ದೇಶಾಭಿಮಾನ ಜಾಗೃತಿಗಾಗಿ ಹರ್‌ ಘರ್‌ ತಿರಂಗಾ

| Published : Aug 14 2024, 12:47 AM IST

ದೇಶಾಭಿಮಾನ ಜಾಗೃತಿಗಾಗಿ ಹರ್‌ ಘರ್‌ ತಿರಂಗಾ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯೋತ್ಸವದ ದಿನಾಚರಣೆ ಸಂಭ್ರಮದಲ್ಲಿ ದೇಶಾಭಿಮಾನದ ಜಾಗೃತಿ ಮೂಡಿಸಲು ಆ.೧೩ ರಿಂದ ೧೫ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ ಕೋರಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸ್ವಾತಂತ್ರ್ಯೋತ್ಸವದ ದಿನಾಚರಣೆ ಸಂಭ್ರಮದಲ್ಲಿ ದೇಶಾಭಿಮಾನದ ಜಾಗೃತಿ ಮೂಡಿಸಲು ಆ.೧೩ ರಿಂದ ೧೫ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ ಕೋರಿದರು.

ಪಟ್ಟಣದ ವಾಯುಪುತ್ರ ಸೌಹಾರ್ದ ಬ್ಯಾಂಕಿನ ಮೇಲೆ ಧ್ವಜಾರೊಹಣ ನೇರವೇರಿಸಿ ಮಾತನಾಡಿದ ಅವರು, ೭೫ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೂಡಾ ಹರ್ ಘರ್ ತಿರಂಗಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲ ಶಾಲಾ ಕಾಲೇಜು, ಸಂಘ ಸಂಸ್ಥೆ, ಜತೆಗೆ ಮನೆಗಳಲ್ಲಿ ಧ್ವಜ ಹಾರಿಸುವ ವೇಳೆ ಯಾವುದೇ ಧ್ವಜಕ್ಕೆ ಅವಮಾನವಾಗದಂತೆ ನೋಡಿಕೊಳ್ಳುವುದು ಎಲ್ಲ ಜವಾಬ್ದಾರಿಯಾಗಿದೆ ಎಂದರು.

ಗಣಿ ಉದ್ಯಮಿ ಎಂ.ಎಂ.ವಿರಕ್ತಮಠ ಮಾತನಾಡಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಭಾರತ ಧ್ವಜ ಸಂಹಿತೆ ಪ್ರಕಾರ ಧ್ವಜಾರೋಹಣ ನಿಯಮಗಳನ್ನು ಪಾಲಿಸಬೇಕು. ಸೂರ್ಯಾಸ್ತದವರೆಗೆ ಮಾತ್ರ ಧ್ವಜ ಹಾರಿಸಬೇಕು. ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದರು.

ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ರಾಷ್ಟ್ರಧ್ವಜ ಆಯತವಾಗಿರಬೇಕು, ಮನೆಯ ಅತೀ ಎತ್ತರದ ಸ್ಥಳದಲ್ಲಿ ಹಾರಿಸಬೇಕು, ಧ್ವಜಸ್ತಂಭ ಯಾವ ಕಡೆಗೂ ವಾಲಿರಬಾರದು. ಧ್ವಜಕ್ಕಿಂತ ಎತ್ತರವಾಗಿ, ಸಮಾನವಾಗಿ ಹಾಗೂ ಬಲಗಡೆ ಯಾವುದೇ ಧ್ವಜ ಇರಬಾರದು, ಹರಿದ ಧ್ಜಜಗಳನ್ನು ಬಳಸಬಾರದು, ಕೇಸರಿ ಬಣ್ಣ ಮೇಲೆ ಇರುವಂತೆ ನೋಡಿಕೊಳ್ಳಬೇಕು ಎಂದರು.

ಈ ವೇಳೆ ರಾಜ್ಯ ಮೀನುಗಾರ ಪ್ರಕೋಷ್ಟ ಸಂಚಾಲಕ ನಾಗಪ್ಪ ಅಂಬಿ, ಕೆಎಂಎಫ್ ನಿರ್ದೇಶಕ ರಾಜುಗೌಡ ಪಾಟೀಲ, ವ್ಹಿ.ಎಂ.ತೆಗ್ಗಿ, ಶಿವಪ್ಪ ಚೌದರಿ, ಬಿ.ಎಲ್.ಬಬಲಾದಿ, ವಿರೇಶ ಪಂಚಕಟ್ಟಿಮಠ, ಹೊಳಬಸು ಕಾಜಗಾರ, ಸಿದ್ರಾಮಪ್ಪ ದೇಸಾಯಿ, ಕೆ.ಬಿ.ಮಾಳಿ, ಚಂಬಣ್ಣ ಕಟಗೇರಿ, ಗೋಪಾಲಗೌಡ ಪಾಟೀಲ, ಸಂಗಮೇಶ ಪಲ್ಲೇದ, ಆನಂದ ಹವಳಖೋಡ, ಲೋಕಣ್ಣ ಮುದ್ದಾಪುರ, ವಿಜಯ ದೇಸಾಯಿ, ಸುರೇಶ ಹುಗ್ಗಿ, ಅರುಣ ಮುಧೋಳ ಇತರರು ಇದ್ದರು.