ಸಾರಾಂಶ
ಕಾಂಗ್ರೆಸ್‌ನಲ್ಲಿ ಶ್ರಮಪಟ್ಟವರಿಗೆ ಸ್ಥಾನ ನಿಶ್ಚಿತ
ಕನ್ನಡಪ್ರಭ ವಾರ್ತೆ ಲೋಕಾಪುರ ಕಾಂಗ್ರೆಸ್ ಪಕ್ಷದಲ್ಲಿ ಶ್ರಮಪಟ್ಟವರಿಗೆ ಸೂಕ್ತ ಸ್ಥಾನಮಾನ ಸಿಗುವುದು ನಿಶ್ಚಿತ ಎಂದು ಬಿಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು.
ವಿಜಯಪೂರ-ಬಾಗಲಕೋಟ ಜಿಲ್ಲೆಗೆ ನೂತನವಾಗಿ ಕೆಎಂಎಫ್ ನಿರ್ದೇಶಕರಾಗಿ ನೇಮಕಗೊಂಡ ಲಕ್ಷ್ಮಣ ಮಾಲಗಿ ಅವರನ್ನು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ತಳಮಟ್ಟದಿಂದ ಬಂದ ಹಾಗೂ ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿದ ಕಾರ್ಯಕರ್ತರಿಗೆ ಅಧಿಕಾರ ಕೊಡುವ ಪಕ್ಷ ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಪಕ್ಷ ಸೇವಾಭಾವವನ್ನು ಅರ್ಹತೆಯಾಗಿ ಪರಿಗಣಿಸಿ ಸ್ಥಾನಮಾನ ನೀಡುತ್ತದೆ ಹೊರತು ಆರ್ಥಿಕ ಬಲ ನೋಡಿ ಅಲ್ಲ ಎಂದು ಹೇಳಿದರು.ಕಾಂಗ್ರೆಸ್ ಯುವ ಮುಖಂಡ ಗುರುರಾಜ ಉದಪುಡಿ, ಗ್ರಾಪಂ ಮಾಜಿ ಅಧ್ಯಕ್ಷ ಬೀರಪ್ಪ ಮಾಯಣ್ಣವರ, ಪಿಕೆಪಿಎಸ್ ಅಧ್ಯಕ್ಷ ಆನಂದ ಹಿರೇಮಠ, ಬಸವರಾಜ ಕಾತರಕಿ ಷಣ್ಮುಖಪ್ಪ ಕೋಲ್ಹಾರ, ಗೋವಿಂದಪ್ಪ ಕೌಲಗಿ, ಶಿವಯೋಗಿ ಗಂಗಣ್ಣವರ, ಮಾನಿಂಗಪ್ಪ ಹುಂಡೇಕಾರ, ಕೃಷ್ಣಾ ಜಟ್ಟೆನ್ನವರ, ಕೃಷ್ಣಾ ಹೂಗಾರ, ರೆಹಮಾನ್ ತೊರಗಲ್, ಪ್ರಭು ಬೋಳಿಶೆಟ್ಟಿ, ಶಬ್ಬೀರ್ ಗುಳೇದಗುಡ್ಡ, ಮುತ್ತಪ್ಪ ಗಡ್ಡದವರ, ಸಿದ್ರಾಮಪ್ಪ ಪತ್ತಾರ, ಇತರರು ಇದ್ದರು.