟಲ್ ಬಿಹಾರಿ ಶಾಲೆಯ ವಿದ್ಯಾರ್ಥಿ ಮಹೇಶ ಸಾಥಿಹಾಳ ನಾಯಕನಾಗಿ ಹಾಗೂ ವಿದ್ಯಾರ್ಥಿನಿ ಸಮನ್ವಿತಾ ಪೂಜಾರಿ ನಾಯಕಿಯಾಗಿ ಆಯ್ಕೆಯಾಗಿ, ಶಾಲಾ ಕರ್ತವ್ಯಗಳನ್ನು ಪಾಲಿಸುವುದಾಗಿ ಮುಖ್ಯ ಗುರುಗಳ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಪದಾಧಿಕಾರಿಗಳಾದ ಬಸವರಾಜ ಸುಗೂರ, ಸದಾನಂದ ದೇಸಾಯಿ, ಎಂ.ಎಂ.ಸಜ್ಜನ, ಶಿವಾನಂದ ನೀಲಾ, ಡಾ.ಎಚ್.ವೆಂಕಟೇಶ, ಶಾಲಾ ಮುಖ್ಯೋಪಾಧ್ಯಾಯಿನಿ ಐಶ್ವರ್ಯ ಸಂಗಮ್ ಹರ್ಷ ವ್ಯಕ್ತಪಡಿಸಿದರು.