ಸಾರಾಂಶ
- ವಿಶ್ವ ಅಂಗಾಂಗ ದಾನ ದಿನಾಚರಣೆ । ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಕ್ತದಾನ, ವಿದ್ಯಾದಾನ, ನೇತ್ರದಾನ, ಅನ್ನದಾನ ಇವುಗಳಿಗೆ ಹಿಂದೆ ಮಹತ್ವ ಇತ್ತು. ಈಗ ಅಂಗಾಂಗ ದಾನ ಶ್ರೇಷ್ಠ ವಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ತೇಗೂರು ಸಮೀಪದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಹನಾ ಜೆ.ರೂಬಿನ್ ಸಮಾಜ ಸೇವಾ ಟ್ರಸ್ಟ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಅಂಗಾಂಗ ದಾನ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟ್ರಸ್ಟ್‌ನ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು.ಮತ್ತೊಬ್ಬರ ಬಾಳಲ್ಲಿ ಬೆಳಕು ಕಾಣಬೇಕೆಂಬ ದೃಷ್ಟಿಯಿಂದ ನೇತ್ರದಾನ ಪ್ರಾರಂಭ ಮಾಡಲಾಯಿತು. ಸಮಾಜದಲ್ಲಿ ಈಗ ಮೌಢ್ಯತೆಯಿಂದ ಜನರು ಹೊರ ಬಂದು ಮೃತದೇಹ ಮಣ್ಣು ಅಥವಾ ಬೆಂಕಿಗೆ ಆಹುತಿ ಆಗುತ್ತದೆ ಎಂಬುದನ್ನು ಅರಿತು ಪ್ರತಿಯೊಬ್ಬರೂ ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.ಅಂಗಾಂಗ ಕಸಿ ಮಾಡಿ, ಬೆಂಗಳೂರಿಗೆ ಕಳುಹಿಸಿಕೊಟ್ಟದ್ದು ನಮ್ಮ ಸರ್ಕಾರಿ ಜಿಲ್ಲಾಸ್ಪತ್ರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಮೃತ ಸಹನಾ ಸಹನೆ ತುಂಬಿದ ಮಹಿಳೆಯಾಗಿ ಕೋವಿಡ್ ಸಂದರ್ಭದಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಸಮಾಜದಲ್ಲಿ ಜನ ಸೇವೆ ಮಾಡಿದ ಇವರಿಗೆ ಭಗವಂತ ಆಯಸ್ಸು ನೀಡಲಿಲ್ಲ ಎಂದು ವಿಷಾಧಿಸಿದರು.ಇಂತಹ ಸಮಾಜ ಸೇವಕಿ ಹೆಸರಿನಲ್ಲಿ ಟ್ರಸ್ಟ್ ಒಂದನ್ನು ರಚಿಸಿ ಕುಟುಂಬಸ್ತರು ಸಮಾಜದ ಕಟ್ಟ ಕಡೆ ವ್ಯಕ್ತಿಗೆ ಸ್ಪಂದಿಸು ತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಇಂದು ನಾವು ಬದುಕಿದ್ದೇವೆ, ನಿಧನರಾದ ಬಳಿಕ ನಮ್ಮ ದೇಹದ ಅಂಗಾಂಗ ದಾನದಿಂದ ನಾಲ್ಕು ಜನರ ಬದುಕಿಗೆ ಉಪಯೋಗವಾದರೆ ಅದಕ್ಕಿಂತ ಶ್ರೇಷ್ಠವಾದುದು ಇನ್ನಾವುದೂ ಇಲ್ಲ ಎಂದು ತಿಳಿಸಿದರು.ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಮುಂದೆ ವೈದ್ಯರಾದ ಬಳಿಕ ಅಂಗಾಂಗ ದಾನ ಮಾಡುವಂತೆ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.ವೈದ್ಯಕೀಯ ಕಾಲೇಜಿಗೆ ಅಗತ್ಯವಾಗಿ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದೊಂದಿಗೆ ಚರ್ಚಿಸಿ ಇವುಗಳನ್ನು ಈಡೇರಿಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.ಸಹನಾ ಜೆ.ರೂಬಿನ್ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರೂಬಿನ್ ಮೊಸಸ್ ಅಧ್ಯಕ್ಷತೆ ವಹಿಸಿದ್ದರು, ತೇಗೂರಿನ ಬಿ.ವೈ.ವಿ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ. ಎಂ.ಆರ್. ಹರೀಶ್, ಜಿಲ್ಲಾ ಸರ್ಜನ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಸಿ. ಮೋಹನ್ ಕುಮಾರ್, ಕೆಪಿಎಂಇಎ ಅಧ್ಯಕ್ಷ ಡಾ.ಡಿ.ಎಲ್. ವಿಜಯ್‌ಕುಮಾರ್ ಉಪಸ್ಥಿತರಿದ್ದರು. 13 ಕೆಸಿಕೆಎಂ 4
ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಅಂಗಾಂಗ ದಾನ ದಿನಾಚರಣೆಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಡಾ. ಹರೀಶ್, ಡಾ. ಮೋಹನ್‌ಕುಮಾರ್, ಡಾ. ವಿಜಯಕುಮಾರ್, ರೂಬಿನ್ ಮೊಸಸ್ ಇದ್ದರು.-----------------------