ಬಂದಳಿಕೆ ಗ್ರಾಮಕ್ಕೆ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಭೇಟಿ

| Published : Feb 01 2025, 12:00 AM IST

ಸಾರಾಂಶ

ಶಿರಾಳಕೊಪ್ಪ: ಭಾರತದಲ್ಲಿ ಕೇವಲ ೩ ಜನ ಮಹಿಳೆಯರು ಪ್ರಾಚೀನ ಕಾಲದಲ್ಲಿ ಉತ್ತಮ ಆಡಳಿತಗಾರರಾಗಿ ಪ್ರಸಿದ್ಧಿ ಪಡೆದಿದ್ದು, ಅದರಲ್ಲಿ ಕರ್ನಾಟಕದ ಬಂದಳಿಕೆ ಗ್ರಾಮದ ಜಕ್ಕಿಯಬ್ಬೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಮಧ್ಯಪ್ರದೇಶದ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಹೇಳಿದರು.

ಶಿರಾಳಕೊಪ್ಪ: ಭಾರತದಲ್ಲಿ ಕೇವಲ ೩ ಜನ ಮಹಿಳೆಯರು ಪ್ರಾಚೀನ ಕಾಲದಲ್ಲಿ ಉತ್ತಮ ಆಡಳಿತಗಾರರಾಗಿ ಪ್ರಸಿದ್ಧಿ ಪಡೆದಿದ್ದು, ಅದರಲ್ಲಿ ಕರ್ನಾಟಕದ ಬಂದಳಿಕೆ ಗ್ರಾಮದ ಜಕ್ಕಿಯಬ್ಬೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಮಧ್ಯಪ್ರದೇಶದ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಹೇಳಿದರು.ಪಟ್ಟಣ ಸಮೀಪದ ಬಂದಳಿಕ್ಕೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಅವರು ಮಾತನಾಡಿದರು.ರಾಜವಂಶದ ಮಹಿಳೆಯರು ಸುಲಭವಾಗಿ ಆಡಳಿತವನ್ನು ಮಾಡಬಹುದು, ಆದರೆ ಸಾಮಾನ್ಯ ಕುಟುಂಬದಿಂದ ಬಂದು ಆಡಳಿತ ನಡೆಸಿದ ಗಟ್ಟಿಗಿತ್ತಿ ಜಕ್ಕಿಯಬ್ಬೆ. ಇಂತಹ ಮಹಿಳೆ ಕಟ್ಟಿಸಿದ ಶಾಂತಿನಾಥ ಬಸದಿ ಹಾಗೂ ಈ ನಾಗರ ಕೆರೆಯನ್ನು ವೀಕ್ಷಿಸಲು ತಾವು ಬಂದಿರುವುದಾಗಿ ತಿಳಿಸಿದರು.

ಬಳಿಕ ಬಂದಳಿಕೆಯ ತ್ರಿಮೂರ್ತಿ ನಾರಾಯಣ, ಆನೇಕಲ್ ಸೋಮೇಶ್ವರ ಸೇರಿದಂತೆ ಹಲವಾರು ವೀರಗಲ್ಲು, ಸಿಡಿತಲೆಗಳು, ಮಾಸ್ತಿ ಕಲ್ಲುಗಳನ್ನು ಅಧ್ಯಯನ ಮಾಡಿದರು. ನಂತರ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅಮೂಲ್ಯವಾದ ಶಾಸನಗಳು ಮಳೆನೀರು ಹಾಗೂ ಬಿಸಿಲಿಂದ ನಶಿಸುತ್ತಾ ಬಂದಿದ್ದು, ಅದನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸುವಂತೆ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಸೂಚಿಸಿದರು.ನಂತರ ತಾಳಗುಂದ ಹಾಗೂ ಬಳ್ಳಿಗಾವಿ ಗ್ರಾಮದಲ್ಲಿರುವ ಐತಿಹಾಸಿಕ ದೇವಸ್ಥಾನಗಳ ಶಿಲ್ಪಕಲಾ ವೈಬೋಗವನ್ನು ಕಣ್ಣು ತುಂಬಿಕೊಂಡು ಮಂತ್ರ ಮುಗ್ಧರಾದರು. ಬಳ್ಳಿಗಾವಿಯಲ್ಲಿ ನಿರ್ವಹಣೆ ಮಾಡುತ್ತಿರುವ ಪ್ರಾಚೀನ ವಸ್ತು ಸಂಗ್ರಹಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂದೀಪ್, ಚನ್ನರಾಯಪಟ್ಟಣದ ವಿಧಾನ ಪರಿಷತ್ ಮಾಜಿ ಸದಸ್ಯ ರಂಗಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ, ಬಗರ್ ಹುಕುಂ ಕಮಿಟಿ ಸದಸ್ಯ ಸುನಿಲ್ ಜೆ ಫಕೀರಪ್ಪ, ಗ್ರಾಪಂ ಸದಸ್ಯ ಲತಾ, ಕಾಂಗ್ರೆಸ್ ಪಕ್ಷದ ಮಾಧ್ಯಮ ಪ್ರಮುಖ ಉಮೇಶ್ ಮರವಳ್ಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.