ಟೂಡಾ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ನಿಧನ

| Published : Aug 14 2024, 12:47 AM IST

ಟೂಡಾ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಟೂಡಾ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ನಿಧನ

ತುಮಕೂರು: ನಗರಸಭೆ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ರೆಡ್ಡಿಚಿನ್ನಯಲ್ಲಪ್ಪ

ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.ರೆಡ್ಡಿ ಚಿನ್ನಯಲ್ಲಪ್ಪ (74) ಅವರು ಜುಲೈ 29 ರಂದು ಬೆಂಗಳೂರಿನ ತಮ್ಮ ಪುತ್ರಿಯ ನಿವಾಸದಲ್ಲಿ ಮೆಟ್ಟಿಲು ಹತ್ತುವಾಗ ಆಕಸ್ಮಿಕವಾಗಿ ಜಾರಿಬಿದ್ದಿದ್ದು, ತಲೆಗೆ ಪೆಟ್ಟಾಗಿತ್ತು. ಕೂಡಲೇ ಅವರನ್ನು ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ರೆಡ್ಡಿ ಅವರು 1970 ರ ದಶಕದಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ನಾಯಕರಾಗಿ ಗುರುತಿಸಲ್ಪಟ್ಟಿದ್ದರು. ಆಗಿನ ಲೋಕಸಭಾ ಸದಸ್ಯ ಕೆ.ಲಕ್ಕಪ್ಪ ಅವರ ಆಪ್ತರಾಗಿ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜನಪ್ರಿಯರಾದರು. ಎಂ.ಎ. ಪದವೀಧರರಾಗಿದ್ದ ಅವರು 1983 ರಲ್ಲಿ ಶ್ರೀರಾಮನಗರ ವಾರ್ಡ್ನಿಂದ ತುಮಕೂರು ನಗರಸಭೆಗೆ ವಿಜೇತರಾಗಿ, 1948 ರಲ್ಲಿ ನಗರಸಭೆಯ ಅಧ್ಯಕ್ಷರಾಗಿ ತಮ್ಮ ದಕ್ಷ ಕಾರ್ಯನಿರ್ವಹಣೆಯಿಂದ ಕೀರ್ತಿಗಳಿಸಿದರು. 2000 ನೇ ಇಸವಿಯಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡು ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ತಮ್ಮದೇ ಕೊಡುಗೆ ನೀಡಿದ್ದ ರೆಡ್ಡಿ ಅವರು, ಪಕ್ಷದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಸ್ಫುರದ್ರೂಪಿಯಾಗಿದ್ದ ರೆಡ್ಡಿಯವರು ಒಂದು ಕಾಲದಲ್ಲಿ ಚಲನಚಿತ್ರ ರಂಗಕ್ಕೂ ಆಕರ್ಷಿತರಾಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಾಲೇಜುರಂಗ ಚಿತ್ರದಲ್ಲಿ ಅಭಿನಯಿಸಿದ್ದರು. ನಂತರ ಫಲಿತಾಂಶ ಚಿತ್ರದಲ್ಲಿ ಜೈಜಗದೀಶ್ ಜೊತೆ ನಟಿಸಿದ್ದರು. ಜಾಲ ಎಂಬ ಚಿತ್ರದಲ್ಲಿ ನಾಯಕನಟರಾಗಿಯೂ ಅಭಿನಯಿಸಿದ್ದರು.

ಶ್ರದ್ಧಾಂಜಲಿ ಸಲ್ಲಿಸಿದ ಮುಖಂಡರು

ನಿಧನರಾದ ಟೂಡಾ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಹಿಂದುಳಿದ ವರ್ಗಗಳ ಒಕ್ಕೂಟದ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕರು ರೆಡ್ಡಿ ಅವರ ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕತೆ ನೆನಪಿಸಿಕೊಂಡು ನುಡಿ ನಮನ ಸಲ್ಲಿಸಿದರು. ಈ ವೇಳೆ ಗೌರವಾಧ್ಯಕ್ಷ ಟಿ.ಎನ್. ಮಧುಕರ್, ಅಧ್ಯಕ್ಷ ಧನಿಯಕುಮಾರ್ , ಪಿ. ಮೂರ್ತಿ ಚಿ. ನಿ. ಪುರುಷೋತ್ತಮ್ , ಹೆಬ್ಬೂರು ಶ್ರೀನಿವಾಸಮೂರ್ತಿ, ಡಿ. ಎಂ. ಸತೀಶ್, ನಿರ್ದೇಶಕರು ಹಾಜರಿದ್ದ ರು.

-